ರಾಬರ್ಟ್ ಚಿತ್ರ ನಿನ್ನೆಯಷ್ಟೇ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನವನ್ನು ಕಾಣುತ್ತಿದೆ. ದಾಖಲೆಯ ಮಟ್ಟದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ರಾಬರ್ಟ್ ರಾಜ್ಯದ ಪ್ರಮುಖ ನಗರಗಳಲ್ಲಿ ಬಹುತೇಕ ಹೌಸ್ ಫುಲ್ ಪ್ರದರ್ಶನಗಳನ್ನು ಕಂಡಿತು.
ಇಷ್ಟು ದೊಡ್ಡ ಮಟ್ಟದಲ್ಲಿ ಬಿಡುಗಡೆಯಾದ ರಾಬರ್ಟ್ ಚಿತ್ರ ಮೊದಲನೇ ದಿನ ಎಷ್ಟು ಕಲೆಕ್ಷನ್ ಮಾಡಲಿದೆ ಎಂಬ ಕುತೂಹಲ ಎಲ್ಲರಲ್ಲಿಯೂ ಇತ್ತು. ಚಿತ್ರದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಅವರು ಚಿತ್ರ ಮೊದಲ ದಿನ ಗಳಿಸಿದ ಕಲೆಕ್ಷನ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಅನೌನ್ಸ್ ಮಾಡುವ ಮೂಲಕ ಎಲ್ಲರಲ್ಲಿಯೂ ಇದ್ದ ಕುತೂಹಲಕ್ಕೆ ಫುಲ್ ಸ್ಟಾಪ್ ಇಟ್ಟರು.
ಪೋಸ್ಟರ್ ಒಂದನ್ನು ಪೋಸ್ಟ್ ಮಾಡಿದ್ದ ಉಮಾಪತಿ ಶ್ರೀನಿವಾಸ್ ಗೌಡ ಅವರು ರಾಬರ್ಟ್ ಮೊದಲ ದಿನ ಕನ್ನಡದಲ್ಲಿ 17.24 ಕೋಟಿ ರೂಪಾಯಿಗಳನ್ನು ಗಳಿಸಿದೆ ಎಂದು ಹೇಳಿಕೊಂಡಿದ್ದರು. ಇನ್ನು ಇದೊಂದು ಕನ್ನಡ ಚಿತ್ರರಂಗದಲ್ಲಿ ಸಾರ್ವಕಾಲಿಕ ದಾಖಲೆಯಾಗಿ ಹೊರಹೊಮ್ಮಿತು. ರಾಬರ್ಟ್ ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ 3.12 ಕೋಟಿ ಕಲೆಕ್ಷನ್ ಮಾಡಿದೆ ಎಂದು ಉಮಾಪತಿ ಶ್ರೀನಿವಾಸ್ ಅವರು ಇದೇ ವೇಳೆ ಪೋಸ್ಟ್ ಮಾಡಿಕೊಂಡಿದ್ದರು.
ಆದರೆ ಸ್ವಲ್ಪ ಹೊತ್ತಿನಲ್ಲೇ ಉಮಾಪತಿ ಶ್ರೀನಿವಾಸ್ ಗೌಡ ಅವರು ತಮ್ಮ ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದಾರೆ. ಹೌದು ಬೆಳಿಗ್ಗೆ ಹಾಕಿದ್ದ ಕಲೆಕ್ಷನ್ ಪೋಸ್ಟ್ ಅನ್ನು ಉಮಾಪತಿ ಶ್ರೀನಿವಾಸ್ ಗೌಡ ಅವರು ಡಿಲೀಟ್ ಮಾಡಿದ್ದು ಇದೀಗ ಅದೊಂದು ನಕಲಿ ಕಲೆಕ್ಷನ್ ಅದಕ್ಕೆ ಉಮಾಪತಿ ಅವರು ಅದನ್ನ ಡಿಲೀಟ್ ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಲಾಗುತ್ತಿದೆ.
ಇನ್ನೂ ಬೆಳಿಗ್ಗೆ ಪೋಸ್ಟ್ ಮಾಡಿದ್ದ ಕಲೆಕ್ಷನ್ ರಿಪೋರ್ಟ್ ಅನ್ನು ಉಮಾಪತಿ ಅವರು ಯಾಕೆ ಡಿಲೀಟ್ ಮಾಡಿದರು? ನಿಜವಾಗಿಯೂ ರಾಬರ್ಟ್ ಮೊದಲ ದಿನ ಎಷ್ಟು ಕಲೆಕ್ಷನ್ ಮಾಡಿದೆ? ಈ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾದರೆ ಮತ್ತು ಈಗ ಎದ್ದಿರುವ ನಕಲಿ ಕಲೆಕ್ಷನ್ ವಿವಾದ ತಣ್ಣಗಾಗಬೇಕೆಂದರೆ ಸ್ವತಃ ಉಮಾಪತಿ ಅವರೇ ಇದಕ್ಕೆಲ್ಲ ಉತ್ತರ ನೀಡಬೇಕಿದೆ..