ತೆಲುಗು ನಟಿ ಶ್ರೀರೆಡ್ಡಿ ಬಗ್ಗೆ ನಿಮಗೆ ತಿಳಿದೇ ಇರುತ್ತದೆ ಬೇಕುಬೇಕಂತಲೇ ಹಲವಾರು ಮಂದಿ ಬಗ್ಗೆ ತನಗನಿಸಿದ ರೀತಿ ಫೇಸ್ ಬುಕ್ ಮೂಲಕ ಪೋಸ್ಟ್ ಹಾಕಿ ವಿವಾದ ಸೃಷ್ಟಿಸುತ್ತಾ ಇರುತ್ತಾಳೆ. ಹಲವಾರು ನಟ ಮತ್ತು ನಟಿಯರ ಬಗ್ಗೆ ಪೋಸ್ಟ್ ಹಾಕಿ ವಿವಾದ ಸೃಷ್ಟಿಸಿದ್ದ ನಟಿ ಶ್ರೀರೆಡ್ಡಿ ಈ ಹಿಂದೆ ಸಚಿನ್ ತೆಂಡೂಲ್ಕರ್ ಅವರ ಬಗ್ಗೆಯೂ ಸಹ ಕೇವಲವಾಗಿ ಪೋಸ್ಟೊಂದನ್ನು ಹಾಕಿದ್ದಳು.
ಹೌದು ಸಚಿನ್ ತೆಂಡೂಲ್ಕರ್ ಅವರು ಹೈದರಾಬಾದ್ ಗೆ ಕ್ರಿಕೆಟ್ ಆಡಲು ಬಂದಿದ್ದಾಗ ಚಾರ್ಮಿಂಗ್ ಎನ್ನುವ ನಟಿಯ ಜೊತೆ ಸಚಿನ್ ತೆಂಡೂಲ್ಕರ್ ರೊಮ್ಯಾನ್ಸ್ ಮಾಡುತ್ತಿದ್ದರು ಎಂದು ನಟಿ ಶ್ರೀರೆಡ್ಡಿ ಫೇಸ್ ಬುಕ್ ಪೋಸ್ಟ್ ನಲ್ಲಿ ಈ ಹಿಂದೆ ಬರೆದುಕೊಂಡಿದ್ದಳು.
ಕ್ರಿಕೆಟ್ ದೇವರು ಎಂದೇ ಕರೆಯಲಾಗುವ ಕ್ರಿಕೆಟ್ ನ ದಂತಕತೆ ಸಚಿನ್ ತೆಂಡೂಲ್ಕರ್ ಅವರ ಬಗ್ಗೆ ಶ್ರೀ ರೆಡ್ಡಿ ಅವರು ಇಷ್ಟು ಕೀಳು ಮಟ್ಟದ ಆಪಾದನೆಯನ್ನ ಮಾಡಿದರು ತದನಂತರ ಅಭಿಮಾನಿಗಳು ಶ್ರೀರೆಡ್ಡಿ ವಿರುದ್ಧ ಸಾಕಷ್ಟು ಟ್ರೋಲ್ ಗಳನ್ನು ಮಾಡಿದರು. ಇನ್ನೂ ಕೆಲವರು ಈಕೆ ತಾನು ಫೇಮಸ್ ಆಗಬೇಕು ಅಂತ ಬಾಯಿಗೆ ಬಂದಂಗೆ ಮಾತನಾಡ್ತಾಳೆ ಇವಳ ಹೇಳಿಕೆಗಳನ್ನು ತಲೆಗೆ ಹಾಕಿಕೊಳ್ಳಬೇಡಿ ಎಂದು ಇವಳ ಆರೋಪವನ್ನು ನಿರಾಕರಿಸಿದರು.
ಇನ್ನೂ ಕೆಲ ದಿನಗಳ ನಂತರ ಈ ಹೇಳಿಕೆ ತಣ್ಣಗಾಗಿಹೋಯಿತು. ನಟಿ ಶ್ರೀರೆಡ್ಡಿ ಎಲ್ಲರನ್ನು ಬಿಟ್ಟು ಕ್ರಿಕೆಟ್ ದೇವರ ಬಗ್ಗೆ ಈ ರೀತಿಯಾಗಿ ಕೇವಲದ ಹೇಳಿಕೆಯನ್ನ ಯಾಕೆ ನೀಡಿದರು ಎಂಬುದು ನಿಜಕ್ಕೂ ಬೇಸರದ ಸಂಗತಿ.