ವಿಧಾನಸಭೆ ಕಲಾದ ಸಮಯದಲ್ಲಿ ಕಾಂಗ್ರೆಸ್ ಶಾಸಕ ಈಶ್ವರ್ ಖಂಡ್ರೆ ಪ್ರಸ್ತಾಪ ಮಾಡಿದ ಪದವಿ ಕಾಲೇಜು ಬೋದಕ,ಭೋದಕೇತರ ಹುದ್ದೆ ಖಾಲಿ ಇರುವ ವಿಚಾರ ಹಾಗು ಅದು ಬಹಳ ವರ್ಷಗಳಿಂದ ಹುದ್ದೆಗಳು ಖಾಲಿಯಿವೆ ವಿದ್ಯಾರ್ಥಿಗಳ ಭವಿಷ್ಯ ಕುಂಠಿತಗೊಂಡಿದೆ
ಖಾಲಿ ಹುದ್ದೆಗಳನ್ನ ಕೂಡಲೇ ಭರ್ತಿ ಮಾಡಬೇಕು ಈ ಬಗ್ಗೆ ಸರ್ಕಾರದ ಆದೇಶವೂ ಆಗಿತ್ತು ನೇಮಕಾತಿ ಭರ್ತಿಯೂ ನಡೆದು ಸ್ಥಗಿತವಾಗಿದೆ
ಉಪನ್ಯಾಸಕರ ಹುದ್ದೆ ಭರ್ತಿ ಮಾಡದೆ ಹೋದರೆ ಕಷ್ಟ ಶಿಕ್ಷಣಕ್ಕೆ ಇನ್ಯಾವ ಗುಣಮಟ್ಟ ನೀಡಲು ಸಾಧ್ಯ ಎಂದು ಸದನದಲ್ಲಿ ಈಶ್ವರ್ ಖಂಡ್ರೆ ಆರೋಪ ಮಾಡಿದ್ರು ಇದಕ್ಕೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಉತ್ತರ ನೀಡಿದ್ದಾರೆ ಶಿಕ್ಷಣಕ್ಕೆ ಆದ್ಯತೆ ಕೊಟ್ಟ ಸಮಾಜ ಉನ್ನತವಾಗಿರುತ್ತದೆ, ಬೋದಕ ಹುದ್ದೆ ಬಹಳ ವರ್ಷಗಳಿಂದ ಖಾಲಿಯಿವ ಬೋದಕ ಹುದ್ದೆಗಳನ್ನ ಆದ್ಯತೆ ಮೇಲೆ ಭರ್ತಿ ಮಾಡ್ತೇವೆ,
ಆರ್ಥಿಕ ಇಲಾಖೆಯಿಂದ ಅನುಮತಿ ಸಿಗಬೇಕು ನಂತರ ನಾವು ಭರ್ತಿ ಮಾಡಿಕೊಳ್ತೇವೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಉತ್ತರ ನೀಡಿದರು ಇದಕ್ಕೆ ಕೈ ಸದಸ್ಯರ ಆಕ್ಷೇಪ ವೆಕ್ತಿವಾಗಿತ್ತು ಕಲ್ಯಾಣ ಕರ್ನಾಟಕಕ್ಕೆ ಅನ್ಯಾಯವಾಗ್ತಿದೆ ಬಹುತೇಖ ಎಲ್ಲಾ ಕೆಲಸಗಳು ಪೆಂಡಿಗ್ ಉಳದಿವೆ ಶಿಕ್ಷಣ ಇಲಾಖೆಯಲ್ಲೂ ಬಹುತೇಖ ಹುದ್ದೆ ಭರ್ತಿ ಮಾಡಿಲ್ಲ ನಮ್ಮ ಭಾಗದ ಶಿಕ್ಷಣಕ್ಕೆ ತೊಂದರೆಯಾಗ್ತಿದೆ ಎಂದು ಈಶ್ವರ್ ಖಂಡ್ರೆಗೆ ಧ್ವನಿಗೂಡಿಸಿದ ಪಿಟಿ ಪರಮೇಶ್ವರ್ ನಾಯಕ್ ಈ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡ್ತೇವೆ ಎಂದು ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.