ಯಾರಪ್ಪಾ ಹೇಳಿದ್ದು ಕನ್ನಡದಲ್ಲಿ ಒಳ್ಳೇ ಸಿನಿಮಾ ಬರಲ್ಲ ಅಂತ..? ಕರ್ವ ನೋಡ್ಕೊಂಡ್ ಬಂದು ಆ ಮಾತು ಹೇಳಿ ನೋಡೋಣ..!

Date:

ನಾನು ಸಾಮಾನ್ಯವಾಗಿ ಒಂದೇ ದಿನ ಎರೆಡೆರೆಡು ಸಿನಿಮಾ ನೋಡಲ್ಲ. ಆದ್ರೆ ನಿನ್ನೆ ಬೆಳಗ್ಗೆ ಕೋಮಾ ನೋಡಿ ಒಳ್ಳೇ ಮೂಡಲ್ಲಿದ್ದ ನನಗೆ ಸಂಜೆ ಕರ್ವ ಸಹ ನೋಡೋಣ ಅಂತ ಮನಸ್ಸಾಯ್ತು. ಮೊದಲೇ ಗೆಳೆಯ ತಿಲಕ್ ಹಾಗೂ ರೋಹಿತ್ ನಟಿಸಿರೋ ಸಿನಿಮಾ ಬೇರೆ. ಚೆನ್ನಾಗಿಲ್ಲ ಅಂದ್ರೆ ಮುಲಾಜಿಗೆ ಚೆನ್ನಾಗಿದೆ ಅಂತ ಹೇಳೋದು ನಂಗಿಷ್ಟ ಆಗಲ್ಲ… ಹಾಗಾಗಿ ಗೆಳೆಯರ ಸಿನಿಮಾನ ಗೊತ್ತಿಲ್ಲದೇ ನೋಡಿ ಬರ್ತೀನಿ, ಚೆನ್ನಾಗಿಲ್ಲ ಅಂದ್ರೆ ಸುಮ್ಮನಾಗಿಬಿಡ್ತೀನಿ. ಆದ್ರೆ ತಿಲ್ಕ್ ಬರಬೇಕು ಅಂತ ಮುಂಚೇನೇ ಹೇಳಿದ್ರಿಂದ ಆಗಿದ್ದಾಗ್ಲಿ ಅಂತ ಹೋದೆ..! ನನಗೆ ಸಿನಿಮಾ ಹೇಗಿರುತ್ತೋ ಅನ್ನೋ ಭಯಕ್ಕಿಂತ, ಚೆನ್ನಾಗಿಲ್ಲ ಅಂದ್ರೆ ಅದನ್ನ ಇವರಿಗೆ ಹೇಗೆ ಹೇಳೋದು ಅನ್ನೋ ಟೆನ್ಷನ್ನೇ ಜಾಸ್ತಿ ಇತ್ತು..! ಆಗಿದ್ದಾಗ್ಲಿ ಅಂತ ಹೋದೆ, ಸಿನಿಮಾ ಶುರುವಾಯ್ತು, ಅದೊಂದು ಹಾರರ್-ಥ್ರಿಲ್ಲರ್ ಸಿನಿಮಾ..! ಏನ್ ಗುರೂ ಎರಡು ಟ್ರ್ಯಾಕ್ ಅಲ್ಲಿ ಸಿನಿಮಾ ಹೋಗ್ತಿದೆ, ಆದ್ರೆ ಒಂದಕ್ಕೊಂದು ಕನೆಕ್ಷನ್ನೇ ಇಲ್ವಲ್ಲಾ ಅನ್ನೋ ಟೈಮಿಗೆ ಇಂಟರ್ವಲ್ಲಲ್ಲಿ ತಲೆಗೆ ಹುಳ ಬಿಟ್ಟುಬಿಡ್ತಾರೆ ನಿರ್ದೇಶಕರು. ಏನ್ ಗುರೂ ಈ ರೇಂಜಿಗೆ ಲಿಂಕ್ ಮಾಡ್ಬಿಟ್ರು ಅಂತ ಖುಷಿ ಆಗುತ್ತೆ..! ಪಾತ್ರಗಳ ಆಯ್ಕೆಯಲ್ಲಿ ಸಖತ್ ಕೆಲಸ ಮಾಡಿರೋ ನಿರ್ದೇಶಕರು ಎಲ್ಲೂ ಯಾಮಾರೋದೇ ಇಲ್ಲ..! ಕನ್ನಡ ಪ್ರೇಕ್ಷಕ ಸಾಕಷ್ಟು ಹಾರರ್ ಸಿನಿಮಾಗಳನ್ನು ನೋಡಿದ್ದಾನೆ ಆದ್ರೆ, ಈ ತರಹ ಥ್ರಿಲ್ಲರ್ ಸಹ ಜೊತೆಗೆ ಸೇರಿಸಿಕೊಂಡು ಒಂದು ಕಿಡ್ನಾಪ್ ಸ್ಟೋರಿಯ ಸುತ್ತ ಸುತ್ತು ಹಾಕಿದ್ದು ಇದೇ ಮೊದಲು.ದೂ ಸಹ ಸಿಕ್ಕಾಪಟ್ಟೆ ಟ್ವಿಸ್ಟ್ ಮೇಲೆ ಟ್ವಿಸ್ಟ್..! ತಾಂತ್ರಿಕವಾಗಿ ಸಿನಿಮಾ ತುಂಬಾ ಚೆನ್ನಾಗಿದೆ ಅಂದ್ರೆ ತಪ್ಪಾಗಲ್ಲ. ಸಿನಿಮಾದಲ್ಲಿ ಹಾಡುಗಳು ಇಲ್ಲದಿರುವುದೇ ಸಿನಿಮಾಗೆ ಪ್ಲಸ್ ಪಾಯಿಂಟ್… ಬರೀ ದೆವ್ವದ ಸುತ್ತ ಸುತ್ತದೇ ಅಲ್ಲಲ್ಲಿ ದೆವ್ವದ ಝಲಕ್ ಕೊಟ್ಟು ಎದೆ ಜಲ್ಲೆನಿಸೋ ಕೆಲಸ ಚೆನ್ನಾಗಿ ಮಾಡಿದ್ದಾರೆ. ತಿಲಕ್ ಹಾಗೂ ರಾಕ್ ಸ್ಟಾರ್ ರೋಹಿತ್ ಅಕಂಟಿಗೆ ಒಂದು ಸೂಪ್ರ್ ಸಿನಿಮಾ ಸೇರಿಕೊಂಡಿದೆ ಅಂದ್ರೆ ತಪ್ಪಾಗಲ್ಲ..! ಇಡೀ ಸಿನಿಮಾ ನೋಡಿದಾಗ ಕೊನೆಯ ತನಕ ಹೀರೋ ಯಾರು, ವಿಲ್ನ್ ಯಾರು ಅಂತ ಗೊತ್ತಾಗದೇ ಇರೋದು ಸಿನಿಮಾದ ಹೊಸ ಸ್ಟೈಲು..! ಇಡೀ ಸಿನಿಮಾದಲ್ಲಿ ಪ್ರೇಕ್ಷಕನನ್ನು, ಭಯದ ನಡುವೆಯೂ ವಿಜಯ್ ಚೆಂಡೂರ್ ಹೊಟ್ಟೆ ಹುಟ್ಟಾಗಿಸುವಂತೆ ನಗಿಸ್ತಾರೆ. ಕನ್ನಡಕ್ಕೊಬ್ಬ ಪ್ರಾಮಿಸಿಂಗ್ ಹಾಸ್ಯನಟ ಸಿಕ್ಕಿದ್ದಾರೆ ಅಂದ್ರೆ ಅತಿಶಯೋಕ್ತಿ ಅಲ್ಲ..! ರವಿ ಬಸ್ರೂರು ಹಿನ್ನೆಲೆ ಸಂಗೀತವೇ ಸಿನಿಮಾದ ಬಹಳ ದೊಡ್ಡ ಅಸ್ತ್ರ. ಮೋಹನ್ ಕ್ಯಾಮೆರಾ ಕೈಚಳಕವೂ ಸಖತ್ತಾಗಿದೆ. 6-5=2 ಚಿತ್ರದ ನಿರ್ಮಾಪಕ ಕೃಷ್ಣ ಚೈತನ್ಯ ಅವರಿಗೆ ಹಾರರ್ ಸಿನಿಮಾಗಳು ಕೈ ಹಿಡೀತಾವೆ ಅನ್ನೋದು ಕರ್ವದಿಂದ ಮತ್ತೊಮ್ಮೆ ಸಾಭೀತಾಗಿದೆ. ಹೀರೋಯಿನ್ ಗಳ ಆಯ್ಕೆ ತುಂಬಾ ಗ್ಲಾಮರಸ್ ಆಗಿ ಆಗಿದೆ ಅನ್ನೋದು ನಾಯಕಿಯರನ್ನು ನೋಡಿದರೆ ಅರ್ಥವಾಗುತ್ತೆ..! ಅಲ್ಲಲ್ಲಿ ಕೆಲವು ಚಿಕ್ಕಪುಟ್ಟ ತಪ್ಪುಗಳಿ‍ದ್ದರೂ ಅದು ಸಿನಿಮಾದ ವೇಗದ ನಡುವೆ, ದೆವ್ವದ ಆಟದ ನಡುವೆ ಗೊತ್ತಾಗೋದಿಲ್ಲ..! ನವನೀತ್ ಹೊಸ ನಿರ್ದೇಶಕ ಅಂತ ಅನಿಸೋದಿಲ್ಲ, ಕರ್ವ-೨ ಮಾಡ್ತೀವಿ ಅಂತ ಸಿನಿಮಾದ ಕೊನೆಯಲ್ಲಿ ಹೇಳಿದ್ದಾರೆ. ಕರ್ವದ ಹಾಗೆ ಅದು ಚೆನ್ನಾಗಿದ್ರೆ ನೋಡೋಕೆ ನಾವು ರೆಡಿ ಇದೀವಿ…!

  • ಕೀರ್ತಿ ಶಂಕರಘಟ್ಟ

POPULAR  STORIES :

ವೆಂಕಯ್ಯ ಕರ್ನಾಟಕಕ್ಕೆ ಸಾಕಯ್ಯ ಅಂದ್ರೆ.. `ವಚ್ಚೆ ವಸ್ತಾನು’ ಅಂತ ತೆಲುಗಿನಲ್ಲಿ ಅಂದ್ರು..!

ಪ್ರೀತಿಸಿದ ಹುಡುಗಿ ನಡು ನೀರಲ್ಲಿ ಬಿಟ್ಟಾಗ, ಈಜು ಕಲಿಸಿದ ಹುಡುಗಿ ಹೀಗೇಕೆ ಒಂಟಿ ಮಾಡಿ ಹೊರಟಳು?

ಸಿಸಿ ಟಿವಿಯಲ್ಲಿ ಸೆರೆಯಾದ ನಟ ರಿತೇಶ್ ದೇಶ್ ಮುಖ್ ಕಳ್ಳತನ..!

ವೆಸ್ಟ್ ಇಂಡೀಸ್ ಆಟಗಾರರಿಗೆ `ಸೆಕ್ಸ್’ ಅಂದ್ರೆ ಅಷ್ಟಿಷ್ಟಾನಾ..? ಕ್ರಿಸ್ ಗೇಲ್ ಬ್ಯಾಟು.. ಪತ್ರಕರ್ತೆಯ ಎರಡು ಕೈ..!!

ಪ್ರತಿ 10 ನಿಮಿಷಕ್ಕೆ ಶುರುವಾಗುತ್ತೆ ಹೊಸ ಜೀವನ..!! ಇದು ರೀಲ್ ಅಲ್ಲ ರಿಯಲ್ ಗಜನಿಯ ಕಥೆ..!!!

ಪ್ರಿಯಕರನಿಗೆ ಕಾಯುತ್ತಾ ಬಸ್ಟ್ಯಾಂಡ್‍ನಲ್ಲಿ ನಿಂತಿದ್ದಳು..!? ಆಟೋಡ್ರೈವರ್‍ಗಳು ಏನ್ ಮಾಡಿದ್ರು ಗೊತ್ತಾ..!?

ಚೀನಾ-ಪಾಕ್ ಗೆ ಖಡಕ್ಕು ಸಂದೇಶ..! ನರೇಂದ್ರ ಮೋದಿ ಗೇಮ್ ಸ್ಟಾರ್ಟ್..!

ಹುಚ್ಚ ವೆಂಕಟ್ ಗೆ ಮಡಿಕೇರಿಯಲ್ಲಿ ಸಿಕ್ಕಳು ಹುಡುಗಿ..! `ಕೋಟಿ’ ಬೇಕಾದರೂ ಖರ್ಚಾಗಲಿ ಎಂದರಂತೆ..!?

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...