ಪೂಜಾರಾಗೆ ಅಶ್ವಿನ್ ಅದೆಂಥಾ ಸಾವಾಲಾಕಿದ್ದಾರೆ ಗೊತ್ತಾ?

Date:

ನವದೆಹಲಿ: ಫೆಬ್ರವರಿ 5ರಿಂದ ಭಾರತ ಮತ್ತು ಇಂಗ್ಲೆಂಡ್ ಮಧ್ಯೆ ಪ್ರವಾಸ ಸರಣಿಯ ಪಂದ್ಯಗಳು ಆರಂಭಗೊಳ್ಳಲಿವೆ. ಇತ್ತೀಚೆಗಷ್ಟೇ ಆಸ್ಟ್ರೇಲಿಯಾ ವಿರುದ್ಧ ಯಶಸ್ವಿ ಪ್ರವಾಸ ಸರಣಿ ಮುಗಿಸಿರುವ ಟೀಮ್ ಇಂಡಿಯಾ ಫೆಬ್ರವರಿಯಲ್ಲಿ ಇಂಗ್ಲೆಂಡನ್ನು ಭಾರತಕ್ಕೆ ಬರ ಮಾಡಿಕೊಳ್ಳಲಿದೆ. ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತ ತಂಡದ ಎಲ್ಲಾ ಆಟಗಾರರು ಶಕ್ತಿ ಪ್ರದರ್ಶಿಸಿದ್ದರು. ಹೀಗಾಗಿಯೇ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 2-1ರಿಂದ ಗೆದ್ದು ಇತಿಹಾಸ ನಿರ್ಮಿಸಿತ್ತು.

ಆಸ್ಟ್ರೇಲಿಯಾದಲ್ಲಿ ಭಾರತದ ಗೆಲುವಿನಲ್ಲಿ ಟೆಸ್ಟ್ ಸ್ಪೆಷಾಲಿಸ್ಟ್ ಚೇತೇಶ್ವರ ಪೂಜಾರ ಮತ್ತು ಅನುಭವಿ ಸ್ಪಿನ್ನರ್ ಆರ್‌ ಅಶ್ವಿನ್‌ ಕೊಡುಗೆಯೂ ಮಹತ್ವದ್ದಾಗಿತ್ತು. ಮುಂಬರಲಿರುವ ಇಂಗ್ಲೆಂಡ್ ವಿರುದ್ಧದ ಸರಣಿಗೆ ಸಜ್ಜಾಗುತ್ತಿರುವ ಆರ್‌ ಅಶ್ವಿನ್, ಚೇತೇಶ್ವರ ಪೂಜಾರ ಮತ್ತು ಬ್ಯಾಟಿಂಗ್‌ ಕೋಚ್ ವಿಕ್ರಮ್ ರಾಥೋಡ್ ಅಧಿಕೃತ ಯೂಟ್ಯೂಬ್‌ ಚಾನೆಲ್‌ನಲ್ಲಿ ಮಾತನಾಡಿದ್ದಾರೆ.

ಈ ವೇಳೆ ಆರ್‌ ಅಶ್ವಿನ್ ಅವರು ತಂಡದ ಸಹ ಆಟಗಾರ, ‘ಗ್ರೇಟ್‌ವಾಲ್-2’ ಪೂಜಾರ ಅವರಿಗೆ ಭಾರೀ ಸವಾಲೊಂದನ್ನು ಎಸೆದಿದ್ದಾರೆ.

ಬ್ಯಾಟಿಂಗ್‌ ಕೋಚ್ ರಾಥೋಡ್ ಅವರಲ್ಲಿ ಅಶ್ವಿನ್, ‘ಪೂಜಾರ ಅವರು ಆಫ್‌ ಸ್ಪಿನ್ನರ್‌ಗೆ ಸಿಕ್ಸ್ ಹೊಡೆದಿದ್ದನ್ನು ನಾವು ಯಾವತ್ತಾದರೂ ನೋಡಿದ್ದೇವಾ? ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ರಾಥೋಡ್, ‘ಕೆಲಸ ಪ್ರಗತಿಯಲ್ಲಿದೆ. ಕನಿಷ್ಟ ಒಂದುಸಾರಿಯಾದ್ರೂ ನೀವು ಸಿಕ್ಸ್ ಹೊಡೆಯಬೇಕೆಂದು ನಾನು ಅವರಿಗೆ ಮನವರಿಕೆ ಮಾಡಿಸುತ್ತಿದ್ದೇನೆ. ಅವರಿನ್ನೂ ಅತ್ತ ಹೋಗಿಲ್ಲ,’ ಎಂದರು.

ರಾಥೋಡ್ ಪ್ರತಿಕ್ರಿಯೆಗೆ ಉತ್ತರಿಸಿದ ಅಶ್ವಿನ್, ‘ಮುಂಬರಲಿರುವ ಇಂಗ್ಲೆಂಡ್ ಸರಣಿಯಲ್ಲಿ ಪೂಜಾರ ಒಂದು ವೇಳೆ ಮೊಯೀನ್ ಅಲಿ ಅಥವಾ ಬೇರೆ ಯಾರಾದರೂ ಸ್ಪಿನ್ನರ್‌ಗೆ ಸಿಕ್ಸ್ ಬಾರಿಸಿದರೆ, ನಾನು ಅದೇ ಸರಣಿಯಲ್ಲಿ ನನ್ನ ಅರ್ಧ ಮೀಸೆ ಬೋಳಿಸಿ ಆಡುತ್ತೇನೆ. ಇದು ಓಪನ್ ಚಾಲೆಂಜ್,’ ಎಂದು ತಮಾಷೆಯಾಗಿ ಸವಾಲೆಸೆದಿದ್ದಾರೆ.

ಅಶ್ವಿನ್ ಮಾತಿಗೆ ಪ್ರತಿಕ್ರಿಯಿಸಿದ ರಾಥೋಡ್, ‘ಇದು ದೊಡ್ಡ ಸವಾಲು. ಇದನ್ನು ಪೂಜಾರ ಸ್ವೀಕರಿಸಿದ್ದಾರೆ ಎಂದು ನಾನು ಭಾವಿಸಿದ್ದೇನೆ. ಆದರೆ ಆತ (ಅಶ್ವಿನ್) ಮೀಸೆ ತೆಗೆಯುತ್ತಾನೆ ಎಂದು ನನಗನ್ನಿಸುತ್ತಿಲ್ಲ,’ ಎಂದು ತರಲೆ ಮಾಡಿದ್ದಾರೆ. ಭಾರತ vs ಇಂಗ್ಲೆಂಡ್ ಸರಣಿ ಟೆಸ್ಟ್ ಸರಣಿಯೊಂದಿಗೆ ಫೆಬ್ರವರಿಯಿಂದ ಆರಂಭಗೊಳ್ಳಲಿದೆ.

ಈವರೆಗೆ ಪೂಜಾರ 81 ಟೆಸ್ಟ್ ಪಂದ್ಯಗಳು, 136 ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ. 47.74ರ ಸರಾಸರಿಯಲ್ಲಿ 6111 ರನ್ ಬಾರಿಸಿದ್ದಾರೆ. ಇದರಲ್ಲಿ 18 ಶತಕ, 3 ದ್ವಿಶತಕ, 28 ಅರ್ಧ ಶತಕಗಳು ಸೇರಿವೆ. ಅಷ್ಟೇ ಅಲ್ಲ ಪೂಜಾರ ಟೆಸ್ಟ್‌ನಲ್ಲಿ 720 ಫೋರ್ಸ್, 14 ಸಿಕ್ಸರ್‌ಗಳ ದಾಖಲೆ ಹೊಂದಿದ್ದಾರೆ.

 

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...