ಇಂದು ಮಧ್ಯಾಹ್ನದ ವೇಳೆಯಲ್ಲಿ ಕಿಚ್ಚ ಸುದೀಪ್ ಅವರ ಅಭಿಮಾನಿಯ ತಾಯಿಯೊಬ್ಬರಿಗೆ ಆರೋಗ್ಯ ಸ್ಥಿತಿ ತುಂಬಾ ಗಂಭೀರವಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪರಿಸ್ಥಿತಿ ಕೈ ಮೀರಿದ ಕಾರಣ ಅವರನ್ನು ಐಸಿಯುಗೆ ದಾಖಲು ಮಾಡಲಾಗಿತ್ತು. ಹೀಗಾಗಿ ಅವರನ್ನು ಬದುಕುಳಿಸಲು ಅಪಾರವಾದ ಹಣ ಬೇಕಾಗಿದ್ದರಿಂದ ಆನ್ ಲೈನ್ ಮುಖಾಂತರ ಹಣ ಸಂಗ್ರಹ ಮಾಡುವ ಕೆಲಸಕ್ಕೆ ಕಿಚ್ಚ ಸುದೀಪ್ ಅಭಿಮಾನಿಗಳು ಮುಂದಾದರು.
ಸುದೀಪ್ ಅಭಿಮಾನಿಯ ತಾಯಿ ಒಬ್ಬರು ಐಸಿಯುನಲ್ಲಿ ದಾಖಲಾಗಿದ್ದ ದಯವಿಟ್ಟು ಅವರಿಗೆ ನಿಮ್ಮ ಕೈಲಾದಷ್ಟು ಧನ ಸಹಾಯ ಮಾಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ 1 ಗಂಟೆಯ ಒಳಗಡೆ ಆಸ್ಪತ್ರೆ ಬಿಲ್ ಸಂಪೂರ್ಣವಾಗಿ ಕಟ್ಟಲಾಗಿತ್ತು.
ಆ ಬಿಲ್ ಹೇಗೆ ಪಾವತಿಯಾಯಿತು? ಅಷ್ಟು ದೊಡ್ಡ ಮೊತ್ತ ಬಂದದ್ದು ಏಕೆ ಎಂದು ವಿಚಾರಿಸಿದಾಗ ತಿಳಿದು ಬಂದ ವಿಷಯ ಆ ಬಿಲ್ ಮೊತ್ತವನ್ನು ಸಂಪೂರ್ಣವಾಗಿ ಕಿಚ್ಚ ಸುದೀಪ್ ಅವರೇ ಪಾವತಿ ಮಾಡಿದ್ದರು. ಹೌದು ಅಭಿಮಾನಿಯೊಬ್ಬರ ತಾಯಿಯ ಸ್ಥಿತಿ ಗಂಭೀರವಾದ ವಿಷಯ ತಿಳಿದ ಕಿಚ್ಚ ಸುದೀಪ್ ಅವರೇ ಆಸ್ಪತ್ರೆಯ ಅಕೌಂಟ್ ಗೆ ಹಣವನ್ನು ಸಂದಾಯ ಮಾಡಿ ಅಭಿಮಾನಿ ಸಹಾಯಕ್ಕೆ ನಿಂತರು. ನಿಜಕ್ಕೂ ಕಿಚ್ಚ ಸುದೀಪ್ ಅವರ ಈ ನಡೆಗೆ ಎಷ್ಟು ಪ್ರಶಂಸೆ ವ್ಯಕ್ತಪಡಿಸಿದರೂ ಸಾಲದು..