ಯಜಮಾನ ಚಿತ್ರದಲ್ಲಿ ಲಕ್ಸು ಸೋಪು ಹಾಕಿ ಜಳಕ ಮಾಡಿ ಎಂದು ಕುಣಿದಿದ್ದ ತಾನ್ಯಾ ಹೋಪ್ ತದನಂತರ ಅಮರ್ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದರು. ಇದೀಗ ನಟಿ ತಾನ್ಯಾ ಹೋಪ್ ಇದೀಗ ಬಹು ನಿರೀಕ್ಷೆಯ ಬೆಲ್ ಬಾಟಮ್ 2 ನಲ್ಲಿ ಅಭಿನಯಿಸುತ್ತಿದ್ದಾರೆ.
ಇಂದು ನಡೆದ ಮುಹೂರ್ತ ಕಾರ್ಯಕ್ರಮದಲ್ಲಿ ನಟಿ ತಾನ್ಯಾ ಹೋಪ್ ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿದ ನಟಿ ತಾನ್ಯ ಹೋಪ್ ಅವರು ಚಿತ್ರದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿರುವುದು ಖುಷಿಯ ಸಂಗತಿ. ಚಿತ್ರದಲ್ಲಿ ನನ್ನ ಪಾತ್ರದ ಬಗ್ಗೆ ಈಗಲೇ ಏನು ಹೇಳಲಾರೆ ಹಿಂದೂ ನಟಿ ತಾನ್ಯ ಹೋಪ್ ತಿಳಿಸಿದರು.
ಬೆಲ್ ಬಾಟಮ್ ಮೊದಲನೆಯ ಭಾಗದ ಯಶಸ್ಸಿನ ನಂತರ ಇದೀಗ ಬೆಲ್ ಬಾಟಮ್ 2 ತಯಾರಾಗುತ್ತಿದ್ದು ಈ ಚಿತ್ರ ಯಾವ ಮಟ್ಟಿಗೆ ಸದ್ದು ಮಾಡುತ್ತದೆಯೋ ಕಾದು ನೋಡಬೇಕು..