ಮಾಧ್ಯಮದವರೊಡನೆ ಮಾತನಾಡಿದ ಡಿಸಿಎಂ ಅಶ್ವಥ್ ನಾರಾಯಣ್ ಅವರು ಕೇಂದ್ರದ ಗೈಡ್ ಲೈನ್ ಪ್ರಕಾರ ಶೇ.ನೂರರಷ್ಟು ಅವಕಾಶ ನೀಡಿದೆ. ನಮ್ಮ ರಾಜ್ಯದಲ್ಲಿ ಮುನ್ನೆಚ್ಚರಿಕೆ ವಹಿಸಲು, ಐವತ್ತರಷ್ಟು ಮಾತ್ರ ಅವಕಾಶ ನೀಡಲಾಗಿದೆ. ಶೇ. 50ರಷ್ಟಿದ್ದಾಗ ಥಿಯೇಟರ್ ನಡೆಸಲು ಸಾಧ್ಯವಿಲ್ಲ. ನೂರರಷ್ಟು ನೀಡಬೇಕು ಅಂತ ಒತ್ತಾಯ ಕೇಳಿಬರ್ತಿದೆ. ಈ ನಿಟ್ಟಿನಲ್ಲಿ ಸರ್ಕಾರ ವಾಣಿಜ್ಯ ಮಂಡಳಿ ಜೊತೆ ಸಭೆ ಕರೆಯಲಾಗಿದೆ. ಆರೋಗ್ಯ ಸಚಿವರ ನೇತೃತ್ವದಲ್ಲಿ ಸಭೆ ನಡೆಯಲಿದೆ. ಆರೋಗ್ಯ ಗಮನದಲ್ಲಿಟ್ಟುಕೊಂಡು ನಿರ್ಧಾರ ಮಾಡಲಾಗುವುದು.ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಲಾಗುವುದು ಹಾಗು ಸಿನಿಮಾ ಕೂಡ ನಡೆಯಬೇಕು,
ವೀಕ್ಷಕರ ಆರೋಗ್ಯವೂ ಕಾಪಾಡ್ಬೇಕು.ಇನ್ನು ಫ್ಲೈಟ್‌ನಲ್ಲೂ ಏರ್ ಕಂಡೀಶನ್ ಇದೆ ತಾತ್ಕಾಲಿಕವಾಗಿ ಈ ಕ್ರಮ ವಹಿಸಲಾಗಿದೆ ಒಂದು ವರ್ಷದಿಂದ ಈ ಸಮಸ್ಯೆ ಎದುರಾಗಿದೆ ಚಿತ್ರೋದ್ಯಮ ನಷ್ಟದಲ್ಲಿ ನಡೆಯುತ್ತಿದೆ ವಾಣಿಜ್ಯ ಮಂಡಳಿಯಿಂದ ಸರ್ಕಾರವನ್ನ ಬೇಟಿ ಮಾಡಿದ್ದಾರೆ. ಶೀಘ್ರವೇ ಎಲ್ಲಾ ಸಮಸ್ಯೆ ಬಗೆಹರಿಸಲಾಗುವುದು. ಎಂದು ಹೇಳಿಕೆ ನೀಡಿದ್ದಾರೆ.