ವಿಧಾನಸಭೆ ಕಲಾಪ: ಬಜೆಟ್ ಮೇಲೆ ಮುಂದುವರೆದ ಚರ್ಚೆ
ಮುತ್ತು ಕೊಟ್ಟರೆ ತುಟಿ ಸುಡುತ್ತೆ ಎಂದು ಹೇಳಿ ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆ ವೇಳೆ ನೇಕಾರರ ಸಮಸ್ಯೆ ವಿಷಯ ಪ್ರಸ್ತಾಪಿಸಿ ಹುನಗುಂದ ಬಿಜೆಪಿ ಶಾಸಕ ದೊಡ್ಡನಗೌಡ ವ್ಯಂಗ್ಯ ಮಾಡಿದ್ದಾರೆ, ನೇಕಾರರು ಸಿದ್ಧಪಡಿಸಿದ ಸೀರೆಗಳ ಖರೀದಿ ಆಗ್ತಿಲ್ಲ, ಅಧಿಕಾರಿಗಳು ಏನೂ ಮಾಡಲ್ಲ ಎಂದ ದೊಡ್ಡನಗೌಡ ಆಗ ಉಪಸಭಾಧ್ಯಕ್ಷ ಆನಂದ್ ಮಾಮನಿ ಹೇಳಿಕೆ ನೀಡಿದ್ದು ನೀವು ಆಡಳಿತ ಪಕ್ಷದವರ ರೀತಿ ಮಾತಾಡ್ತಿಲ್ಲ, ವಿರೋಧ ಪಕ್ಷದವರಿಗೆ ಮೆಟಿರಿಯಲ್ ಇಲ್ಲದಂಗೆ ಮಾಡ್ತಿದ್ದೀರಿ ಎಂದು ಹಾಸ್ಯ ನುಡಿದ್ದಿದ್ದು ಆಗ ಅಸಮಾಧಾನದ ಮಾತನಾಡಿದ ದೊಡ್ಡನಗೌಡ ದೀಪದ ಕೆಳಗೆ ಇದ್ದೀವಿ,
ನಮ್ಮದೇ ಸರ್ಕಾರ ಇದೆ, ದೀಪ ನಮ್ಮದೇ. ನಮ್ಮ ಹತ್ರ ದೀಪ ಇದೆ ಅಂತಾ ಮುತ್ತು ಕೊಡೋದಕ್ಕೆ ಆಗುತ್ತಾ..!? ಮುತ್ತು ಕೊಟ್ಟರೆ ನಮ್ಮ ತುಟಿ ಸುಡುತ್ತೆ ಎಂದು ಸರ್ಕಾರದ ಬಗ್ಗೆಯೇ ಬಿಜೆಪಿ ಶಾಸಕ ವ್ಯಂಗ್ಯವಾಡಿದ್ದಾರೆ.