No menu items!
12.4 C
Munich
Wednesday, April 29, 2026

ಚೆನ್ನೈ ಮಾಲ್ ನಲ್ಲಿ ವಾರಕ್ಕೂ ಮೊದಲೇ ರಾರಾಜಿಸಿದ ಯುವರತ್ನ

Must read

ಯುವರತ್ನ ಚಿತ್ರದ ಬಿಡುಗಡೆ ದಿನಾಂಕ ಹತ್ತಿರವಾಗುತ್ತಿದ್ದಂತೆ ಎಲ್ಲಾ ಕಡೆ ಕ್ರೇಜ್ ಮಿತಿಮೀರುತ್ತಿದೆ. ವಾರಕ್ಕೂ ಮೊದಲೇ ಚಿತ್ರಮಂದಿರಗಳ ಮುಂದೆ ಬ್ಯಾನರ್ ಮತ್ತು ಪೋಸ್ಟರ್ ಗಳನ್ನ ಅಂಟಿಸುತ್ತಿರುವ ಅಭಿಮಾನಿಗಳು ಯುವರತ್ನ ಚಿತ್ರವನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ.

 

 

ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೆ ಉತ್ತರ ಅಮೇರಿಕಾದಲ್ಲಿ ಯೂ ಸಹ ಯುವರತ್ನ ಕ್ರೇಜ್ ಹುಟ್ಟು ಹಾಕಿದ್ದು ಮಾರ್ಚ್ ಮೂವತ್ತೊಂದನೇ ತಾರೀಖಿನಂದೇ ಯುವರತ್ನ ಉತ್ತರ ಅಮೇರಿಕಾದಲ್ಲಿ ತೆರೆಕಾಣುತ್ತಿದೆ. ಇನ್ನು ತಮಿಳುನಾಡಿನ ಚೆನ್ನೈ ನಗರದಲ್ಲಿಯೂ ಸಹ ಯುವರತ್ನ ಚಿತ್ರದ ಕ್ರೇಜ್ ಶುರುವಾಗಿದ್ದು ಚೆನ್ನೈ ಮಾಲ್ ವೊಂದರಲ್ಲಿ ಯುವರತ್ನ ಚಿತ್ರದ ತಮಿಳು ಸ್ಟ್ಯಾಂಡಿ ಇಡಲಾಗಿದ್ದು ಸಖತ್ ವೈರಲ್ ಆಗಿದೆ.

 

 

ವಾರಕ್ಕೂ ಮೊದಲೇ ಕನ್ನಡ ಚಿತ್ರವೊಂದರ ಸ್ಟ್ಯಾಂಡಿ ಚೆನ್ನೈ ಮಾಲ್ ನಲ್ಲಿ ಇರುವುದನ್ನು ಕಂಡು ಚೆನ್ನೈ ಕನ್ನಡಿಗರು ಫುಲ್ ಖುಷ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ಚಿತ್ರವನ್ನು ಹಂಚಿಕೊಳ್ಳುವುದರ ಮೂಲಕ ಖುಷಿಯನ್ನು ಹಂಚಿಕೊಂಡಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article