ಮುಖ್ಯಮಂತ್ರಿ ಯಡಿಯೂರಪ್ಪನವರು ಸಿನಿಮಾಗಳನ್ನು ನೋಡುವುದು ತೀರಾ ಕಡಿಮೆ ಆಗೊಂದು ಈಗೊಂದು ಸಿನಿಮಾವನ್ನ ಯಡಿಯೂರಪ್ಪನವರು ವೀಕ್ಷಿಸುತ್ತಿರುತ್ತಾರೆ. ಇದೀಗ ಯಡಿಯೂರಪ್ಪನವರು ಕನ್ನಡದ ಮುಂಬರುವ ಸಿನಿಮಾವೊಂದನ್ನು ವೀಕ್ಷಿಸಲು ಕಾಯುತ್ತಿರುವ ವಿಷಯವನ್ನ ಸ್ವತಃ ಅವರೇ ಬಹಿರಂಗಪಡಿಸಿದ್ದಾರೆ.
ಹೌದು ಮುಖ್ಯಮಂತ್ರಿ ಯಡಿಯೂರಪ್ಪನವರು ನೋಡಲು ಕಾಯುತ್ತಿರುವ ಕನ್ನಡದ ಚಿತ್ರ ಬೇರಾವುದೂ ಅಲ್ಲ ಅದು ಡಿ ಬಾಸ್ ಅಭಿನಯದ ರಾಬರ್ಟ್.
ಇಂದು ವಿಕಾಸಸೌಧದಲ್ಲಿ ಅರಣ್ಯ ಇಲಾಖೆಯ ರಾಯಭಾರಿಯಾಗಿ ದರ್ಶನ್ ಅವರ ಪದಗ್ರಹಣ ಕಾರ್ಯಕ್ರಮ ಜರುಗಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಯಡಿಯೂರಪ್ಪನವರು ದರ್ಶನ್ ಅವರ ರಾಬರ್ಟ್ ಚಿತ್ರವನ್ನ ನೋಡಲು ಕಾಯುತ್ತಿದ್ದೇನೆ ಎಂದು ಹೇಳಿದರು.