ವಿಧಾನಸಭೆ ಕಲಾಪದಲ್ಲಿ ಬಜೆಟ್ ಮೇಲೆ ಮುಂದುವರೆದ ಚರ್ಚೆ
ಭೋಜನದ ಬಳಿಕ ವಿಧಾನಸಭೆ ಕಲಾಪ ಆರಂಭ ಆಗಿದ್ದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬಜೆಟ್ ಚರ್ಚೆ ನೆಡೆಸಿದ್ದು ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಆಕ್ರೋಶ ವೇಕ್ತಪಡಿಸಿದ್ದಾರೆ, ಈ ವೇಳೆ ಮಧ್ಯಪ್ರವೇಶಿಸಿದ ಸಿಎಂ ಬಿಎಸ್ ವೈ ಸಿದ್ದರಾಮಯ್ಯನವರೇ ನಾವು ಉತ್ತಮ ಬಜೆಟ್ ಕೊಟ್ಟಿದ್ದೇವೆ ಮಹಿಳೆಯರ ಪರ ಬಜೆಟ್ ಕೊಟ್ಟಿದ್ದೇವೆ ಈಗ ಮೂರು ಉಪಚುನಾವಣೆ ಬರುತ್ತೆ ಆಗ ನೀವು ಬನ್ನಿ,ನಾವು ಬರ್ತೇವೆ ನಾವು ಮೂರು ಸೀಟು ಗೆಲ್ಲದಿದ್ರೆ ಕೇಳಿ
ಸಿದ್ದರಾಮಯ್ಯಗೆ ಚಾಲೆಂಜ್ ಹಾಕಿದ ಬಿಎಸ್ ವೈ ಬಿಎಸ್ ವೈ ಸವಾಲ್ ಗೆ ಸಿದ್ದರಾಮಯ್ಯ ಪ್ರತಿ ಸವಾಲ್ ಹಾಕಿದ್ದು,
ಯಡಿಯೂರಪ್ಪನವರೇ ನೀವು ಬೈ ಎಲೆಕ್ಷನ್ ಅಲ್ಲ ನಾವು ಸಾಕಷ್ಟು ಉಪಚುನಾವಣೆ ಗೆದ್ದಿದ್ದೇವೆ ಅಸೆಂಬ್ಲಿ ಡಿಸಾಲ್ವ್ ಮಾಡಿ ಚುನಾವಣೆಗೆ ಬನ್ನಿ ಜನರ ಮುಂದೆ ಹೋಗೋಣ ಜನ ಯಾರನ್ನ ಕೈಹಿಡಿಯುತ್ತಾರೆ ಅನ್ನೋದನ್ನ ನೋಡಿ ಎಂದು ಸಿಎಂ ಬಿಎಸ್ ವೈಗೆ ಸಿದ್ದರಾಮಯ್ಯ ಪ್ರತಿಸವಾಲ್ ಹಾಕಿದ್ದಾರೆ ಸಿದ್ದರಾಮಯ್ಯ ಸವಾಲ್ ಗೆ ಸುಮ್ಮನೆ ಕುಳಿತ ಸಿಎಂ ಮೌನದಲ್ಲಿದ್ದರು.