ಕೋಳಿಪ್ರಿಯರಿಗೆ, ಕೋಳಿ ಅಪ್ರಿಯರಿಗೆಲ್ಲಾ ಇದೊಂಥರಾ ಸಿಹಿಸುದ್ದಿ. ಎಲ್ಲವೂ ಅಂದುಕೊಂಡಂತೆ ಆದ್ರೆ ಇನ್ನುಮುಂದೆ ಉತ್ಪಾಧನಾ ವೆಚ್ಚ, ಟ್ಯಾಕ್ಸು, ಟ್ರಾನ್ಸ್ ಫೋರ್ಟು ಎಲ್ಲವನ್ನೂ ಸೇರಿಸಿದರೇ ನಲವತ್ತು ರೂಪಾಯಿಗೆ ಡಿಸೇಲ್ ಸಿಗುತ್ತದೆ. ಅಂದಹಾಗೆ ಈ ಡಿಸೇಲ್ ಹಿಂದಿರೋದು ಕೋಳಿಕಥೆ. ಕೇರಳದ ವೈನಾಡಿನಲ್ಲಿರುವ ಕೇರಳ ಪಶು ಹಾಗೂ ಪ್ರಾಣಿ ವಿಜ್ಞಾನ ವಿಶ್ವವಿದ್ಯಾಲಯದ ತಂಡವೊಂದು ಕೋಳಿ ತ್ಯಾಜ್ಯದಿಂದ ಡಿಸೇಲ್ ತಯಾರಿಸಿದೆ. ಕಳೆದ ಒಂದು ವರ್ಷದಿಂದ ಕೋಳಿ ತ್ಯಾಜ್ಯ ಬಳಸಿ ಬಯೋಡಿಸೇಲ್ ತಯಾರಿಸಿರುವ ಈ ವಿಶ್ವವಿದ್ಯಾಲಯ ಪೇಟೆಂಟ್‍ಗೂ ಅರ್ಜಿ ಸಲ್ಲಿಸಿದೆ. ಹತ್ತು ಕೆ.ಜಿ ಕೋಳಿ ತ್ಯಾಜ್ಯದಿಂದ ಒಂದು ಲೀಟರ್ ಡಿಸೇಲ್ ತಯಾರಿಸಬಹುದಂತೆ. ನಮ್ಮ ದೇಶದಲ್ಲಿ ದಿನಕ್ಕೆ ಹತ್ತುಕೋಟಿ ಜನ ಕೋಳಿ ತಿಂದರೂ ಹತ್ತು ಲಕ್ಷ ಲೀಟರ್ ಡೀಸೆಲ್ ತಯಾರಿಸಬಹುದು. ಒಂದು ವೇಳೆ ಇದು ಯಶಸ್ವಿಯಾದರೇ ಕೋಳಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಶುರುವಾಗುತ್ತೆ. ಮನೆಮನೆಗೆ ಬಂದು ಕೋಳಿ ಕಸ ಕೇಳುವ ಬಿಸಿನೆಸ್ ಆರಂಭವಾದರೂ ಅಚ್ಚರಿಯಿಲ್ಲ.
- ರಾ ಚಿಂತನ್
POPULAR STORIES :
ಟಿವಿಯಲ್ಲಿ ‘ಪಾರ್ವತಿ’ ಪಾತ್ರ ಮಾಡಿದ್ರೆ, ಬೀಚ್ ಪಾರ್ಟಿಗಳಲ್ಲಿ ಬಿಕಿನಿ ತೊಡಬಾರದಾ?
ಪಾಕ್ ಮಹಿಳೆಯರಿಗೆ ಕೊಹ್ಲಿ ಅಂದ್ರೆ ಸಿಕ್ಕಾಪಟ್ಟೆ ಇಷ್ಟ..! `ಲೈಕ್’ ಮಾಡಲು ಯಾವ ದೇಶವಾದ್ರೇನು..!?
ಈ ದೇಶದ ಪ್ರತಿ ಪ್ರಜೆಗೂ ಸಿಗತ್ತೆ ಪುಕ್ಕಟೆ ಸಂಬಳ…!
ಪ್ರೀತಿಸಿದ ಹುಡುಗಿ ನಡು ನೀರಲ್ಲಿ ಬಿಟ್ಟಾಗ, ಈಜು ಕಲಿಸಿದ ಹುಡುಗಿ ಹೀಗೇಕೆ ಒಂಟಿ ಮಾಡಿ ಹೊರಟಳು?
ಸಿಸಿ ಟಿವಿಯಲ್ಲಿ ಸೆರೆಯಾದ ನಟ ರಿತೇಶ್ ದೇಶ್ ಮುಖ್ ಕಳ್ಳತನ..!
ವೆಸ್ಟ್ ಇಂಡೀಸ್ ಆಟಗಾರರಿಗೆ `ಸೆಕ್ಸ್’ ಅಂದ್ರೆ ಅಷ್ಟಿಷ್ಟಾನಾ..? ಕ್ರಿಸ್ ಗೇಲ್ ಬ್ಯಾಟು.. ಪತ್ರಕರ್ತೆಯ ಎರಡು ಕೈ..!!