ಸೋಮಾರಿತನ ಹೋಗಲಾಡಿಸಲು ಸೂಪರ್ ಟಿಪ್ಸ್

0
111

ಇಂದು ಪ್ರತಿಯೊಬ್ಬ ವಿದ್ಯಾರ್ಥಿ ಕೈಯಲ್ಲಿ ಸ್ಮಾರ್ಟ್‌ಫೋನ್‌ ಬಂದುಬಿಟ್ಟಿದೆ. ಕೊರೊನಾ ಪರಿಣಾಮದಿಂದ ಸ್ಮಾರ್ಟ್‌ಫೋನ್‌ ಸಹವಾಸ ಬೇಡ ಎನ್ನುತ್ತಿದ್ದವರು ಸಹ ಅದರ ಬಳಕೆ ಆರಂಭಿಸಿದ್ದಾರೆ. ಸ್ಮಾರ್ಟ್‌ಫೋನ್‌ ಕೈಗೆ ಬಂದ ತಕ್ಷಣ ಯುವಜನತೆ ಅವರಿಗೆ ಅರಿವಿಲ್ಲದೇ ಸಾಕಷ್ಟು ಸಮಯವನ್ನು ಕಳೆಯುವ ಹಾಗೆ ಇಂದಿನ ಸೋಶಿಯಲ್‌ ಮೀಡಿಯಾ, ಸೋಶಿಯಲ್ ಅಪ್ಲಿಕೇಶನ್‌ಗಳು ಆಕರ್ಷಿಸುತ್ತವೆ. ಈ ಮೂಲಕ ಬಹುಸಂಖ್ಯಾತ ಯುವಜನತೆ ತಮ್ಮ ವಿದ್ಯಾರ್ಥಿ ಜೀವನವನ್ನು ಅನಗತ್ಯ ಅಪ್ಲಿಕೇಶನ್‌ಗಳು, ಅನಗತ್ಯ ಚಟುವಟಿಕೆಗಳಿಗೆ ದಾಸರಾಗುವ ಮಾರ್ಗದಲ್ಲಿ ಕಳೆಯುತ್ತಿದ್ದಾರೆ.

ವಿದ್ಯಾರ್ಥಿಗಳೇ ನಿಮ್ಮ ಅಮೂಲ್ಯ ಸಮಯ ನಿಮಗೆ ಅರಿವಿಲ್ಲದೇ ಹೇಗೆ ಹಾಳಾಗುತ್ತಿದೆ, ಆ ಅಮೂಲ್ಯ ಸಮಯವನ್ನು ಮರುಪಡೆಯುವುದು ಹೇಗೆ, 30 ದಿನಗಳಲ್ಲಿ ಉತ್ತಮ ಜೀವನ ಮಾರ್ಗವನ್ನು ಕಟ್ಟಿಕೊಳ್ಳುವುದು ಹೇಗೆ ಎಂದು ಈ ಕೆಳಗಿನ ಕೆಲವು ಸಲಹೆಗಳನ್ನು ತಿಳಿದು, ಫಾಲೋ ಮಾಡಿರಿ.

1. ಮುಂಜಾನೆ ತುಸು ಬೇಗ ಎದ್ದೇಳಿ.

2. ಫೇಸ್‌ಬುಕ್‌ ಮರೆತುಬಿಡಿ.

3. ಇನ್‌ಸ್ಟಗ್ರಾಂ ಅನ್‌ಇನ್‌ಸ್ಟಾಲ್‌ ಮಾಡಿ.

4. ಇತರೆ ಸೋಶಿಯಲ್ ಮೀಡಿಯಾಗಳ ನೋಟಿಫಿಕೇಶನ್‌ ಆಫ್‌ ಮಾಡಿ.

5. ರಾತ್ರಿ 10-11 ಗಂಟೆ ವೇಳೆಗೆ ಮಲಗಿಕೊಳ್ಳಿ.

6. ವಿದ್ಯಾರ್ಥಿನಿಲಯಗಳಲ್ಲಿ ಇದ್ದುಕೊಂಡು ಓದುವವರು ಆಗಾಗ ತಮ್ಮ ತಂದೆ-ತಾಯಿಯರಿಗೆ ಕರೆ ಮಾಡಿ ಮಾತನಾಡಿ.

7. ನಿಮ್ಮಿಂದ ಆದಷ್ಟು ಇತರರಿಗೆ ಸಹಾಯ ಮಾಡಿ.

8. ನಿಮಗೆ ಇತರರಿಂದ ಸಹಾಯ ಬೇಕಾದಲ್ಲಿ ಹೆದರದೇ ಕೇಳಿ ಪಡೆಯಿರಿ.

9. ನೆಚ್ಚಿನ ಅಗತ್ಯತೆಗಳನ್ನು ಪೋಷಕರಿಂದ ಕೇಳಿ ಪಡೆಯಿರಿ.

10. ಅನಗತ್ಯವಾಗಿ ಇತರರ ಬಗ್ಗೆ ಮಾತನಾಡಬೇಡಿ. ಹಾಗೂ ರೂಮರ್ಸ್‌ ಹರಡುವಿಕೆಯಲ್ಲಿ ಸಮಯ ಕಳೆಯಬೇಡಿ.

11. ಕೆಟ್ಟ ಹವ್ಯಾಸಗಳನ್ನು ದೂರ ಮಾಡಿ.

12 ಕೆಟ್ಟ ಚಟಗಳನ್ನು ಬಿಟ್ಟುಬಿಡಿ.

13. ಕೆಟ್ಟ ಚಟ / ಹವ್ಯಾಸ ಬಿಡಲು ಹೊಸ ಉತ್ತಮ ಹವ್ಯಾಸಗಳಿಗೆ ಸಮಯ ನೀಡಿ. ಇದರಿಂದ ನಿಮಗೆ ಅರಿವಿಲ್ಲದಂತೆ ಉತ್ತಮ ಮಾರ್ಗದಲ್ಲಿ ನಡೆಯುತ್ತೀರಿ.

14. ವಿದ್ಯಾರ್ಥಿ ಜೀವನದಲ್ಲಿ ಸ್ಮಾರ್ಟ್‌ಫೋನ್‌, ಲ್ಯಾಪ್‌ಟಾಪ್‌ ಬಳಕೆ ಮಾಹಿತಿ ಕಲೆಹಾಕಲು, ಹೊಸ ಕೌಶಲ್ಯಗಳನ್ನು ಕಲಿಯಲು, ಹೊಸದನ್ನು ತಿಳಿದುಕೊಳ್ಳಲು ಮಾತ್ರವೇ ಸೀಮಿತವಾಗಿರಲಿ.

15. ವಿದ್ಯಾರ್ಥಿ ಜೀವನದಲ್ಲಿ ‘ದೇಶ ಸುತ್ತು ಕೋಶ ಓದು’ ಎನ್ನುವ ನಾಣ್ಣುಡಿಯನ್ನು ಫಾಲೋ ಮಾಡಿ. ಅಂದರೆ ತಮ್ಮ ಸಹಪಾಠಿಗಳೊಂದಿಗೆ ಆಗಾಗ ಪ್ರವಾಸ ಕೈಗೊಳ್ಳಿ. ಇದರಿಂದ ಸಾಮಾನ್ಯ ಜ್ಞಾನ ಹೆಚ್ಚುತ್ತದೆ. ಮತ್ತು ಗೆಳೆಯರೊಂದಿಗೆ ಸಮಯ ಕಳೆದ ಸಂತೋಷ ಸಿಗುತ್ತದೆ.

16. ಫ್ಯಾಮಿಲಿ ಜತೆಗೂ ಸಮಯ ನೀಡಿ. ರಜೆ ದಿನಗಳಲ್ಲಿ ಕೇವಲ ಸ್ನೇಹಿತರೊಂದಿಗೆ ಸಮಯ ಕಳೆಯದೇ, ಕುಟುಂಬದವರೊಂದಿಗೂ ಸಮಯ ಕಳೆಯಿರಿ.

17. ಕುಟುಂಬ, ಸ್ನೇಹಿತರ ಜತೆಗೆ ಇದ್ದಾಗ ಗ್ಯಾಜೆಟ್‌ನಲ್ಲಿ ಮುಳುಗುವುದನ್ನು ಮೊದಲು ಬಿಟ್ಟುಬಿಡಿ.

18. ಪುಸ್ತಕ ಓದುವ ಅಭಿರುಚಿಯನ್ನು ಬೆಳೆಸಿಕೊಳ್ಳಿ. ಓದು ಕೇವಲ ಅಂಕಗಳಿಕೆಗೆ ಮಾತ್ರವಲ್ಲದೇ ಜೀವನದ ಸ್ಪೂರ್ತಿಗೆ, ಉತ್ತಮ ನಡೆಗೆ ದಾರಿತೋರಬಲ್ಲವು.

LEAVE A REPLY

Please enter your comment!
Please enter your name here