ಇದು ಕ್ರೇಜಿ ಕ್ವೀನ್ ರಕ್ಷಿತ ಹುಟ್ಟುಹಬ್ಬ. ಚಂದನವನದ ಹಲವಾರು ತಾರೆಗಳು ರಕ್ಷಿತ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದು ದರ್ಶನ್ ತೂಗುದೀಪ ಅವರು ಸಹ ವಿಶ್ ಮಾಡಿದ್ದಾರೆ. ನಟ ನಟಿ ಮಾತ್ರವಲ್ಲದೆ ಉತ್ತಮ ಸ್ನೇಹಿತರಾಗಿರುವ ದರ್ಶನ್ ಮತ್ತು ರಕ್ಷಿತಾ ಉತ್ತಮ ಸ್ನೇಹ ಬಾಂಧವ್ಯವನ್ನು ಹೊಂದಿದ್ದಾರೆ.
ಆದರೆ ಉತ್ತಮ ಜೋಡಿಯಾಗಿದ್ದ ದರ್ಶನ್ ಮತ್ತು ರಕ್ಷಿತಾ ಈಗಲೂ ಸಹ ಒಳ್ಳೆಯ ಸ್ನೇಹಿತರಾಗಿದ್ದು ಇಬ್ಬರೂ ಪರಸ್ಪರ ಹುಟ್ಟುಹಬ್ಬಗಳಿಗೆ ವಿಶೇಷವಾಗಿ ಶುಭಾಶಯವನ್ನು ಕೋರಿಕೊಳ್ಳುತ್ತಾರೆ. ಇಂದು ರಕ್ಷಿತ ಹುಟ್ಟುಹಬ್ಬಕ್ಕೆ ದರ್ಶನ್ ವಿಶೇಷವಾಗಿ ಹುಟ್ಟುಹಬ್ಬದ ವಿಷಯವನ್ನು ಕುರಿತು ಹೀಗೆ..
ಹುಟ್ಟುಹಬ್ಬದ ಶುಭಾಶಯಗಳು. ಪ್ರತಿವರ್ಷ ಜನ್ಮದಿನಗಳು ಬರುತ್ತವೆ, ಆದರೆ ನಿಮ್ಮಂತಹ ಸ್ನೇಹಿತರು ಒಮ್ಮೆ ಮಾತ್ರ ಬರುತ್ತಾರೆ. ನಿಮಗೆ ಹುಟ್ಟುಹಬ್ಬದ ಶುಭಾಶಯಗಳು ಕ್ರೇಜಿ ಕ್ವೀನ್ Rakshitha Prem ಎಂದು ಬರೆದುಕೊಳ್ಳುವ ಮೂಲಕ ದರ್ಶನ್ ರಕ್ಷಿತಾ ಪ್ರೇಮ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.