ಏಕದಿನ ಪಂದ್ಯದಲ್ಲಿ ಶತಕ ಸಿಡಿಸಿ 1 ವರ್ಷ ಕಳೆದರೂ ಸಹ ವಿರಾಟ್ ಕೊಹ್ಲಿ ಅವರು ಮತ್ತೊಂದು ಶತಕ ಸಿಡಿಸಲು ಪರದಾಡುತ್ತಿದ್ದಾರೆ. ಇಂದು ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಮೊದಲನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರು ಶತಕ ಬಾರಿಸಲಿದ್ದಾರೆ ಎಂದು ಕಾಯುತ್ತಿದ್ದ ಅಭಿಮಾನಿಗಳಿಗೆ ಮತ್ತೆ ಬೇಸರವಾಗಿದೆ.
ಉತ್ತಮವಾಗಿ ಬ್ಯಾಟ್ ಮಾಡುತ್ತಿದ್ದ ಕೊಹ್ಲಿ ಅವರ ಆಟವನ್ನು ನೋಡಿದ ಅಭಿಮಾನಿಗಳು ಈ ದಿನ ವಿರಾಟ್ ಸೆಂಚುರಿ ಹೊಡೆಯುವುದು ಪಕ್ಕ ಎಂದು ಕಾದು ಕುಳಿತಿದ್ದರು. ಆದರೆ ಅಭಿಮಾನಿಗಳ ಆಸೆಗೆ ತಣ್ಣೀರು ಎರೆಚಿರುವ ವಿರಾಟ್ ಕೊಹ್ಲಿ ಅವರು 60 ಎಸೆತಗಳಲ್ಲಿ 56 ರನ್ ಗಳನ್ನು ಬಾರಿಸಿ ಮಾರ್ಕ್ ವುಡ್ ಗೆ ವಿಕೆಟ್ ಒಪ್ಪಿಸಿದರು. ಹೀಗಾಗಿ ವಿರಾಟ್ ಕೊಹ್ಲಿ ಅವರ 71 ನೇ ಶತಕಕ್ಕೆ ಕಾದು ಕುಳಿತಿದ್ದ ಅಭಿಮಾನಿ ಬಳಗಕ್ಕೆ ಇಂದು ಸಹ ನಿರಾಸೆ ಉಂಟಾಗಿದೆ.