ನಿರ್ದೇಶಕ ನಂದಕಿಶೋರ್ ಅವರು ಇದೀಗ ಸ್ಯಾಂಡಲ್ ವುಡ್ ಕಿಂಗ್ ಶಿವರಾಜ್ ಕುಮಾರ್ ಅವರಿಗೆ ಸಿನಿಮಾವೊಂದನ್ನು ನಿರ್ದೇಶನ ಮಾಡಲು ಮುಂದಾಗಿದ್ದಾರೆ. ಇತ್ತೀಚೆಗಷ್ಟೇ ಪೊಗರು ಚಿತ್ರವನ್ನು ನಿರ್ದೇಶನ ಮಾಡಿದ್ದ ನಂದಕಿಶೋರ್ ಅವರು ಮುಂದಿನ ಚಿತ್ರವನ್ನು ಧ್ರುವ ಸರ್ಜಾ ಅವರಿಗೆ ಮಾಡಲಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ.
ದುಬಾರಿ ಎಂಬ ಚಿತ್ರವನ್ನು ಧ್ರುವ ಸರ್ಜಾ ಅವರಿಗೆ ಮಾಡಲು ತಯಾರಾಗಿ ನಂದಕಿಶೋರ್ ಅವರು ಆ ಚಿತ್ರ ಮುಗಿದ ನಂತರ ಶಿವಣ್ಣ ಅವರಿಗೆ ಆಕ್ಷನ್ ಕಟ್ ಹೇಳಲಿದ್ದಾರಂತೆ. ಬಲ್ಲ ಮೂಲಗಳ ಪ್ರಕಾರ ಶಿವಣ್ಣ ಅವರು ನಂದಕಿಶೋರ್ ಅವರ ಕಥೆ ಕೇಳಿ ನೆಚ್ಚಿಕೊಂಡಿದ್ದು ಆದಷ್ಟು ಬೇಗ ಚಿತ್ರದ ಅನೌನ್ಸ್ ಮೆಂಟ್ ಜರುಗಲಿದೆ ಎನ್ನಲಾಗುತ್ತಿದೆ.
ಈ ಚಿತ್ರವು ಕನ್ನಡ ಮತ್ತು ತೆಲುಗು 2ಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು ಅಧಿಕೃತವಾಗಿ ಚಿತ್ರ ಘೋಷಣೆಯಾಗಬೇಕಿದೆ.