ವಿಧಾನಸಭೆಯಲ್ಲಿ ಡ್ರಗ್ಸ್,ಹುಕ್ಕಾ ದಂಧೆ ಬಗ್ಗೆ ಪ್ರಸ್ತಾಪ ಮಾಡಿದ ಸೌಮ್ಯಾರೆಡ್ಡಿ ಅವರು ಯುವಕರು ಡ್ರಗ್ಸ್ ಗೆ ಮಾರು ಹೋಗ್ತಿದ್ದಾರೆ, ನಿರಂತರ ದಾಳಿ ಮಾಡಿ ಡ್ರಗ್ ಕಂಟ್ರೋಲ್ ಮಾಡಬೇಕು ಇದು ಸೀಜನ್ ಪ್ರೂಟ್ಸ್ ತರಹ ಆಗಬಾರದು ಆಗಾಗ್ಗೆ ಮಾತ್ರ ದಾಳಿ ಮಾಡೋದು ಆಗಬಾರದು ನಿರಂತರ ದಾಳಿಯಾಗಲಿ ಎಂದು ಸೌಮ್ಯಾರೆಡ್ಡಿ ಒತ್ತಾಯ ಮಾಡಿದ್ದಕ್ಕೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಉತ್ತರ ನೀಡಿದ್ರು ಡ್ರಗ್ ಕಂಟ್ರೋಲ್ ಗೆ ಸರ್ಕಾರ ಪ್ರಯತ್ನ ಮಾಡ್ತಿದೆ ಕಾಲಮಿತಿಯ ದಾಳಿ ಮಾಡುತ್ತಿಲ್ಲ ನಮ್ಮ ಪೊಲೀಸರುನಿರಂತರ ರೇಡ್ ನಡೆಸ್ತಿದ್ದಾರೆ.
ಹುಕ್ಕಾಬಾರ್ ಗೆ ಯುವಕರ ಆಕರ್ಷಣೆ ಸರ್ಕಾರದ ಗಮನದಲ್ಲಿದೆ ಹುಕ್ಕಾಬಾರ್ ಬ್ಯಾನ್ ಬಗ್ಗೆ ಗಂಭೀರ ಚರ್ಚೆ ನಡೆದಿದೆ ಕಾನೂನುಗಳ ಬಗ್ಗೆ ಸರಕಾರ ಪರಿಶೀಲನೆ ಮಾಡ್ತಿದೆ ವಿವಿಧ ರಾಜ್ಯಗಳಲ್ಲಿ ಕಂಟ್ರೋಲ್ ಮಾಡಿದ ಬಗ್ಗೆ ಪರಿಶೀಲನೆ ಇದಕ್ಕೆ ಸಾರ್ವಜನಿಕರ ಸಹಕಾರವೂ ಅಗತ್ಯ ಡ್ರಗ್ ಬಗ್ಗೆ ಜನಾಂದೋಲನ ಅಗತ್ಯವಿದೆ ಮಾಧ್ಯಮಗಳ ಮೂಲಕ ಜಾಗೃತಿಗೆ ತೀರ್ಮಾನಿಸಿದ್ದೇವೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.