ಮಾಧ್ಯಮದವರೊಡನೆ ಮಾತನಾಡಿದ ಸತೀಶ್ ಜಾರಕಿಹೊಳಿ ಅವರು ಮಹಾರಾಷ್ಟ್ರ ಸರ್ಕಾರಕ್ಕೆ ಬೆಳಗಾವಿ ವಿಚಾರದಲ್ಲಿ ರಾಜ್ಯ ಸರ್ಕಾರ ಸಮರ್ಥ ಉತ್ತರ ನೀಡಬೇಕು ಹಾಗು ಕಾಂಗ್ರೆಸ್ ನವರಿಂದ ಒತ್ತಾಯ ಮಾಡಿಸಿಕೊಂಡು ಸರ್ಕಾರ ಉತ್ತರ ಕೊಡೋದಲ್ಲ
ಸರ್ಕಾರ ಸ್ವಯಂ ಪ್ರೇರಿತವಾಗಿ ಮಹಾರಾಷ್ಟ್ರಕ್ಕೆ ಉತ್ತರ ನೀಡಬೇಕಿದೆ.
ಅದು ಅವರ ಕರ್ತವ್ಯ ಈಗಾಗಲೇ ಈ ಬಗ್ಗೆ ಅನೇಕ ಪ್ರತಿಭಟನೆಗಳು ನಡೆದಿವೆ ಈಗ ಅಧಿವೇಶನ ಕೂಡಾ ನಡೆಯುತ್ತಿದೆ, ತಕ್ಕ ಉತ್ತರ ನೀಡಬೇಕಿದೆ ನಾವು ಅವರಿಗೇನು ಮಾಡಿದ್ದೇವೆ?ಮರಾಠಿ ಶಾಲೆಗಳಿದೆ, ಅವರು ನಮ್ಮಲ್ಲಿ ಸರ್ಕಾರಿ ನೌಕರಿಯಲ್ಲಿದ್ದಾರೆ ಅವರಿಗೆ ನಾವೇನೂ ತೊಂದರೆ ನೀಡಿಲ್ಲ ಇನ್ನಾದರೂ ಮಹಾರಾಷ್ಟ್ರ ಸಿಎಂ ಉದ್ದಟತನ ಬಿಡಲಿ ಎಂದು ವಿಧಾನಸೌಧದಲ್ಲಿ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ.