ನಟ ಗಣೇಶ್ ಅವರು ಇದೀಗ ಗಾಳಿಪಟ 2 , ತ್ರಿಬಲ್ ರೈಡಿಂಗ್ ಮತ್ತು ಸಖತ್ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ತುಂಬಾ ದಿನಗಳ ನಂತರ ಯೋಗರಾಜ್ ಭಟ್ ಅವರ ನಿರ್ದೇಶನದಲ್ಲಿ ಅಭಿನಯಿಸುತ್ತಿರುವ ಗಣೇಶ್ ಅವರು ಚಮಕ್ ನಂತರ ಎರಡನೇ ಬಾರಿ ಸಿಂಪಲ್ ಸುನಿ ಅವರ ನಿರ್ದೇಶನದಲ್ಲಿ ಅಭಿನಯಿಸುತ್ತಿದ್ದಾರೆ.
ಚಮಕ್ ನಂತಹ ಸೂಪರ್ ಹಿಟ್ ಚಿತ್ರ ನೀಡಿದ ಸಿಂಪಲ್ ಸುನಿ ಮತ್ತು ಗಣೇಶ್ ಕಾಂಬಿನೇಷನ್ ಮತ್ತೆ ಬರುತ್ತಿದ್ದು ಈ ಬಾರಿ ಸಖತ್ ಎಂದು ಟೈಟಲ್ ಇಡಲಾಗಿದೆ. ಸಿನಿಮಾ ಅನೌನ್ಸ್ ಆಗ್ತಾ ಇದ್ದಂತೆ ತುಂಬಾ ಕ್ಯೂರಿಯಾಸಿಟಿ ಹುಟ್ಟುಹಾಕಿರುವ ಈ ಸಿನಿಮಾಗೆ ನಾಯಕಿ ಯಾರಾಗಲಿದ್ದಾರೆ ಎಂಬ ಚರ್ಚೆಗಳು ಆರಂಭವಾಗಿದ್ದವು.
ಇದೀಗ ಈ ಚಿತ್ರಕ್ಕೆ ನಾಯಕಿ ಯಾರು ಎಂಬ ವಿಷಯವನ್ನು ಚಿತ್ರತಂಡ ಹಂಚಿಕೊಂಡಿತು ಚಂದನವನದ ಬೆಡಗಿ ನಿಶ್ವಿಕಾ ನಾಯ್ಡು ಅವರನ್ನು ನಟಿಯನ್ನಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಈಗಾಗಲೇ ಒಂದಷ್ಟು ಸಿನಿಮಾಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿರುವ ನಿಶ್ವಿಕಾ ನಾಯ್ಡು ಅವರು ಗಣೇಶ್ ಅವರ ಜೊತೆ ಸಖತ್ ನಲ್ಲಿ ರೋಮ್ಯಾನ್ಸ್ ಮಾಡಲಿದ್ದಾರೆ.