‘ಯಾಕಣ್ಣ’ ಟ್ರೋಲ್ ಮಾಡಿದವರಿಗೆ ಇದು ಚಪ್ಪಲಿಯ ಏಟು!

Date:

ಅಯ್ಯೋ ನಾವು ಇಂಥ ಸಮಾಜದಲ್ಲಿ ಬದುಕುತ್ತಿದ್ದೀವಾ ಎಂದು ಕೆಲವೊಮ್ಮೆ ನಮಗೆ ತೀರಾ ಕೆಳಮಟ್ಟದ ಯೋಚನೆ ನಮ್ಮ ತಲೆಯಲ್ಲಿ ಬಂದು ಬಿಡುತ್ತದೆ. ಇಂತಹ ಬೇಸರದ ಯೋಚನೆ ನಮಗೆ ಮತ್ತು ನಿಮಗೆಲ್ಲರಿಗೂ ಬರುವುದು ಪಬ್ಲಿಕ್ ಟಾಯ್ಲೆಟ್ ಎಂಬ ಕಿರು ಚಿತ್ರವನ್ನು ವೀಕ್ಷಿಸಿದ ನಂತರ.. ಹೌದು ಯೂಟ್ಯೂಬ್ ನಲ್ಲಿ ಇತ್ತೀಚೆಗಷ್ಟೇ ಪಬ್ಲಿಕ್ ಟಾಯ್ಲೆಟ್ ಎಂಬ ಶಾರ್ಟ್ ಮೂವಿ ರಿಲೀಸ್ ಆಗಿದೆ. ಈ ಕಿರುಚಿತ್ರವನ್ನು ಸಂಪೂರ್ಣವಾಗಿ ಯಾಕಣ್ಣ ಎಂಬ ವೈರಲ್ ವಿಡಿಯೋ ಮೇಲೆ ಚಿತ್ರೀಕರಣ ಮಾಡಲಾಗಿದೆ.

 

 

 

ಮನೆ ಇಲ್ಲದೆ ಗುಡಿಸಲಿನಲ್ಲಿರುವ ತೀರಾ ಬಡ ದಂಪತಿಯೊಬ್ಬರು ಮನುಷ್ಯನಾಗಿ ಹುಟ್ಟಿದ ಮೇಲೆ ಪ್ರತಿಯೊಬ್ಬರೂ ಸಹ ಮಾಡುವ ಕ್ರಿಯೆಯನ್ನು ಮಾಡಲು ಸಾರ್ವಜನಿಕ ಶೌಚಾಲಯಕ್ಕೆ ಬಂದಿರುತ್ತಾರೆ. ದಂಪತಿ ಈ ಕ್ರಿಯೆಯನ್ನು ಎಲ್ಲಿ ಮಾಡಿದರೂ ಸಹ ಅದು ಲೀಗಲ್. ಇಷ್ಟಕ್ಕೂ ಅವರು ದಂಪತಿಗಳು ಬದಲಾಗಿ ಅಕ್ರಮ ಸಂಬಂಧವಾಗಲಿ ಅಥವಾ ಅತ್ಯಾಚಾರ ವನ್ನಾಗಲಿ ಅವರು ಅಲ್ಲಿ ನಡೆಸುತ್ತಿರಲಿಲ್ಲ.  ಆ ಪಾಪದ ಬಡ ದಂಪತಿಗಳ ವೈಯಕ್ತಿಕ ವಿಷಯವನ್ನು ಕದ್ದು ಮೊಬೈಲ್ ನಲ್ಲಿ ಚಿತ್ರೀಕರಣ ಮಾಡಿ ವೈರಲ್ ಮಾಡಿದರು ಕಿಡಿಗೇಡಿಗಳು..

 

 

ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಷ್ಟೇ ಅಲ್ಲದೆ ಅದಕ್ಕೆ ಕೆಲ ಕೆಳಮಟ್ಟದ ಮನಸ್ಥಿತಿವುಳ್ಳ ಜನರು ಟ್ರೋಲ್ ಬೇರೆ ಮಾಡಿದರು. ಪದೇ ಪದೇ ಟ್ರೋಲ್ ಮಾಡುವ ಮುಖಾಂತರ ಈ ವಿಡಿಯೋ ವೈರಲ್ ಆಗುವ ಹಾಗೆ ಮಾಡಿದರು. ಟಿಕ್ ಟಾಕ್ ನಲ್ಲಿಯೂ ಸಹ ಯಾಕಣ್ಣ ಎಂಬ ರಿಮಿಕ್ಸ್ ಸಾಂಗ್ ಮಾಡಿ ಅದಕ್ಕೆ ಡಾನ್ಸ್ ಮಾಡತೊಡಗಿದರು ಈಗಿನ ಯುವಕ ಮತ್ತು ಯುವತಿಯರು..

 

ತಮ್ಮ ವೈಯಕ್ತಿಕ ವಿಷಯ ಇಷ್ಟು ವೈರಲ್ ಆದ ನಂತರ ಆ ಯುವತಿ ಮತ್ತೊಂದು ವಿಡಿಯೋದಲ್ಲಿ ತನ್ನ ಅಳಲು ತೋಡಿಕೊಂಡಿದ್ದಳು. ನನ್ನ ಬದುಕನ್ನು ಹಾಳು ಮಾಡಿದರಲ್ಲ ನಾನೀಗ ಎಲ್ಲಿ ಹೋಗಲಿ ನಾನು ಏನು ಮಾಡಲಿ ನಾನು ಹೇಗೆ ಬದುಕಲಿ ಎಂದು ಗೋಳಾಡುತ್ತಾ ನೀವು ಜೀವನದಲ್ಲಿ ಉದ್ಧಾರವಾಗುವುದಿಲ್ಲ ನಿಮಗೆ ಅಕ್ಕತಂಗಿಯರು ಇದ್ದರೆ ಹೀಗೆ ಮಾಡುತ್ತಿದ್ರಾ? ಈಗ ನನ್ನ ಪರಿಸ್ಥಿತಿ ಏನು ನೀವು ನಾಶವಾಗಿ ಹೋಗುತ್ತೀರಾ ಎಂದು ಹಿಡಿಶಾಪ ಹಾಕಿದಳು..

 

 

 

ಇಷ್ಟು ನಮಗೆಲ್ಲರಿಗೂ ತಿಳಿದಿರುವ ವಿಷಯ ಆದರೆ ಈ ವಿಡಿಯೋ ಚಿತ್ರೀಕರಣ ಮಾಡಿ ಸಮಾನ ಮನಸ್ಥಿತಿ ಈ ಘಟನೆಗಳಲ್ಲಿ ಹೇಗಿತ್ತು? ಆತ ತಾನು ಮಾಡಿದ ತಪ್ಪಿಗೆ ಪಶ್ಚಾತ್ತಾಪವನ್ನ ಹೇಗೆ ಪಟ್ಟ? ಯುವತಿಯ ಪರಿಸ್ಥಿತಿ ಬದಲಾದ ನಂತರ ಆತನ ಸ್ಥಿತಿ ಏನಾಯ್ತು? ವಿಡಿಯೋ ಮಾಡುವಾಗ ಇದ್ದ ಆತನ ಹುಮ್ಮಸ್ಸು ಹುಡುಗಿಯ ಅಳಲನ್ನು ನೋಡಿದ ನಂತರ ಯಾವ ರೀತಿ ಬದಲಾಯಿತು? ಎಂಬ ವಿಷಯಗಳನ್ನು ಪಬ್ಲಿಕ್ ಟಾಯ್ಲೆಟ್ ಶಾರ್ಟ್ ಮೂವಿ ಮೂಲಕ ತುಂಬಾ ಅಚ್ಚುಕಟ್ಟಾಗಿ ತೋರಿಸಿದ್ದಾರೆ. ಯಾಕಣ್ಣಾ ವಿಡಿಯೋ ಚಿತ್ರೀಕರಿಸಿ ವಿಕೃತಿ ಮೆರೆದ ಮತ್ತು ಅದನ್ನು ಟ್ರೋಲ್ ಮಾಡಿ ಅನಾಗರಿಕರಂತೆ ವರ್ತಿಸಿದ ಜನರಿಗೆ ನಿಜಕ್ಕೂ ಪಬ್ಲಿಕ್ ಟಾಯ್ಲೆಟ್ ಕಿರುಚಿತ್ರ ಚಪ್ಪಲಿ ಏಟೇ….

 

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...