ಮತ್ತೆ ಯಾವುದೇ ಕರಣಕ್ಕೂ ಕಾಂಗ್ರೆಸ್ ಗೆ ಹೋಗಲ್ಲ!

0
172

ಬಿಜೆಪಿ ಅಧಿಕಾರದಲ್ಲಿ ಇರುವಷ್ಟು ದಿನ ಮಾತ್ರ ಬಿ.ಸಿ. ಪಾಟೀಲ್‌ ಮತ್ತು ಸಂಗಡಿಗರು ಬಿಜೆಪಿಯಲ್ಲಿರುತ್ತಾರೆ. ಮುಂದಿನ ವಿಧಾನಸಭಾ ಚುನಾವಣೆ ಹೊತ್ತಿಗೆ ಮತ್ತೆ ಅವರೆಲ್ಲರೂ ಕಾಂಗ್ರೆಸ್‌ ಪಕ್ಷಕ್ಕೆ ಮರಳುತ್ತಾರೆ ಎಂಬ ಕೆಮತ್ತೆಕಾಂಗ್ರೆಸ್‌ಗೆ ಹೋಗಲ್ಲ: ಬಿ.ಸಿ.ಪಾಟೀಲ್‌
ಹೊನ್ನಾಳಿ: ತಾವಾಗಲಿ, ತಮ್ಮ ಜತೆ ಬಿಜೆಪಿಗೆ ಸೇರ್ಪಡೆಯಾದ ಇತರ ಶಾಸಕರಾಗಲಿ ಯಾವುದೇ ಕಾರಣಕ್ಕೂ ಮತ್ತೆ ಕಾಂಗ್ರೆಸ್‌ ಪಕ್ಷಕ್ಕೆ ಹೋಗಲ್ಲ ಎಂದು ಕೃಷಿ ಸಚಿವ ಬಿ ಸಿ ಪಟೇಲ್ ಹೇಳಿದ್ದಾರೆ.


ಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ಮಾತಲ್ಲಿ ಯಾವುದೇ ಹುರುಳಿಲ್ಲ. ಕಾಂಗ್ರೆಸ್‌ನಿಂದ ಯಾರೂ ನಮ್ಮನ್ನು ಉಚ್ಚಾಟಿಸಿಲ್ಲ. ನಾವೇ ಪಕ್ಷ ಬಿಟ್ಟು ಬಂದಿದ್ದೇವೆ. ನಾವೇ ಡೈವೋರ್ಸ್‌ಗೆ ಅರ್ಜಿ ಹಾಕಿ ಡೈವೋರ್ಸ್‌ ಪಡೆದುಕೊಂಡು ಹೊರಬಂದಿದ್ದೇವೆ. ಬಳಿಕ ಬಿಜೆಪಿಗೆ ಸೇರ್ಪಡೆಯಾಗಿ ಮತದಾರರ ಆಶೀರ್ವಾದ ಪಡೆದು ಶಾಸಕ-ಸಚಿವರಾಗಿದ್ದೇವೆ. ಹಾಗಾಗಿ ಮತ್ತೆ ಕಾಂಗ್ರೆಸ್‌ಗೆ ಸೇರ್ಪಡೆಗೊಳ್ಳುವುದು ಕನಸಿನ ಮಾತು ಎಂದು ಹೇಳಿದರು.