ಫ್ಲಿಪ್ ಕಾರ್ಟ್ ಇದೀಗ ಹೊಸದೊಂದು ಯೋಜನೆಯ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆಯುವ ಕಾರ್ಯಕ್ಕೆ ಮುಂದಾಗಿದೆ. ಇಷ್ಟು ದಿನಗಳ ಕಾಲ ಬಿಗ್ ಬಿಲ್ಲಿಯನ್ ಡೇಸ್ ನಡೆಸುತ್ತಿದ್ದ ಫ್ಲಿಪ್ಕಾರ್ಟ್ ಇದೀಗ ಹೊಸದೊಂದು ಹೆಜ್ಜೆಯನ್ನು ಇಟ್ಟಿದೆ. ಹೌದು ಫ್ಲಿಪ್ ಕಾರ್ಟ್ ಸ್ಮಾರ್ಟ್ ಪ್ಯಾಕ್ ಪ್ರೋಗ್ರಾಮ್ ಯೋಜನೆಯ ಅಡಿಯಲ್ಲಿ ಜನರಿಗೆ ಉಚಿತ ಮೊಬೈಲ್ ನೀಡಲು ಮುಂದಾಗಿದೆ.
ಈ ಯೋಜನೆಯ ಅಡಿಯಲ್ಲಿ ಮೊಬೈಲ್ ಖರೀದಿಸಿದ ಗ್ರಾಹಕರು 12 ಅಥವಾ 18 ತಿಂಗಳ ನಂತರ ಹಣವನ್ನು ವಾಪಸ್ ಪಡೆಯಬಹುದು. ಹೌದು ಹಣವನ್ನು ಕೊಟ್ಟು ತಮಗೆ ಯಾವ ಮೊಬೈಲ್ ಬೇಕೋ ಆ ಮೊಬೈಲನ್ನು ಖರೀದಿಸಬಹುದು ಹಾಗೂ ಪೇಬ್ಯಾಕ್ ಪಡೆಯಬಹುದು.. ಹೀಗೆ ಖರೀದಿಸಿದ ನಂತರ 12, 18 ತಿಂಗಳ ಚಂದಾದಾರಿಕೆಯನ್ನು ಗ್ರಾಹಕರು ಪಡೆಯಬಹುದು. ಹೀಗೆ 12 ಅಥವಾ 18 ತಿಂಗಳು ಕಳೆದ ನಂತರ ಗ್ರಾಹಕರಿಗೆ ಸಂಪೂರ್ಣ ಪೇಬ್ಯಾಕ್ ಸಿಗಲಿದೆ.