ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಕ್ರೇಜಿ ಕ್ವೀನ್ ರಕ್ಷಿತಾ ಈ ಇಬ್ಬರು ಒಟ್ಟಿಗೆ ಅಭಿನಯಿಸಿರುವ ಯಾವ ಚಿತ್ರಗಳು ಸಹ ಬಾಕ್ಸಾಫೀಸ್ ನಲ್ಲಿ ಸೋತಿಲ್ಲ. ಇವರು ಒಟ್ಟಿಗೆ ನಟಿಸಿರುವ ಚಿತ್ರಗಳೆಲ್ಲವೂ ಬ್ಲಾಕ್ ಬಸ್ಟರ್ ಹೀಗಾಗಿ ಈ ಜೋಡಿಯನ್ನ ಸೂಪರ್ ಹಿಟ್ ಜೋಡಿ ಎಂದೇ ಕರೆಯಲಾಗುತ್ತದೆ. ಈ ಸಿನಿಮಾ ಹೊರತಾಗಿ ನಟ ದರ್ಶನ್ ಮತ್ತು ನಟಿ ರಕ್ಷಿತಾ ಇಬ್ಬರೂ ಸಹ ಉತ್ತಮ ಸ್ನೇಹಿತರು.
ನಿನ್ನೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹುಟ್ಟುಹಬ್ಬ ಇತ್ತು. ಕೊರೋನಾವೈರಸ್ ಕಾರಣದಿಂದಾಗಿ ಈ ಬಾರಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹುಟ್ಟುಹಬ್ಬವನ್ನು ತುಂಬ ಸರಳವಾಗಿ ಆಚರಿಸಿಕೊಂಡಿದ್ದಾರೆ. ಮನೆಮುಂದೆ ಅಭಿಮಾನಿಗಳ ದಂಡು ಇಲ್ಲದೆ ಈ ಬಾರಿ ದರ್ಶನ್ ಅವರ ಹುಟ್ಟುಹಬ್ಬವನ್ನು ಆನ್ ಲೈನ್ ವಿಶ್ ಮಾಡುವುದರ ಮೂಲಕ ಅಭಿಮಾನಿಗಳು ಆಚರಣೆ ಮಾಡಿದ್ದಾರೆ. ನಟಿ ರಕ್ಷಿತಾ ಅವರು ಕೂಡ ದರ್ಶನ್ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ವಿಶ್ ಮಾಡಿದ್ದು ಹೀಗೆ..
https://twitter.com/RakshithaPrem/status/1361385282394746880?s=20
ದರ್ಶನ್ ಅವರೊಟ್ಟಿಗಿನ ಫೋಟೋ ಮತ್ತು ವಿಡಿಯೋ ಹಂಚಿಕೊಂಡಿರುವ ನಟಿ ರಕ್ಷಿತಾ ಅವರು ಹುಟ್ಟುಹಬ್ಬದ ಶುಭಾಶಯಗಳು ದರ್ಶನ್ , ಯಾವಾಗಲೂ ಖುಷಿಯಾಗಿರಿ , ದೇವರು ಒಳ್ಳೆಯದು ಮಾಡಲಿ ಎಂದು ಶುಭ ಕೋರಿದ್ದಾರೆ.