No menu items!
12.4 C
Munich
Wednesday, April 29, 2026

ನೋ ವರಿ.. ಚಿತ್ರಮಂದಿರ ಫುಲ್ ಓಪನ್

Must read

ರಾಜ್ಯಾದ್ಯಂತ ಕೊರೋನಾವೈರಸ್ ಎರಡನೆ ಅಲೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ಚಿತ್ರಮಂದಿರಗಳಿಗೆ 50% ಅವಕಾಶ ಮಾತ್ರ ಎಂಬ ನಿಯಮ ಮಾಡುವ ಸಂಭವವಿದೆ ಎಂದು ಹೇಳಲಾಗುತ್ತಿತ್ತು.

 

 

ಇಂದು ಬೆಳಿಗ್ಗೆಯಿಂದಲೇ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಮುಂದಿನ ವಾರ ಬಿಡುಗಡೆಯಾಗಲಿರುವ ಯುವರತ್ನ ಚಿತ್ರದ ಮೇಲೂ ಸಹ 50% ವಿಧಿಸುವ ಸಂಭವವಿದೆ ಎಂದು ಹೇಳಲಾಗುತ್ತಿತ್ತು.

 

 

 

ಆದರೆ ಇದೀಗ ಸರ್ಕಾರ ತನ್ನ ನಿಲುವನ್ನು ಪ್ರಕಟಿಸಿದ್ದು ಚಿತ್ರಮಂದಿರಗಳ ಮೇಲೆ ಯಾವುದೇ ರೀತಿಯ ನಿಯಮಾವಳಿ ಇಲ್ಲ ಎಂದು ಹೇಳಿದೆ. ಈಗ ನಡೆಯುತ್ತಿರುವಂತೆ ಸಂಪೂರ್ಣ ಚಿತ್ರಮಂದಿರಗಳು ತೆರೆಯಲಿದ್ದು ವೀಕ್ಷಕರು ತಪ್ಪದೇ ಮಾಸ್ಕ್ ಧರಿಸಿ ಚಿತ್ರಮಂದಿರಕ್ಕೆ ಬನ್ನಿ ಎಂದು ಸರ್ಕಾರ ಹೇಳಿದೆ. ಹೀಗಾಗಿ ಯುವರತ್ನ ಚಿತ್ರದ ಮೇಲೆ 50% ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡಿ ಎಂದು ನಿಯಮ ಜಾರಿಗೆ ಬರಲಿದೆ ಎಂದು ಬೇಸರಕ್ಕೆ ಒಳಗಾಗಿದ್ದ ಅಪ್ಪು ಅಭಿಮಾನಿಗಳಿಗೆ ಸಿಹಿಸುದ್ದಿ ಸಿಕ್ಕಂತಾಗಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article