ಸಿಎಂ ಬಿಎಸ್ವೈ ಹಾಗು ಸಚಿವ ನಿರಾಣಿ ವಿರುದ್ಧ ಡಿನೋಟಿಫೈ ಪ್ರಕರಣ ತನಿಖೆಗೆ ಸುಪ್ರೀಂ ಗ್ರೀನ್ ಸಿಗ್ನಲ್ ನೀಡಿದ ವಿಚಾರವಾಗಿ ಮಾತನಾಡಿದ ವಿಕಾಸಸೌಧದಲ್ಲಿ ಗಣಿ ಸಚಿವ ಮುರುಗೇಶ್ ನಿರಾಣಿ ಅವರು ಕೋರ್ಟ್ ನಲ್ಲಿ ಈ ಪ್ರಕರಣ ನಡೆಯುತ್ತಿದೆ ಕೋರ್ಟ್ ನಲ್ಲಿ ಈ ಪ್ರಕರಣ ಇರೋದ್ರಿಂದ ಹೆಚ್ಚು ಮಾತನಾಡಲ್ಲಅವನ ಬಗ್ಗೆ ಯಾಕೆ ಕೇಳ್ತೀರಾ? ಆ ಪ್ರಕರಣದಲ್ಲಿ ನನ್ಗೆ ನ್ಯಾಯ ಸಿಗುತ್ತೆ ಅವರ ಆರೋಪದಲ್ಲಿ ಹುರುಳಿಲ್ಲ ನಾನು ೨೫ ವರ್ಷಗಳಿಂದ ಇದ್ದೀನಿ
೫೦೦ ಟನ್ ನಿಂದ ೭೫ ಸಾವಿರ ಟನ್ ನಷ್ಟು ಸಕ್ಕರೆ ಉತ್ಪಾದನೆ ಮಾಡುತ್ತಿದ್ದೇನೆ ೭೫ ಸಾವಿರ ಜನರಿಗೆ ನಾನು ಕೆಲಸ ಕೊಟ್ಟಿದ್ದೇನೆ
ಪ್ರತಿ ಹಂತದಲ್ಲೂ ನನ್ನನ್ನ ವಿರೋಧ ಮಾಡುವವರು ಇರುತ್ತಾರೆ
ವಿರೋಧ ಮಾಡದೇ ಈ ಹಂತಕ್ಕೆ ಬರಲು ಸಾಧ್ಯವೇ? ಆನೆ ಹೋಗುವಾಗ ಶ್ವಾನ ಬೊಗಳುವುದು ಸಹಜ ಸರ್ಕಾರದಿಂದ ಹಾಗು ನನ್ನಿಂದ ಅವರಿಗೆ ಅನ್ಯಾಯ ಆಗಿಲ್ಲ ಉದ್ಯಮಿ ಆಲಂ ಪಾಷ ವಿರುದ್ಧ ನಿರಾಣಿ ವಾಗ್ದಾಳಿ ನೆಡೆಸಿ ಏಕವಚನದಲ್ಲಿ ಉದ್ಯಮಿ ಆಲಂಪಾಷ ವಿರುದ್ದ ನಿರಾಣಿ ವಾಗ್ದಾಳಿ ನೆಡೆಸಿದರು ಹಾಗು ಸಿಎಂ ಹಾಗೂ ಈಶ್ವರಪ್ಪ ಅವರ ಕುಟುಂಬಸ್ಥರು ಶಿವಮೊಗ್ಗ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ಯಲ್ಲಿದ್ದಾರೆ ಎಂಬ ಆರೋಪಕ್ಕೆ ಸಚಿವ ಮುರುಗೇಶ್ ನಿರಾಣಿ ಪ್ರತಿಕ್ರಿಯೆ ನೀಡಿ ಯಾರೆ ಭಾಗಿಯಾಗಿದ್ದರೂ ಕ್ರಮ ಕೈಗೊಳ್ಳುತ್ತೇವೆ ಈಗಾಗಲೇ ತನಿಖೆ ನಡೆಯುತ್ತಿದೆ ತನಿಖೆಯ ಬಳಿಕ ಎಲ್ಲವೂ ಹೊರಬರಲಿದೆ ಕಾಂಗ್ರೆಸ್ ನಾಯಕರು ಆರೋಪ ಮಾಡುವುದು ಸುಲಭ ಅವರಲ್ಲಿ ಏನಾದರೂ ದಾಖಲೆಗಳಿದ್ದರೆ ಕೊಡಲಿ ತನಿಖೆಗೆ ಸಹಾಯವಾಗುತ್ತದೆ ಸುಮ್ಮನೆ ಆರೋಪ ಮಾಡುವುದು ಬೇಡ ಎಂದು ಹೇಳಿದರು.