ರೋಡ್ ಸೇಫ್ಟಿ ವರ್ಲ್ಡ್ ಸೀರಿಸ್ 2020-21 ಫೈನಲ್ ಗೆದ್ದು ಬೀಗಿದ್ದಾರೆ ಇಂಡಿಯನ್ ಲೆಜೆಂಡ್ಸ್.
ಶ್ರೀಲಂಕಾ ವಿರುದ್ಧ ನಡೆದ ಅಂತಿಮ ಹಾಗೂ ಹೈ ವೋಲ್ಟೇಜ್ ಪಂದ್ಯದಲ್ಲಿ ಭಾರತದ ಹಳೆ ಹುಲಿಗಳು ಲಂಕನ್ ಸಿಂಹಗಳ ಬೇಟೆಯಾಡಿವೆ.
ನಾಯಕ ಸಚಿನ್ ತೆಂಡೂಲ್ಕರ್ 30(23) ಭದ್ರ ಬುನಾದಿ ಜೊತೆಗೆ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಯುವರಾಜ್ ಸಿಂಗ್ 60( 41) ಹಾಗೂ ಯೂಸುಫ್ ಪಠಾಣ್ 62(36) ತಂಡದ ಮೊತ್ತವನ್ನು 180 ರ ಗಡಿ ದಾಟೋವಲ್ಲಿ ಪ್ರಮುಖ ಪಾತ್ರ ವಹಿಸಿದ್ರು.
ಶ್ರೀಲಂಕಾ ಪರ ಉತ್ತಮ ಆರಂಭ ನೀಡಿದ ಸನತ್ ಜಯಸೂರ್ಯ 43(35) ಹಾಗೂ ತಿಲಕರತ್ನೆ ದಿಲ್ಶಾನ್ 21 (18) ಪ್ರಯತ್ನದ ಹೊರತಾಗಿಯೂ ಶ್ರೀಲಂಕಾ 167 ರನ್ ಗಳಿಸಿತು.
ಕೊನೆಯಲ್ಲಿ ಅಬ್ಬರಿಸಿದ ವೀರರತ್ನೆ 15 ಎಸೆತಗಳಲ್ಲಿ 38 ರನ್ ಗಳಿಸೋ ಮೂಲಕ ಭಾರತಕ್ಕೆ ಸೋಲಿನ ಆತಂಕ ಸೃಷ್ಟಿ ಮಾಡಿದ್ದರು.
ಶ್ರೀಲಂಕಾ ಕಡೆ ವಾಲಿದ್ದ ಪಂದ್ಯವನ್ನ ಅದ್ಭುತ ಕ್ಯಾಚ್ ಮೂಲಕ ಭಾರತದ ಕಡೆ ತಿರುಗಿಸಿದ್ದು ಕನ್ನಡಿಗ ವಿನಯ್ ಕುಮಾರ್ . ಮನ್ ಪ್ರೀತ್ ಗೋನಿ ಬೌಲಲ್ಲಿ ವೀರರತ್ನೆ ಬಾರಿಸಿದ್ದನ್ನ ಅಮೋಘವಾಗಿ ಹಿಡಿದಿದ್ದು ಟರ್ನಿಂಗ್ ಪಾಯಿಂಟ್.
ಭಾರತದ ಪರ ಬಿಗಿ ಬೌಲಿಂಗ್ ಪ್ರದರ್ಶಿಸಿದ ಪಠಾಣ್ ಅಣ್ತಮ್ಮಾಸ್ ಲಂಕನ್ನರ ಓಟಕ್ಕೆ ಬ್ರೇಕ್ ಹಾಕಿದರು.
ಕೊನೆ ಓವರ್ ತನಕವೂ ವಿಜಯಲಕ್ಷ್ಮೀಯ ಭರತನಾಟ್ಯ ನಡೆದಿತ್ತು. ಕೊನೆಯಲ್ಲಿ ಭಾರತ 14 ರನ್ನುಗಳ ವಿಜಯ ಸಾಧಿಸಿತು.
ಯಾವ ಐಪಿಎಲ್ ಪಂದ್ಯಕ್ಕೂ ಕಡಿಮೆ ಇರದ ರೋಚಕತೆ ಭಾರತ ಮತ್ತು ಶ್ರೀಲಂಕಾ ಮ್ಯಾಚ್ ನಡುವೆ ಇದ್ದಿದ್ದು ವಿಶೇಷ