ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಕಳೆದ ಎರಡು ದಶಕಗಳಿಂದ ಬಾಲಿವುಡ್ ಜಗತ್ತನ್ನು ಆಳುತ್ತಿದ್ದು, ತಾಯಿಯಾದ ನಂತರವೂ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಪೂಮಾ ಜೊತೆ ಪಾಲುದಾರಿಕೆಯನ್ನೂ ಹೊಂದಿದ್ದರು . ಕರೀನಾ ಎರಡನೇ ಬಾರಿಗೆ ಗರ್ಭಿಣಿಯಾಗಿದ್ದು, ಅವರ ಅಭಿಮಾನಿಗಳು ಗುಡ್ ನ್ಯೂಸ್ ಕೇಳಲು ಕುತೂಹಲದಿಂದ ಕಾಯುತ್ತಿದ್ದಾರೆ.
ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಕರೀನಾ ಮೊದಲ ಮಗು ತೈಮೂರ್ ಪ್ರಸ್ತುತ ಜನಪ್ರಿಯ ಕಿಡ್. ಸದ್ಯದಲ್ಲೇ ಕರೀನಾ ಮಗಳು ಅಥವಾ ಮಗನಿಗೆ ಜನ್ಮ ನೀಡಲಿದ್ದಾರೆ. ಅಂದಹಾಗೆ ಗರ್ಭಿಣಿಯಾಗಿದ್ದರೂ, ಕರೀನಾ ಯೋಗ ಮಾಡುವುದನ್ನು ಎಂದಿಗೂ ನಿಲ್ಲಿಸಲಿಲ್ಲ. ಇದೀಗ ಕರೀನಾ ಶಾಂತಿಯುತವಾಗಿ ಧ್ಯಾನ ಮಾಡುತ್ತಿರುವ ಯೋಗ ಭಂಗಿಯ ಎರಡು ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. ಈ ಫೋಟೋದಲ್ಲಿ ಅವರು ಗುಲಾಬಿ ಬಣ್ಣದ ಜಿಮ್ ಉಡುಗೆ ಧರಿಸಿ, ತಮ್ಮ ಬೇಬಿ ಬಂಪ್ ತೋರಿಸಿದ್ದಾರೆ. ಅವರ ಈ ಫೋಟೋಗಳು ವೈರಲ್ ಆಗುತ್ತಿದ್ದು, ಕರೀನಾ ಇದರಲ್ಲಿ ಬಹಳ ಸುಂದರವಾಗಿ ಕಾಣುತ್ತಿರುವುದನ್ನು ನೋಡಬಹುದು.
ಫೋಟೋ ನೋಡಿದರೆ ಗರ್ಭಿಣಿಯ ಹೊಳಪು ಕರೀನಾ ಮುಖದ ಮೇಲೆ ಗೋಚರಿಸುತ್ತದೆ. ಇದಕ್ಕೂ ಮುನ್ನ ಅನುಷ್ಕಾ ಯೋಗ ಮಾಡುತ್ತಿರುವ ಕೆಲವು ಫೋಟೋಗಳು ವೈರಲ್ ಆಗಿದ್ದವು. ಇತ್ತೀಚಿನ ದಿನಗಳಲ್ಲಿ ಕರೀನಾ ಅವರ ಬೇಬಿ ಬಂಪ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಹೆಚ್ಚು ವೈರಲ್ ಆಗುತ್ತಿವೆ.