ಇನ್ನೂ ಟೀಸರ್ ಬಿಟ್ಟಿಲ್ಲ ಆದ್ರೂ ದೇಶದಲ್ಲೇ ಯಾವ ಚಿತ್ರವೂ ಮಾಡಿರದ ರೆಕಾರ್ಡ್ ಮಾಡಿದ ಕೆಜಿಎಫ್2!

Date:

ಕೆಜಿಎಫ್ 2.. ಇಡೀ ದೇಶವೇ ಈ ಚಿತ್ರಕ್ಕೆ ತುದಿಗಾಲಿನಲ್ಲಿ ಕಾಯುತ್ತಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಈ ವೇಳೆಗೆ ಕೆಜಿಎಫ್ 2 ತೆರೆಕಂಡು ದಾಖಲೆ ಮೇಲೆ ದಾಖಲೆ ಬರೆದಾಗಿರುತ್ತಿತ್ತು. ಆದರೆ ಕೊರೊನ ವೈರಸ್ ನಿಂದಾಗಿ ಈ ಚಿತ್ರವೂ ಸಹ ಕೊಂಚ ಲೇಟಾಗಿ ಬರಲಿದೆ. ಇನ್ನೂ ಕರೋನವೈರಸ್ ಬಂದರೂ ಸಹ ಕೆಜಿಎಫ್ ರೆಕಾರ್ಡ್ ಬೇಟೆ ನಿಂತಿಲ್ಲ. ಟೀಸರ್ ಬಿಡುಗಡೆಯಾಗುವ ಮುನ್ನವೇ ದೊಡ್ಡದೊಂದು ರೆಕಾರ್ಡನ್ನು ಕೆಜಿಎಫ್ 2 ಮಾಡಿದೆ.

 

 

ಹೌದು ನಾಳೆ (ಜ.8) ಕೆಜಿಎಫ್ ಚಾಪ್ಟರ್ 2ರ ಟೀಸರ್  ಬಿಡುಗಡೆಯಾಗುತ್ತಿದೆ. ಅದಕ್ಕೂ ಮುನ್ನ ಭಾರತದಲ್ಲಿಯೇ ಯಾವ ಚಿತ್ರವೂ ಮಾಡಿರದ ರೆಕಾರ್ಡ್ ಇದೀಗ ಕೆಜಿಎಫ್ ಪಾಲಾಗಿದೆ. ಹೌದು ಯಾವುದೇ ರೀತಿಯ ಟೀಸರ್ ಬಿಡುಗಡೆ ಮಾಡುವ ಮುನ್ನವೇ ಬುಕ್ ಮೈ ಶೋ ಅಪ್ಲಿಕೇಶನ್ ನಲ್ಲಿ 2 ಲಕ್ಷ ಇಂಟರೆಸ್ಟ್ ಗಳನ್ನು ಪಡೆದುಕೊಂಡ ಭಾರತದ ಮೊದಲನೆಯ ಮತ್ತು ಏಕೈಕ ಚಿತ್ರ ಕೆಜಿಎಫ್ ಚಾಪ್ಟರ್2..!

 

ಕೆಜಿಎಫ್ ಮಾಡಿರುವ ಈ ದಾಖಲೆಯನ್ನು ಇದುವರೆಗೂ ಸಹ ಯಾವುದೇ ಭಾಷೆಯ ಚಿತ್ರ ಕೂಡ ಮಾಡಿಲ್ಲ. ಟೀಸರ್ ಟ್ರೈಲರ್ ಬಿಡುಗಡೆಯ ನಂತರ ಚಿತ್ರಗಳಿಗೆ ಬೇಡಿಕೆ ಹೆಚ್ಚಾದರೆ ಕೆಜಿಎಫ್2 ಗೆ ಮಾತ್ರ ಯಾವುದೇ ಟೀಸರ್ ಟ್ರೈಲರ್ ಇಲ್ಲದಿದ್ದರೂ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಕೊಂಡಿದೆ. ಟೀಸರ್ ಬಿಡುಗಡೆ ಗೂ ಮುನ್ನ ಇಷ್ಟು ದೊಡ್ಡ ಮಟ್ಟದ ದಾಖಲೆ ನಿರ್ಮಿಸುತ್ತಿರುವ ಈ ಚಿತ್ರ ಟೀಸರ್ ಟ್ರೈಲರ್ ಬಿಡುಗಡೆಯಾಗಿ, ಚಿತ್ರ ಬರುವ ಹೊತ್ತಿಗೆ ಎಷ್ಟು ಇಂಟರೆಸ್ಟ್ ಗಳನ್ನು ಕಲೆಹಾಕಬಹುದು ಎಂಬುದನ್ನು ಊಹಿಸಿಕೊಳ್ಳುವುದು ಸಹ ಕಷ್ಟ.. ಒಟ್ಟಿನಲ್ಲಿ ಕನ್ನಡಿಗರು ಮಾಡಿರುವ ಈ ಚಿತ್ರ ದೇಶದಲ್ಲಿ ಎಷ್ಟೊಂದು ದೊಡ್ಡಮಟ್ಟದ ರೆಕಾರ್ಡ್ ಸೃಷ್ಟಿಸುತ್ತಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಚಾರ.

Share post:

Subscribe

spot_imgspot_img

Popular

More like this
Related

ಬೆಂಗಳೂರು ಬೇಗೂರಿನ ಬಳಿ ಅಗ್ನಿ ಅವಘಡ: ಡಂಪಿಂಗ್ ಯಾರ್ಡ್‌ನಲ್ಲಿ ಬೆಂಕಿ

ಬೆಂಗಳೂರು ಬೇಗೂರಿನ ಬಳಿ ಅಗ್ನಿ ಅವಘಡ: ಡಂಪಿಂಗ್ ಯಾರ್ಡ್‌ನಲ್ಲಿ ಬೆಂಕಿಬೆಂಗಳೂರು: ನಗರದ...

ನಟಿ ಕಾರುಣ್ಯ ರಾಮ್ ಗೆ ಶುರುವಾಯ್ತು ಸಾಲಗಾರರ ಕಾಟ: ತಂಗಿ ವಿರುದ್ಧ ಸಿಸಿಬಿಗೆ ದೂರು

ನಟಿ ಕಾರುಣ್ಯ ರಾಮ್ ಗೆ ಶುರುವಾಯ್ತು ಸಾಲಗಾರರ ಕಾಟ: ತಂಗಿ ವಿರುದ್ಧ...

ಇಂದು ಮಕರ ಸಂಕ್ರಾಂತಿ ಸಂಭ್ರಮ: ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ, ವರ್ಷವಿಡೀ ಕಷ್ಟ ತಪ್ಪಿದ್ದಲ್ಲ!

ಇಂದು ಮಕರ ಸಂಕ್ರಾಂತಿ ಸಂಭ್ರಮ: ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ, ವರ್ಷವಿಡೀ...

ಸಿಎಂ–ಡಿಸಿಎಂ ಜೊತೆ ರಾಹುಲ್ ಗಾಂಧಿ ಮಾತುಕತೆ: ಶರಣು ಪ್ರಕಾಶ್ ಪಾಟೀಲ್ ಹೇಳಿದ್ದೇನು..?

ಸಿಎಂ–ಡಿಸಿಎಂ ಜೊತೆ ರಾಹುಲ್ ಗಾಂಧಿ ಮಾತುಕತೆ: ಶರಣು ಪ್ರಕಾಶ್ ಪಾಟೀಲ್ ಹೇಳಿದ್ದೇನು..? ಬೆಂಗಳೂರು:...