ಖ್ಯಾತ ಕ್ರಿಕೆಟಿಗ ಜಸ್ ಪ್ರೀತ್ ಬೂಮ್ರಾ ಮತ್ತು ನಟ ಸಾರ್ವಭೌಮ ಚಿತ್ರದಲ್ಲಿ ನಟಿಸಿದ್ದ ಮಲೆಯಾಳಂ ಚಲುವೆ ಅನುಪಮಾ ಪರಮೇಶ್ವರನ್ ಅವರ ನಡುವೆ ಲವ್ ಇದೆ ಎಂದು ಈ ಹಿಂದಿನಿಂದಲೂ ಸಹ ಸಿಕ್ಕಾಪಟ್ಟೆ ಗಾಸಿಪ್ ಇದೆ. ಇನ್ಸ್ಟಾಗ್ರಾಮ್ ನಲ್ಲಿ ಇಬ್ಬರು ಸಹ ಪರಸ್ಪರ ಫಾಲೋ ಮಾಡುತ್ತಿದ್ದರು ಮತ್ತು ಆಗಾಗ ಕಾಮೆಂಟ್ ಗಳನ್ನು ಸಹ ಮಾಡಿಕೊಳ್ಳುತ್ತಿದ್ದರೂ ಇದನ್ನೆಲ್ಲ ಗಮನಿಸಿದ ನೆಟ್ಟಿಗರು ಇಬ್ಬರ ನಡುವೆ ಸಮ್ ಥಿಂಗ್ ಸಮ್ ಥಿಂಗ್ ನಡೆಯುತ್ತಿದೆ ಎಂದೆಲ್ಲಾ ಮಾತನಾಡಿಕೊಳ್ಳಲಾರಂಭಿಸಿದರು.
ಇನ್ನೂ ಇದೀಗ ಬಂದಿರುವ ಸುದ್ದಿಯ ಪ್ರಕಾರ ಜಸ್ ಪ್ರೀತ್ ಬೂಮ್ರಾ ಅವರು ಮುಂಬರುವ ಟೆಸ್ಟ್ ಸಿರೀಸ್ ನಿಂದ ರಜೆ ತೆಗೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಹೌದು ಮದುವೆ ನಿಮಿತ್ತ ಜಸ್ ಪ್ರೀತ್ ಬೂಮ್ರಾ ಅವರು ರಜೆ ತೆಗೆದುಕೊಂಡಿದ್ದಾರೆ ಎಂಬ ಸುದ್ದಿ ಇದೆ. ಇನ್ನೂ ಇದೇ ಸಮಯಕ್ಕೆ ಸರಿಯಾಗಿ ನಟಿ ಅನುಪಮಾ ಪರಮೇಶ್ವರನ್ ಅವರು ಸಹ ತಮ್ಮ ಇನ್ ಸ್ಟಾಗ್ರಾಂನಲ್ಲಿ ಫೋಟೋವೊಂದನ್ನು ಶೇರ್ ಮಾಡಿದ್ದು ಅವರೂ ಸಹ ರಜೆ ತೆಗೆದುಕೊಂಡಿರುವ ಬಗ್ಗೆ ಕ್ಯಾಪ್ಷನ್ ಹಾಕಿಕೊಂಡಿದ್ದಾರೆ.
ಇದನ್ನೆಲ್ಲಾ ಗಮನಿಸಿದ ನೆಟ್ಟಿಗರು ಇಬ್ಬರು ಸಹ ಒಂದೇ ಸಮಯದಲ್ಲಿ ರಜೆ ತೆಗೆದುಕೊಂಡಿದ್ದಾರೆ ಅಂದರೆ ಈ ಹಿಂದೆ ಎದ್ದಿದ್ದ ಊಹಾಪೋಹಗಳೆಲ್ಲಾ ನಿಜ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಜಸ್ ಪ್ರೀತ್ ಬೂಮ್ರಾ ಅವರು ಮದುವೆ ನಿಮಿತ್ತ ರಜೆ ತೆಗೆದುಕೊಳ್ಳುತ್ತಿದ್ದು ಇತ್ತ ಅನುಪಮಾ ಪರಮೇಶ್ವರನ್ ಅವರ ಸಹ ರಜೆ ಎಂದು ಹೇಳಿಕೊಂಡಿರುವುದು ಈಗ ನೆಟ್ಟಿಗರಲ್ಲಿ ಇಬ್ಬರೂ ಮದುವೆ ಮಾಡಿಕೊಳ್ಳುತ್ತಿದ್ದಾರಾ ಎಂಬ ಸಂಶಯವನ್ನು ಮೂಡಿಸಿದೆ.