ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ರಾಜ್ಯಪಾಲರ ಮೂಲಕ ಸರ್ಕಾರ ಭಾಷಣಮಾಡಿಸಿದೆ ಸರ್ಕಾರ ಬರೆದುಕೊಟ್ಟದ್ದನ್ನೇ ಅವರು ಓದುತ್ತಾರೆ
ಭಾಷಣದಲ್ಲಿ ಸ್ಪಷ್ಟತೆ ಇರಬೇಕು ಸರ್ಕಾರದ ನಿಲುವು,ಧ್ಯೇಯ ಧೋರಣೆ ಬಗ್ಗೆ ಸ್ಪಷ್ಟತೆ ಇರಬೇಕು ಹಾಗು ಸರ್ಕಾರದ ಮುಂದಿನ ಮುನ್ನೋಟ ಇರಬೇಕು ಈ ಭಾಷಣ ನೋಡಿದಾಗ ಇದ್ಯಾವುದೂ ಕಾಣಿಸಲಿಲ್ಲ,
ಇವರದ್ದು ಸುಳ್ಳಿನ ಕಂತೆ ಇದೆ ರಾಜ್ಯಪಾಲರ ಬಾಯಿಂದ ಸುಳ್ಳು ಹೇಳಿಸಿದ್ದಾರೆ ನಮ್ಮ ಸರ್ಕಾರದ ಸಾಧನೆಯನ್ನೇ ವಿವರಿಸಿದ್ದಾರೆ
ಇವರ ಸರ್ಕಾರದ ಯಾವ ಸಾಧನೆಯೂ ಇಲ್ಲ ಗೊತ್ತು ಗುರಿ,ದೂರ ದೃಷ್ಟಿಯಿಲ್ಲದ ಭಾಷಣ ಇದು ಎಂದು ರಾಜ್ಯಪಾಲರ ಭಾಷಣಕ್ಕೆ ಸಿದ್ದು ಅಸಮಾಧಾನ ವೇಕ್ತಪಡಿಸಿದ್ದಾರೆ.