No menu items!
12.4 C
Munich
Wednesday, April 29, 2026

ಯುವ ಸಂಭ್ರಮವೂ ಇಲ್ಲ..! ಯಾವ ಸಂಭ್ರಮವೂ ಇಲ್ಲ..

Must read

ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಚಿತ್ರ ಏಪ್ರಿಲ್ ಒಂದರಂದು ಭರ್ಜರಿಯಾಗಿ ಬಿಡುಗಡೆಯಾಗಲು ರೆಡಿಯಾಗಿದೆ. ಸಿನಿಮಾ ಬಿಡುಗಡೆಗೂ ಮುನ್ನವೇ ಮೈಸೂರಿನಲ್ಲಿ ಇದೇ ತಿಂಗಳ 20 ರಂದು ಯುವ ಸಂಭ್ರಮ ಎಂಬ ಪ್ರಿ ರಿಲೀಸ್ ಈವೆಂಟ್ ಅನ್ನು ಆಯೋಜನೆ ಮಾಡಲಾಗಿತ್ತು.

 

 

ಹೌದು ಯುವರತ್ನ ಚಿತ್ರತಂಡ ಮೈಸೂರಿನಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು ಆದರೆ ಇಂದು ಫೇಸ್ ಬುಕ್ ಲೈವ್ ಬಂದಿದ್ದ ಪುನೀತ್ ರಾಜ್ ಕುಮಾರ್ ಅವರು ಯುವರತ್ನ ಚಿತ್ರದ ಪ್ರೀ ರಿಲೀಸ್ ಇವೆಂಟ್ ಮೈಸೂರಿನಲ್ಲಿ ಕ್ಯಾನ್ಸಲ್ ಆಗಿದೆ ಎಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ.

 

 

ಮೈಸೂರಿನಲ್ಲಿ ದೊಡ್ಡ ಪ್ರೀ ರಿಲೀಸ್ ಈವೆಂಟ್ ನಡೆಯಲಿದೆ ಎಂದು ಕಾದು ಕುಳಿತಿದ್ದ ಅಭಿಮಾನಿಗಳ ಕನಸಿಗೆ ಯುವರತ್ನ ಚಿತ್ರತಂಡ ತಣ್ಣೀರನ್ನು ಎರಚಿದೆ. ಹೊಸ ಕೊರೋನಾವೈರಸ್ ನಿಯಮದ ಅನುಸಾರ ಕಾರ್ಯಕ್ರಮವನ್ನು ನಡೆಸಲು ಆಗುವುದಿಲ್ಲ ಎಂದು ಪುನೀತ್ ರಾಜ್ ಕುಮಾರ್ ಅವರು ಹೇಳಿದ್ದು ಇದರ ಬದಲಾಗಿ ಜಿಲ್ಲೆ ಜಿಲ್ಲೆಗಳಿಗೆ ಪ್ರತ್ಯೇಕವಾಗಿ ಭೇಟಿ ನೀಡಿ ಯುವ ಸಂಭ್ರಮ ಮಾಡೋಣ ಎಂದು ಹೇಳಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article