ಮಾಧ್ಯಮದವರೊಡನೆ ಮಾತನಾಡಿದ ಸಚಿವ ಆನಂದ್ ಸಿಂಗ್
ರಾಜಿನಾಮೆ ಕೊಡ್ತಾರೆ ಅಂತ ಸುದ್ದಿ ಬಂದಿದೆ. ಸಚಿವ ಸ್ಥಾನ ಬದಲಿಸಿದಾಗ ಅಸಮಧಾನ ಸಹಜ, ಆದ್ರೆ ನನಗೆ ಅಸಮಧಾನ ಇಲ್ಲ.
ಸಿಎಂ ಜೊತೆ ಮಾತುಕತೆ ಮಾಡಿದ್ದೇನೆ. ಎಲ್ಲರಿಗೂ ಸಮಾಧಾನ ಮಾಡಲು ಬದಲಾವಣೆ ಸಹಜ. ನನಗೆ ಖಾತೆ ದೊಡ್ಡದು, ಚಿಕ್ಕದು ಅಂತ ಇಲ್ಲ ಯಾವುದೇ ಖಾತೆ ಕೊಟ್ರು ನಿಭಾಯಿಸಿ, ಸಿಎಂಗೆ ಸಹಕಾರ ಕೊಡಬೇಕು. ಸರ್ಕಾರಿ ಕೆಲಸ ದೇವರ ಕೆಲಸ ಅಂತ ವಿಧಾನಸೌಧದಲ್ಲಿ ಬರೆದಿದ್ದಾರೆ, ಮುಂದೆ ಮತ್ತೆ ರೀ ಷಫಲ್ ಆಗಲಿದೆ ಅಂತ ಹೇಳ್ತಿದ್ದಾರೆ.
ಅರಣ್ಯ ಇಲಾಖೆ ಖಾತೆ ನೀಡಿದ್ದಾಗ ಅನೇಕ ಕೆಲಸ ಮಾಡಿದ್ದೇನೆ. ಡೀಮ್ಡ್ ಫಾರೆಸ್ಟ್ ಮಾಡಲಾಗಿದೆ ಲಿಂಬಾವಳಿ ಓಡಾಡಿದ್ರೆ, ಒಂದುವರೆ ತಿಂಗಳಲ್ಲಿ ಕೆಲಸ ಪೂರ್ಣಗೊಳ್ಳಲಿದೆ ಪರಿಸರ ಖಾತೆ ಕೊಟ್ಟಿದ್ದು, ಅದನ್ನೂ ನಿಭಾಯಿಸಿದೆ ಹಜ್ ಮತ್ತು ವಕ್ಫ್ ಖಾತೆಯನ್ನೂ ನೀಡಿದ್ದಾರೆ ಅದನ್ನ ನಿಭಾಯಿಸಿಕೊಂಡು ಹೋಗುತ್ತೇನೆ.
ನಮ್ಮ ಪಕ್ಷದ ಹಿರಿಯ ಸದಸ್ಯರು ಸಭೆ ಮಾಡಿದ್ದಾರೆ ಎನ್ನಲಾಗ್ತಿದೆ, ಹಿರಿಯರಿಗೂ ಸಚಿವ ಸ್ಥಾನ ನೀಡಬೇಕು ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆ ಮಾಡಬೇಕು. ಮುಂದಿನ ದಿನಗಳಲ್ಲಿ ಸಂಪುಟ ಪುನರ್ ರಚನೆಯಾಗಬೇಕು ಆಗ ಇತರರಿಗೂ ಖಾತೆ ನೀಡಬೇಕು. ಆಗ ಬೇರೆ ಖಾತೆ ನೀಡಿದ್ರೂ ನಿಭಾಯಿಸುತ್ತೇನೆ ಇಲ್ಲ ಬೇರೆಯವರಿಗೆ ಬಿಟ್ಟುಕೊಡಲು ಸೂಚಿಸಿದ್ರೂ, ಸಚಿವ ಸ್ಥಾನ ಬಿಟ್ಟುಕೊಡುತ್ತೇನೆ. ಯುವಕರಿಗೂ ಸ್ಥಾನ ನೀಡಬೇಕಿದೆ ಹಾಗಾಗಿ ಎಲ್ಲರೂ ನನ್ನಂತೆಯೇ ಇರಬೇಕು ಅಂತೇನಿಲ್ಲ ನಾನಗೆ ಯಾವುದೇ ಅಸಮಧಾನ ಇಲ್ಲ. ಯಾವುದೇ ಖಾತೆ ನೀಡಿದ್ರೂ ಅಸಮಧಾನ ಇಲ್ಲ ಎಂದು ಸಚಿವ ಆನಂದ್ ಸಿಂಗ್ ಹೇಳಿಕೆ ನೀಡಿದ್ದಾರೆ.