ಜಾಗತಿಕ ತಾಪಮಾನದ ಪರಿಣಾಮವನ್ನು ಎದುರಿಸಲು ಭಾರತದ ನಾಲ್ಕು ಕೋಟಿ ಜನರು ಸಿದ್ದರಾಗಬೇಕೆಂದು ವಿಶ್ವಸಂಸ್ಥೆ ಹೇಳಿದೆ. ತಾಪಮಾನದಿಂದ ಸಮುದ್ರಮಟ್ಟದಲ್ಲಿ ಏರಿಕೆಯುಂಟಾಗುತ್ತಿದ್ದು 2050ರ ವೇಳೆಗೆ ಭಾರತದ ಮುಂಬೈ, ಕೋಲ್ಕತಾಕ್ಕೆ ಅಪಾಯ ಕಾದಿದೆ ಎಂದು ವಿಶ್ವಸಂಸ್ಥೆ ಗಂಭೀರ ಎಚ್ಚರಿಕೆ ನೀಡಿದೆ. ಬರೀ ಮುಂಬೈ, ಕೋಲ್ಕತಾ ಮಾತ್ರವಲ್ಲ ಕರಾವಳಿ ತೀರ ಪ್ರದೇಶಗಳು ಪ್ರವಾಹಕ್ಕೆ ತುತ್ತಾಗಲಿವೆ.
ಎದ್ದುಬರುವ ಸಮುದ್ರದಿಂದ ನಗರಗಳೇ ನಾಶವಾಗಲಿವೆ ಎಂದು ಆತಂಕವನ್ನು ಹೊರಗೆಡವಿದೆ. ಜಾಗತಿಕ ಹವಾಮಾನ ಬದಲಾವಣೆಯ ಘೋರ ಪರಿಣಾಮಗಳು ಪೆಸಿಫಿಕ್, ದಕ್ಷಿಣ ಹಾಗೂ ಆಗ್ನೇಯ ಏಷ್ಯಾ ದೇಶಗಳಲ್ಲಿ ಕಂಡುಬರಲಿವೆ ಎಂದು ‘ಜಾಗತಿಕ ಪರಿಸರ ಮುನ್ನೋಟ: ಪ್ರಾದೇಶಿಕ ಪರಾಮರ್ಶೆ’ ಎಂಬ ವರದಿಯಲ್ಲಿ ತಿಳಿಸಲಾಗಿದೆ. ಅಪಾಯಕ್ಕೆ ಸಿಲುಕುವ ವಿಶ್ವದ 10 ನಗರಗಳಲ್ಲಿ ಏಳು ಏಷ್ಯಾ ಪೆಸಿಫಿಕ್ ವಲಯಕ್ಕೆ ಸೇರಿವೆ.
ಮುಂಬಯಿ, ಕೋಲ್ಕತಾ, ಚೀನಾದ ಗ್ವಾಂಗ್ಜು, ಶಾಂಘೈ, ಬಾಂಗ್ಲಾ ರಾಜಧಾನಿ ಢಾಕಾ, ಮ್ಯಾನ್ಮಾರ್ನ ಯಾಂಗೋನ್, ಥಾಯ್ಲೆಂಡ್ ನ ಬ್ಯಾಂಕಾಕ್, ವಿಯೆಟ್ನಾಂನ ಹೈ ಫೋಂಗ್ ಮತ್ತು ಹೋ ಚಿ ಮಿನ್ ನಗರಗಳು ಕರಾವಳಿ ಪ್ರವಾಹಕ್ಕೆ ತುತ್ತಾಗುವ ಸಾಧ್ಯತೆ ಇದೆ ಎಂದು ವಿಶ್ವಸಂಸ್ಥೆ ಹೇಳಿದೆ.
- ರಾ ಚಿಂತನ್
POPULAR STORIES :
ಐಶ್ವರ್ಯಗೆ ಶಾಕ್ ಕೊಟ್ಟ ಅಭಿಷೇಕ್ ಬಚ್ಚನ್ ನ ನಡುವಳಿಕೆ..! #Video
ಈ ಅವಳಿ ಸೋದರಿಯರಿಗೆ ವಿಚಿತ್ರ ಬಯಕೆ..!? ಅದೇನಂತಾ ನೀವೇ ಓದಿ..!?
ಕಾಮನ್ ಮ್ಯಾನ್ ಅಮಾಂಗ್ ದ ಅನ್ ಕಾಮನೆಸ್ಟ್..!
ಹೆಚ್ ಎಂ ರೇವಣ್ಣನಿಗೆ ಹತ್ತು ಕೋಟಿ ಕೇಳ್ದಾ..!? ರವಿಪೂಜಾರಿ ಹೆಸರಿನಲ್ಲಿ ಕರೆ ಮಾಡಿದ್ದು ಯಾರು..!?
ನಿಮ್ಗೆ ಗೊತ್ತಾ..? ರೋಹಿತ್ ಶರ್ಮ ಮದ್ವೆಯಾಗಿದ್ದು ಯುವರಾಜ್ ತಂಗೀನಾ..?