ನಾವು ಚಿತ್ರಮಂದಿರಗಳ ಮೇಲೆ ಯಾವುದೇ ರೀತಿಯ ಹೇಳಿಕೆ ಹೇರುವುದಿಲ್ಲ ನಿಮ್ಮ ಪಾಡಿಗೆ ನೀವು ಸಿನಿಮಾವನ್ನ ಬಿಡುಗಡೆ ಮಾಡಿ ಮಾಸ್ಕ್ ಧರಿಸಿ ಸಿನಿಮಾ ನೋಡಿ ನಾವು ನಿಮಗೆ ಅಡ್ಡಿ ಮಾಡುವುದಿಲ್ಲ ಎಂದು ಮಾನ್ಯ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರು ಟ್ವೀಟ್ ಮುಖಾಂತರ ಯುವರತ್ನ ಚಿತ್ರತಂಡಕ್ಕೆ ಆಶ್ವಾಸನೆಯನ್ನು ನೀಡಿದ್ದರು.
ರಾಜಕಾರಣಿಗಳ ಆಶ್ವಾಸನೆಯನ್ನು ನಂಬಬೇಡಿ ಎಂದು ಎಷ್ಟೇ ಹೇಳಿದರೂ ಕೇಳದ ನಾವು ನೀವೆಲ್ಲರೂ ಯಡಿಯೂರಪ್ಪನವರ ಈ ಟೊಳ್ಳು ಆಶ್ವಾಸನೆಯನ್ನು ನಂಬಿ ಮೋಸ ಹೋಗಿದ್ದಂತೂ ನಿಜ. ಕೇವಲ ನಾವು ನೀವು ಮಾತ್ರವಲ್ಲ ಯುವರತ್ನ ಚಿತ್ರತಂಡ ಮತ್ತು ಪುನೀತ್ ರಾಜ್ ಕುಮಾರ್ ಅವರು ಸಹ ಯಡಿಯೂರಪ್ಪನವರ ಮೋಸದ ಮಾತಿಗೆ ಮರುಳಾದರು.
ನಿಮ್ಮ ಪಾಡಿಗೆ ನೀವು ಸಿನಿಮಾ ರಿಲೀಸ್ ಮಾಡಿ ನಾವು ಯಾವುದೇ ಕಾರಣಕ್ಕೂ ಚಿತ್ರಮಂದಿರದ ಮೇಲೆ ಅರ್ಧದಷ್ಟು ಭಾಗ ಬ್ಯಾನ್ ಮಾಡುವುದಿಲ್ಲ ಎಂದು ಹೇಳಿದ್ದ ಯಡಿಯೂರಪ್ಪನವರು ನಾಳೆಯಿಂದಲೇ ರಾಜ್ಯಾದ್ಯಂತ ಶೇಕಡಾ 50 ರಷ್ಟು ಸೀಟುಗಳಿಗೆ ಮಾತ್ರ ಅವಕಾಶ ನೀಡುತ್ತೇವೆ ಎಂದು ಹೊಸ ಕಾನೂನು ಜಾರಿಗೆ ತಂದಿದೆ. ಹಾಗಾದರೆ ಅಂದು ಆಶ್ವಾಸನೆ ನೀಡಿದ್ದ ಮಾತು ಎಲ್ಲಿಗೆ ಹೋಯ್ತು? ನಿಮ್ಮ ಪಾಡಿಗೆ ನೀವು ಸಿನಿಮಾ ರಿಲೀಸ್ ಮಾಡಿ ಎಂದು ಮುಂದೆ ಬಿಟ್ಟು ನಟರಿಗೆ ಹಿಂದಿನಿಂದ ಚೂರಿ ಹಾಕುವ ಕೆಲಸ ಎಷ್ಟು ಸರಿ?
ರಾಜಕಾರಣಿಗಳ ಬಾಯಿಂದ ಬರೋ ಮಾತೆಲ್ಲ ಸುಳ್ಳು ಎಂದು ಹಲವಾರು ಮಂದಿ ಹೇಳುತ್ತಾರೆ ಇದೀಗ ಸಿನಿಮಾ ವಿಚಾರದಲ್ಲಿ ಅದನ್ನ ಸ್ವತಃ ರಾಜಕಾರಣಿಗಳು ಪದೇ ಪದೇ ಸಾಬೀತು ಪಡಿಸಿಕೊಳ್ಳುತ್ತಿದ್ದಾರಾ? ಅವರು ಪ್ರತಿನಿತ್ಯ ಓಡಾಡುವ ಜಾಗದಲ್ಲಿ ಹಲವಾರು ಮಂದಿಯ ಗುಂಪು ಕಟ್ಟಿಕೊಂಡು ಹೊರಡುತ್ತಾರೆ ಸಿನಿಮಾಗಳ ಮೇಲೆ ಈ ತಾರತಮ್ಯ ಯಾಕೆ ಎಂದು ನೆಟ್ಟಿಗರು ರಾಜ್ಯ ಸರ್ಕಾರಕ್ಕೆ ಮುಟ್ಟಿ ನೋಡಿಕೊಳ್ಳುವಂತೆ ಕಾಮೆಂಟ್ ಮಾಡುತ್ತಿದ್ದಾರೆ.