No menu items!
11.1 C
Munich
Wednesday, April 29, 2026

ಹುಡುಗಿಯರಿಗೆ ದುಡ್ಡಿನ ಆಸೆ ತೋರಿಸಿ ನೀಲಿಚಿತ್ರ ತೆಗೆದ ಗೆಹನಾ ಗಳಿಸಿದ್ದೆಷ್ಟು?

Must read

ಬಾಲಿವುಡ್‌ ಮತ್ತು ಟಾಲಿವುಡ್‌ನ ಕೆಲವು ಸಿನಿಮಾಗಳಲ್ಲಿ ಕಾಣಿಸಿಕೊಂಡ ನಟಿ ಗೆಹನಾ ವಸಿಷ್ಠ ಅವರು ನೀಲಿ ಚಿತ್ರಗಳ ದಂಧೆಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಸದ್ಯ ಮುಂಬೈ ಪೊಲೀಸರ ಅತಿಥಿ ಆಗಿರುವ ಈ ನಟಿಯ ಮೇಲೆ ಹಲವು ಆರೋಪಗಳು ಕೇಳಿಬಂದಿವೆ. ಯುವತಿಯರಿಗೆ ಹಣದ ಆಮಿಷವೊಡ್ಡಿ ಅಶ್ಲೀಲ ದೃಶ್ಯಗಳಲ್ಲಿ ನಟಿಸುವಂತೆ ಆಕೆ ಒತ್ತಾಯಿಸುತ್ತಿದ್ದರು ಎಂಬ ವಿಷಯ ಬಹಿರಂಗ ಆಗಿದೆ.
ಸಿನಿಮಾದಲ್ಲಿ ನಟಿಸಬೇಕು ಎಂಬ ಆಸೆ ಇಟ್ಟುಕೊಂಡು ಬರುವ ಹದಿಹರೆಯದ ಯುವತಿಯರಿಗೆ ಗೆಹನಾ ಹಣದ ಆಮಿಷ ಒಡ್ಡುತ್ತಿದ್ದರು. ಮಾಡೆಲ್‌ಗಳಿಗೆ 15ರಿಂದ 20 ಸಾವಿರ ರೂ.ಗಳವರೆಗೆ ಹಣ ನೀಡುತ್ತಿದ್ದರು. ನಂತರ ಅವರನ್ನು ‘ಅಂತಹ’ ದೃಶ್ಯಗಳಲ್ಲಿ ನಟಿಸುವಂತೆ ಮಾಡುತ್ತಿದ್ದರು. ಹೀಗೆ ಶೂಟಿಂಗ್‌ ಮಾಡಿಕೊಂಡ ನೀಲಿ ಚಿತ್ರಗಳನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್‌ ಮಾಡಿ ಅವುಗಳಿಂದ ಗೆಹನಾ ಹಣ ಗಳಿಸುತ್ತಿದ್ದರು ಎನ್ನಲಾಗಿದೆ.
ಅಶ್ಲೀಲ ದೃಶ್ಯಗಳನ್ನು ಚಿತ್ರಿಸಿ ಅವುಗಳನ್ನು ತಮ್ಮ ವೆಬ್‌ಸೈಟ್‌ಗೆ ಅಪ್‌ಲೋಡ್‌ ಮಾಡಿದ ಆರೋಪದ ಮೇಲೆ ಗೆಹನಾರನ್ನು ಬಂಧಿಸಲಾಗಿದೆ. 87ಕ್ಕೂ ಹೆಚ್ಚು ವಿಡಿಯೋಗಳನ್ನು ಅವರು ಅಪ್‌ಲೋಡ್‌ ಮಾಡಿದ್ದಾರೆ. ಈ ವೆಬ್‌ಸೈಟ್‌ಗೆ ಚಂದಾದಾರರಾಗಲು ಬಯಸುವವರು 2 ಸಾವಿರ ರೂ. ನೀಡಬೇಕಿತ್ತು. 36 ಲಕ್ಷ ರೂ. ಹೊಂದಿರುವ ಗೆಹನಾ ಅವರ ಮೂರು ಬ್ಯಾಂಕ್‌ ಖಾತೆಗಳ ಮೇಲೆ ಪೊಲೀಸರು ಈಗ ಕಣ್ಣಿಟ್ಟಿದ್ದಾರೆ. ಈ ವೆಬ್‌ಸೈಟ್‌ನಿಂದಲೇ ಗೆಹನಾ ಇಷ್ಟು ಹಣ ಸಂಪಾದಿಸಿದ್ದರು ಎನ್ನಲಾಗಿದೆ.
ಆದರೆ ಈ ಯಾವ ಆರೋಪಗಳನ್ನೂ ಗೆಹನಾ ವಸಿಷ್ಠ ಒಪ್ಪಿಕೊಳ್ಳುತ್ತಿಲ್ಲ. ಈ ಬಗ್ಗೆ ಅವರ ಲೀಗಲ್‌ ಟೀಮ್‌ ಒಂದು ಹೇಳಿಕೆ ಬಿಡುಗಡೆ ಮಾಡಿದೆ. ‘ಗೆಹನಾ ವಸಿಷ್ಠ ನಿರಪರಾಧಿ. ಯಾವುದೇ ಅಶ್ಲೀಲ ಸಿನಿಮಾ ಹಗರಣದಲ್ಲಿ ಅವರು ತೊಡಗಿಕೊಂಡಿಲ್ಲ. ಅವರನ್ನು ದುರುದ್ದೇಶದಿಂದ ಸಿಕ್ಕಿಸಲಾಗಿದೆ. ಅವರ ಹೆಸರಿಗೆ ಕಳಂಕ ತರಬೇಕು ಎಂಬ ಉದ್ದೇಶದಿಂದ ವಿರೋಧಿಗಳು ಈ ರೀತಿ ಮಾಡಿದ್ದಾರೆ’ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.


ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಇನ್ನೂ ಮದುವೆ ಆಗಿಲ್ಲ. ಆದರೆ ಹಲವರ ಜೊತೆ ಅವರು ಪ್ರೀತಿಯಲ್ಲಿ ಮುಳುಗಿದ್ದರು. ಅನೇಕ ನಟಿಯರ ಜೊತೆ ಅವರ ಹೆಸರು ಕೇಳಿಬರುತ್ತಲೇ ಇದೆ. ಅದರಲ್ಲಿ ಪಾಕಿಸ್ತಾನ ಮೂಲದ ಸೋಮಿ ಅಲಿ ಕೂಡ ಒಬ್ಬರು. ತಮ್ಮ 16ನೇ ವಯಸ್ಸಿನಲ್ಲಿಯೇ ಸಲ್ಮಾನ್‌ ಖಾನ್‌ ಮೇಲೆ ಅವರಿಗೆ ಕ್ರಶ್‌ ಆಗಿತ್ತು. ಹಾಗಾಗಿ ಅವರು ಮನೆ ಬಿಟ್ಟು ಮುಂಬೈಗೆ ಬಂದಿದ್ದರು.
ಸಲ್ಮಾನ್‌ರನ್ನು ಮದುವೆ ಆಗಬೇಕು ಎಂಬ ಉದ್ದೇಶ ಹೊಂದಿದ್ದ ಸೋಮಿ, ಬಾಲಿವುಡ್ ಸಿನಿಮಾಗಳಲ್ಲಿ ನಟನೆ ಶುರುಮಾಡಿದರು. ಆದರೆ ಅವರಿಗೆ ನಟನೆಯಲ್ಲಿ ಕಿಂಚಿತ್ತೂ ಆಸಕ್ತಿ ಇರಲಿಲ್ಲ. ರಿಹರ್ಸಲ್‌ಗಳಲ್ಲಿ ಅವರು ಭಾಗವಹಿಸುತ್ತಿರಲಿಲ್ಲ. ನಿರ್ದೇಶಕರಿಗೆ ಸೋಮಿ ಅಲಿಯ ಈ ಗುಣಗಳು ಇಷ್ಟ ಆಗುತ್ತಿರಲಿಲ್ಲವಂತೆ. ಹಾಗೋ ಹೀಗೋ 1999ರವರೆಗೆ ಒಂದಷ್ಟು ಸಿನಿಮಾಗಳಲ್ಲಿ ಸೋಮಿ ನಟಿಸಿದರು. ಜೊತೆಗೆ ಸಲ್ಮಾನ್‌ ಖಾನ್‌ ಜೊತೆ ಡೇಟಿಂಗ್‌ ಕೂಡ ಮಾಡಿದ್ದರು ಎಂಬ ಮಾತಿಗೆ.
ಕೊನೆಗೂ ಸಲ್ಮಾನ್‌ ಖಾನ್‌ ಜೊತೆ ಮದುವೆ ಆಗಲು ಸೋಮಿಗೆ ಸಾಧ್ಯವಾಗಲೇ ಇಲ್ಲ. ‘ನಿಜವಾದ ಪ್ರೀತಿಯನ್ನು ಹುಡುಕಿಕೊಂಡು ಹೋಗಿ ನಾನು ತುಂಬ ತಪ್ಪು ಮಾಡಿದೆ. ಕೊನೆಗೂ ಅದು ನನಗೆ ಸಿಗಲೇ ಇಲ್ಲ. ಹಾಗಂತ ನನಗೆ ಪಶ್ಚಾತ್ತಾಪ ಇಲ್ಲ. ಯಾಕೆಂದರೆ ಅದನ್ನೆಲ್ಲ ನಾನು ಮನಸಾರೆ ಮಾಡಿದ್ದೆ. 16ರಿಂದ 24ನೇ ವಯಸ್ಸಿನವರೆಗೆ ನನ್ನ ಜರ್ನಿ ತುಂಬ ಏಳು-ಬೀಳುಗಳಿಂದ ಕೂಡಿತ್ತು. ನಾನು ಯಾರಿಗಾಗಿ ಮುಂಬೈಗೆ ಬಂದಿದ್ದೆನೋ ಅವರ ಜೊತೆ ನನ್ನ ಸಂಬಂಧ ಕಡಿದುಕೊಂಡು 1999ರಲ್ಲಿ ಭಾರತ ಬಿಟ್ಟು ಬಂದೆ’ ಎಂದಿದ್ದಾರೆ ಸೋಮಿ. ಈಗ ಅವರು ಅಮೆರಿಕದಲ್ಲಿ ಎನ್‌ಜಿಓ ನಡೆಸುತ್ತಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article