ಇಂಗ್ಲೆಂಡ್ ವಿರುದ್ಧದ ಎರಡನೇ ಟಿ ಟ್ವೆಂಟಿ ಪಂದ್ಯದಲ್ಲಿ ಗೆ ಪದಾರ್ಪಣೆ ಮಾಡಿದ ಮೊದಲನೇ ಪಂದ್ಯದಲ್ಲಿಯೇ ಇಶಾನ್ ಕಿಶನ್ ಭರ್ಜರಿ ಬ್ಯಾಟಿಂಗ್ ಮಾಡಿ ಎಲ್ಲರ ಗಮನವನ್ನೂ ಸೆಳೆದಿದ್ದಾರೆ.
32 ಎಸೆತಗಳಲ್ಲಿ ಬರೋಬ್ಬರಿ 56 ರನ್ ಬಾರಿಸಿದ ಇಶನ್ ಕಿಶನ್ 4 ಸಿಕ್ಸ್ & 5 ಬೌಂಡರಿಗಳನ್ನು ಸಿಡಿಸಿದರು. ಕೆಎಲ್ ರಾಹುಲ್ ಅವರ ಜೊತೆ ಫೀಲ್ಡ್ ಗೆ ಬಂದ ಇಶಾನ್ ಕಿಶನ್ ಅನುಭವಿ ಆಟಗಾರನ ರೀತಿ ಮನಬಂದಂತೆ ಬ್ಯಾಟ್ ಬೀಸಿ ಮೂಲೆಮೂಲೆಗೂ ಬಾಲಿನ ದರ್ಶನ ಮಾಡಿಸಿದರು.
ಇನ್ನು ಇಶಾನ್ ಕಿಶನ್ ಅವರ ಈ ಇನ್ನಿಂಗ್ಸ್ ನಿಂದ ಹಿರಿಯ ಆಟಗಾರನೊಬ್ಬನಿಗೆ ತಲೆನೋವು ಶುರುವಾದಂತಿದೆ. ಹೌದು ಇಶಾನ್ ಕಿಶನ್ ಅವರ ಈ ಇನಿಂಗ್ಸ್ ನಿಂದ ಶಿಖರ್ ಧವನ್ ಅವರ ಕ್ರಿಕೆಟ್ ಬದುಕಿಗೆ ಅಡ್ಡಿಯುಂಟಾಗಬಹುದು. ಏಕೆಂದರೆ ಶಿಖರ್ ಧವನ್ ಅವರ ಸ್ಥಾನದಲ್ಲಿಯೇ ಇಶನ್ ಕಿಶನ್ ಅವರು ಈ ಭರ್ಜರಿ ಇನಿಂಗ್ಸ್ ಕಟ್ಟುಕೊಟ್ಟಿದ್ದರು.
ಇತ್ತೀಚಿನ ಕೆಲ ದಿನಗಳಿಂದ ಶಿಖರ್ ಧವನ್ ಅವರು ಸಹ ಕಳಪೆ ಫಾರ್ಮ್ ನಲ್ಲಿದ್ದಾರೆ. ಇದೇ ಸಂದರ್ಭದಲ್ಲಿ ಇಶಾನ್ ಕಿಶನ್ ಅವರ ಈ ಭರ್ಜರಿ ಬ್ಯಾಟಿಂಗ್ ಶಿಖರ್ ಧವನ್ ಅವರ ವೃತ್ತಿ ಜೀವನದ ಮೇಲೆ ಪರಿಣಾಮ ಬೀರಬಹುದು ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ.