ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ದಿನಕರ್ ತೂಗುದೀಪ್ ಅವರ ಕಾಂಬಿನೇಷನ್ ನಲ್ಲಿ ಚಿತ್ರವೊಂದು ಮೂಡಿಬರಲಿದೆ ಎಂಬ ಸುದ್ದಿ ಇದೀಗ ಎಲ್ಲೆಡೆ ಹರಿದಾಡುತ್ತಿದೆ. ಈ ಹಿಂದೆ ನವಗ್ರಹ ಮತ್ತು ಸಾರಥಿ ಚಿತ್ರಗಳನ್ನು ದರ್ಶನ್ ಅವರಿಗೆ ನಿರ್ದೇಶನ ಮಾಡಿದ್ದ ದಿನಕರ ತೂಗುದೀಪ ಅವರು ಇದೀಗ ಮೊದಲ ಬಾರಿಗೆ ಪುನೀತ್ ರಾಜ್ ಕುಮಾರ್ ಅವರಿಗೆ ನಿರ್ದೇಶನ ಮಾಡಲು ತಯಾರಾಗಿದ್ದಾರೆ.
ಅಣ್ಣಾವ್ರು ಮತ್ತು ತೂಗುದೀಪ ಕುಟುಂಬ ಈ ಹಿಂದಿನಿಂದಲೂ ಸಹ ಪರಸ್ಪರ ಸ್ನೇಹ ಬಾಂಧವ್ಯವನ್ನು ಹೊಂದಿರುವಂತಹ ಕುಟುಂಬಗಳಾಗಿವೆ. ಅಂತಹ ಕುಟುಂಬಗಳು ಇದೀಗ ನಿರ್ದೇಶನ ಮತ್ತು ನಟನೆಯಲ್ಲಿ ಒಂದಾಗುತ್ತಿರುವುದು ನಿಜಕ್ಕೂ ಬಿಗ್ ನ್ಯೂಸ್.
ದಿನಕರ್ ತೂಗುದೀಪ ಅವರ ಕಥೆ ಪುನೀತ್ ಅವರಿಗೆ ಹಿಡಿಸಿದ್ದು ನಟಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನಲಾಗುತ್ತಿದೆ. ಇನ್ನೂ ಈ ಚಿತ್ರಕ್ಕೆ ತಾರಾಗಣವನ್ನ ಆದಷ್ಟು ಬೇಗ ಆಯ್ಕೆ ಮಾಡಲಾಗುವುದು ಎಂದು ಸಹ ಸುದ್ದಿ ಇದೆ. ಇನ್ನು ಮೂಲಗಳ ಪ್ರಕಾರ ಇದೊಂದು ಆ್ಯಕ್ಷನ್ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾವಂತೆ. ಒಟ್ಟಿನಲ್ಲಿ ಹಲವಾರು ವರ್ಷಗಳ ನಂತರ ಹುಂಡಿ ಚಿತ್ರಕ್ಕಾಗಿ ಅಣ್ಣಾವ್ರ ಮತ್ತು ತೂಗುದೀಪ ಅವರ ಕುಟುಂಬ ಮುಂದಾಗುತ್ತಿರುವುದು ನಿಜಕ್ಕೂ ಖುಷಿಯ ಸಂಗತಿ..