ರಾಬರ್ಟ್ ಸಕ್ಸಸ್ ನಲ್ಲಿರುವ ನಿರ್ದೇಶಕ ಉಮಾಪತಿ ಶ್ರೀನಿವಾಸ್ ಗೌಡ ಅವರ ಮುಂದಿನ ಚಿತ್ರ ಮದಗಜ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಶ್ರೀಮುರಳಿ ನಾಯಕ ನಟನಾಗಿ ಅಭಿನಯಿಸುತ್ತಿರುವ ಮದ ಗಜ ಚಿತ್ರಕ್ಕೆ ಅಯೋಗ್ಯ ಖ್ಯಾತಿಯ ಮಹೇಶ್ ಕುಮಾರ್ ಅವರು ನಿರ್ದೇಶನ ಮಾಡುತ್ತಿದ್ದಾರೆ.
ಇದೀಗ ಮದಗಜ ಚಿತ್ರದ ನಿರ್ಮಾಪಕರಾದ ಉಮಾಪತಿ ಶ್ರೀನಿವಾಸ್ ಗೌಡ ಅವರು ಮದಗಜ ಚಿತ್ರದ ನಿರ್ದೇಶಕರಾದ ಮಹೇಶ್ ಕುಮಾರ್ ಅವರಿಗೆ ಹ್ಯುಂಡೈ ವೆನ್ಯೂ ಕಾರನ್ನು ಗಿಫ್ಟ್ ಆಗಿ ನೀಡಿದ್ದಾರೆ. ಹೌದು ಚಿತ್ರ ಬಿಡುಗಡೆಗೂ ಮುನ್ನವೇ ಮಹೇಶ್ ಕುಮಾರ್ ಅವರಿಗೆ ಈ ದುಬಾರಿ ಬೆಲೆಯ ಕಾರನ್ನು ಉಮಾಪತಿ ಅವರು ಉಡುಗೊರೆಯಾಗಿ ನೀಡಿತ್ತು ಇದೀಗ ಸಖತ್ ವೈರಲ್ ಆಗಿದೆ.
ಈ ವಿಷಯವನ್ನು ಸ್ವತಃ ಮಹೇಶ್ ಕುಮಾರ್ ರವರೇ ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ. ನನ್ನ ಜೀವನದ ಮೊದಲ ಕಾರ್ ಅನ್ನು ಉಡುಗೊರೆಯಾಗಿ ನೀಡಿದ ಉಮಾಪತಿ ಅವರಿಗೆ ಧನ್ಯವಾದ ಎಂದು ಮಹೇಶ್ ಕುಮಾರ್ ಫೇಸ್ ಬುಕ್ ಮೂಲಕ ಖುಷಿಯನ್ನು ಹಂಚಿಕೊಂಡಿದ್ದಾರೆ.