ದರ್ಶನ್ ಅಭಿನಯದ ರಾಬರ್ಟ್ ಚಿತ್ರ ತೆಲುಗಿನಲ್ಲಿಯೂ ಸಹ ಬಿಡುಗಡೆಯಾಗಲು ತಯಾರಾಗಿರುವ ವಿಷಯ ನಿಮಗೆಲ್ಲರಿಗೂ ತಿಳಿದೇ ಇದೆ. ಆದರೆ ತೆಲುಗು ರಾಬರ್ಟ್ ಬಿಡುಗಡೆಗೆ ತೆಲುಗು ರಾಜ್ಯಗಳಲ್ಲಿ ವಿತರಕರು ತೊಂದರೆಯನ್ನು ಉಂಟು ಮಾಡಿದ್ದರು. ಈ ವಿಷಯ ತಿಳಿದ ಕೂಡಲೇ ರಾಬರ್ಟ್ ಚಿತ್ರತಂಡ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸಿಡಿದೆದ್ದರು.
ನಿಮ್ಮ ಸಿನಿಮಾಗಳನ್ನು ನಮ್ಮ ರಾಜ್ಯಗಳಲ್ಲಿ ಯಾವುದೇ ವಿಘ್ನವಿಲ್ಲದೆ ಬಿಡುಗಡೆ ಮಾಡಲು ಅವಕಾಶ ಮಾಡಿಕೊಟ್ಟಿದ್ದೇವೆ. ಆದರೆ ನಮ್ಮ ಚಿತ್ರಗಳಿಗೇಕೆ ಈ ರೀತಿ ತೊಂದರೆ ಉಂಟು ಮಾಡುತ್ತಿದ್ದೀರ ಎಂದು ತೆಲುಗು ಮಂದಿ ವಿರುದ್ಧ ದರ್ಶನ್ ಅವರು ಗರಂ ಆದರು. ಅಷ್ಟೇ ಅಲ್ಲದೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದರ್ಶನ್ ಅವರು ದೂರನ್ನು ನೀಡಿದರು.
ದರ್ಶನ್ ಅವರು ಈ ವಿಷಯದ ಕುರಿತು ಅಸಮಾಧಾನ ವ್ಯಕ್ತಪಡಿಸಿ ಹೋರಾಟಕ್ಕೆ ಇಳಿದಿದ್ದೇ ತಡ ತೆಲುಗು ವಿತರಕರಿಗೆ ನಡುಕ ಉಂಟಾಯಿತು. ರಾಬರ್ಟ್ ತೆಲುಗು ಸಿನಿಮಾ ಬಿಡುಗಡೆಗೆ ಅಡ್ಡಿ ಪಡಿಸಿದವರು ದರ್ಶನ್ ಅವರ ಬಳಿ ಕ್ಷಮೆ ಕೇಳಿ ಈ ಹಿಂದೆ ನಿಗದಿಪಡಿಸಿದಂತೆ ಮಾರ್ಚ್ ಹನ್ನೊಂದನೇ ತಾರೀಕಿನಂದು ರಾಬರ್ಟ್ ತೆಲುಗು ವರ್ಷನ್ ಸಹ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ.
ಒಟ್ಟಿನಲ್ಲಿ ಡಿ ಬಾಸ್ ಹೋರಾಟಕ್ಕೆ ಇಳಿದಿದ್ದೇ ತಡ ತೆಲುಗು ವಿತರಕರು ಭಯಪಟ್ಟು ದರ್ಶನ್ ಅವರ ರಾಬರ್ಟ್ ತೆಲುಗು ಚಿತ್ರವನ್ನು ಬಿಡುಗಡೆ ಮಾಡಲು ಒಪ್ಪಿಕೊಂಡಿದ್ದಾರೆ.