No menu items!
13.9 C
Munich
Wednesday, April 29, 2026

ಮತ್ತೆ ಕನ್ನಡವನ್ನು ಅವಮಾನಿಸಿದ ರಶ್ಮಿಕಾ!

Must read

ನಟಿ ರಶ್ಮಿಕಾ ಕನ್ನಡ ಹಾಗೂ ಕನ್ನಡಿಗರ ವಿಷಯದಲ್ಲಿ ಆಗಾಗ ಎಡವುತ್ತಲೇ ಇರುತ್ತಾಳೆ. ಈಕೆ ಬೇಕಂತ ಕನ್ನಡವನ್ನು ನಿರಾಕರಣೆ ಮಾಡುತ್ತಾಳೋ ಅಥವಾ ಈಕೆ ಇರುವುದೇ ಹಾಗೆಯೋ ದೇವ್ರಾಣೆಗೂ ಅರ್ಥವಾಗಿಲ್ಲ. ಈ ಹಿಂದೆ ಸಾಕಷ್ಟು ಬಾರಿ ಕನ್ನಡದ ವಿರೋಧವಾಗಿ ನಡೆದುಕೊಂಡಿರುವ ರಶ್ಮಿಕಾ ಇದೀಗ ಮತ್ತೊಂದು ತಲಹರಟೆ ನಡೆಯಿಂದ ವಿವಾದಕ್ಕೆ ಈಡಾಗಿದ್ದಾಳೆ.

 

 

ಪೊಗರು ಚಿತ್ರದ ಪ್ರಮೋಷನ್ ವಿಚಾರವಾಗಿ ಇತ್ತೀಚೆಗಷ್ಟೇ ಖಾಸಗಿ ವಾಹಿನಿಯೊಂದು ರಶ್ಮಿಕಾಳ ಜೊತೆ ಸಂದರ್ಶನ ನಡೆಸಿತ್ತು. ಈ ಸಂದರ್ಶನದಲ್ಲಿ ಮಾತನಾಡುವ ವೇಳೆ ನಟಿ ರಶ್ಮಿಕಾ ಕನ್ನಡದ ಬದಲು ತೆಲುಗು ಪದಗಳನ್ನು ಹೆಚ್ಚಾಗಿ ಬಳಸತೊಡಗಿದಳು. ಹೌದು ಕನ್ನಡ ಚಿತ್ರವೊಂದರ ಬಗೆಗಿನ ಸಂದರ್ಶನದಲ್ಲಿ ತಾನು ಹುಟ್ಟಿ ಬೆಳೆದ ಕನ್ನಡ ನಾಡಿನ ಕನ್ನಡ ಭಾಷೆಯಲ್ಲಿ ಮಾತನಾಡುವ ವೇಳೆ ಕಳೆದೆರಡು ವರ್ಷಗಳಿಂದ ಅರ್ದಂಬರ್ದ ಕಲಿತಿರುವ ತೆಲುಗು ಭಾಷೆಯ ಪದಗಳನ್ನು ಬಳಸುವುದು ಉದ್ಧಟತನವಲ್ಲವೇ ಮತ್ತೇನು?

 

 

ರಶ್ಮಿಕಾ ಬೇಕಂತಲೇ ತೆಲುಗು ಪದಗಳನ್ನು ಬಳಸಿದ್ದಾಳೆ ಎಂಬುದು ಮೇಲ್ನೋಟಕ್ಕೆ ತಿಳಿದುಬರುತ್ತದೆ. ಇನ್ನೂ ಖಾಸಗಿ ವಾಹಿನಿಯ ಈ ಸಂದರ್ಶನವನ್ನು ವೀಕ್ಷಿಸಿದ ಪ್ರೇಕ್ಷಕರು ರಶ್ಮಿಕಾ ವಿರುದ್ಧ ಎಂದಿನಂತೆಯೇ ಮರ್ಯಾದೆ ರಹಿತ ಉಪಚಾರವನ್ನು ಮಾಡಿದ್ದಾರೆ. ಇದನ್ನೆಲ್ಲ ನೋಡುತ್ತಿದ್ದರೆ ಈಕೆ ಅಭಿನಯಿಸಿರುವ ಚಿತ್ರವನ್ನ ಕನ್ನಡ ಅಭಿಮಾನಿಗಳು ಮತ್ತು ಕನ್ನಡ ಸಿನಿ ಪ್ರೇಕ್ಷಕರು ಚಿತ್ರಮಂದಿರಕ್ಕೆ ತೆರಳಿ ವೀಕ್ಷಿಸುತ್ತಾರಾ ಎಂಬುದೇ ಪ್ರಶ್ನೆ..! ಇದನ್ನೆಲ್ಲಾ ಚಿಂತಿಸಬೇಕಾದದ್ದು ಚಿತ್ರ ನಿರ್ಮಿಸುವ ನಿರ್ಮಾಪಕರು ಮತ್ತು ನಿರ್ದೇಶಕರ ಕರ್ತವ್ಯವೇ ಸರಿ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article