ಪಡಿತರ ಚೀಟಿಗೆ ಹೊಸ ಸದಸ್ಯರ ಸೇರ್ಪಡೆ ಹೇಗೆ?

Date:

ಸರಕಾರಿ ದಾಖಲೆಗಳಲ್ಲಿ ರೇಷನ್ ಕಾರ್ಡ್ (ಪಡಿತರ ಚೀಟಿ) ಪ್ರಮುಖವಾದುದು. ರೇಷನ್‌ ಕಾರ್ಡ್‌ ಹೊಂದಿರುವವರಿಗೆ ಪ್ರಸ್ತುತ ಉಚಿತ ಆಹಾರಧಾನ್ಯ ವಿತರಿಸಲಾಗುತ್ತಿದೆ. ಅಲ್ಲದೆ ಕೆಲವು ರಾಜ್ಯಗಳಲ್ಲಿ ಕೈಗೆಟುಕುವ ಬೆಲೆಯಲ್ಲಿ ಆಹಾರ ಧಾನ್ಯ ಪಡೆಯಲು ನೆರವಾಗುತ್ತದೆ. ಈ ದಾಖಲೆಯ ವಿಶೇಷತೆ ಎಂದರೆ, ಇದು ಕುಟುಂಬದ ಎಲ್ಲ ಸದಸ್ಯರ ವಿವರಗಳನ್ನು ಒಳಗೊಂಡಿರುತ್ತದೆ. ಒಂದು ಕುಟುಂಬದಲ್ಲಿ ಎಷ್ಟು ಜನ ಸದಸ್ಯರಿದ್ದಾರೆ ಎಂಬುದನ್ನು ಆಧರಿಸಿ ಪ್ರಮಾಣಾನುಸಾರ ಆಹಾರ ಧಾನ್ಯ ನೀಡಲಾಗುತ್ತದೆ.

ಆದರೆ, ಕೆಲವು ಸಂದರ್ಭಗಳಲ್ಲಿ ಕುಟುಂಬದ ಸದಸ್ಯರ ಸಂಖ್ಯೆ ಹೆಚ್ಚಾಗುತ್ತದೆ. ಅಂದರೆ, ವಿವಾಹ ಅಥವಾ ಮಗು ಜನಿಸಿದಾಗ ಕುಟುಂಬಕ್ಕೆ ಹೊಸ ಸದಸ್ಯರ ಸೇರ್ಪಡೆಯಾಗುತ್ತದೆ. ಬಹಳ ಕಾಲದವರೆಗೆ ಹೊಸ ಸದಸ್ಯರನ್ನು ರೇಷನ್‌ ಕಾರ್ಡ್‌ಗೆ ಸೇರಿಸಿಯೇ ಇರುವುದಿಲ್ಲ. ಕಾರಣ ಈ ಕುರಿತು ಬಹುತೇಕರಿಗೆ ಅರಿವಿಲ್ಲ.

ರೇಷನ್‌ ಕಾರ್ಡ್‌ಗೆ‌ ಹೊಸ ಸದಸ್ಯರನ್ನು ಸೇರ್ಪಡೆಗೊಳಿಸುವ ಪ್ರಕ್ರಿಯೆ ಮತ್ತಷ್ಟು ಸರಳವಾಗಿದೆ. ಮನೆಯಲ್ಲಿ ಕುಳಿತೇ ಆನ್‌ಲೈನ್‌ ಮೂಲಕ ಸೇರ್ಪಡೆ ಮಾಡಬಹುದಾಗಿದೆ. ಇದಕ್ಕಾಗಿ ಕೆಲವು ಸರಳ ವಿಧಾನಗಳನ್ನು ಅನುಸರಿಸಬಹುದು. ಈ ಕುರಿತು ಪೂರ್ಣ ವಿವರ ಇಲ್ಲಿದೆ.

ಪಡಿತರ ಕಾರ್ಡ್‌ಗೆ ಹೊಸ ಸದಸ್ಯರ ಹೆಸರನ್ನು ಸೇರಿಸಲು ಆಧಾರ್ ಮೊದಲು ಕಾರ್ಡ್ ತಿದ್ದುಪಡಿ ಮಾಡಬೇಕಾಗುತ್ತದೆ. ಮದುವೆಯ ನಂತರ ಉಪನಾಮ ಬದಲಾಯಿಸಬೇಕು. ಮಹಿಳೆಯ ತಂದೆ ಹೆಸರಿನ ಬದಲು ಗಂಡನ ಹೆಸರು ಹಾಕಿ ಆಧಾರ್ ಕಾರ್ಡ್ ನಲ್ಲಿ ವಿಳಾಸ ನವೀಕರಿಸಬೇಕಾಗುತ್ತದೆ. ನಂತರ ಹೊಸ ಆಧಾರ್ ಕಾರ್ಡನ್ನು ಆಹಾರ ಇಲಾಖೆ ಅಧಿಕಾರಿಗೆ ನೀಡಬೇಕು. ಹಾಗೆಯೇ ಹಳೆಯ ಪಡಿತರ ಚೀಟಿಯಿಂದ ಹೆಸರನ್ನು ತೆಗೆದುಹಾಕಿದ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಬೇಕು. ಇದೆಲ್ಲಕ್ಕೂ ಮುನ್ನ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಿಮ್ಮ ರೇಷನ್‌ ಕಾರ್ಡ್‌ಗೆ ನೋಂದಾಯಿಸಬೇಕು.

ಪಡಿತರ ಕಾರ್ಡ್‌ಗೆ ಹೊಸ ಸದಸ್ಯರ ಹೆಸರನ್ನು ಸೇರಿಸಲು ಆಧಾರ್ ಮೊದಲು ಕಾರ್ಡ್ ತಿದ್ದುಪಡಿ ಮಾಡಬೇಕಾಗುತ್ತದೆ. ಮದುವೆಯ ನಂತರ ಉಪನಾಮ ಬದಲಾಯಿಸಬೇಕು. ಮಹಿಳೆಯ ತಂದೆ ಹೆಸರಿನ ಬದಲು ಗಂಡನ ಹೆಸರು ಹಾಕಿ ಆಧಾರ್ ಕಾರ್ಡ್ ನಲ್ಲಿ ವಿಳಾಸ ನವೀಕರಿಸಬೇಕಾಗುತ್ತದೆ. ನಂತರ ಹೊಸ ಆಧಾರ್ ಕಾರ್ಡನ್ನು ಆಹಾರ ಇಲಾಖೆ ಅಧಿಕಾರಿಗೆ ನೀಡಬೇಕು. ಹಾಗೆಯೇ ಹಳೆಯ ಪಡಿತರ ಚೀಟಿಯಿಂದ ಹೆಸರನ್ನು ತೆಗೆದುಹಾಕಿದ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಬೇಕು. ಇದೆಲ್ಲಕ್ಕೂ ಮುನ್ನ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಿಮ್ಮ ರೇಷನ್‌ ಕಾರ್ಡ್‌ಗೆ ನೋಂದಾಯಿಸಬೇಕು.

 

ಪಡಿತರ ಕಾರ್ಡ್‌ಗೆ ಮೊಬೈಲ್ ಸಂಖ್ಯೆಯನ್ನು ಲಿಂಕ್ ಮಾಡದಿದ್ದರೆ, ಆನ್‌ಲೈನ್‌ ಮೂಲಕವೇ ರಿಜಿಸ್ಟರ್‌ ಮಾಡಿಕೊಳ್ಳಬಹುದು. ಇಲ್ಲಿ ತಿಳಿಸಿರುವ ವಿಧಾನ ಅನುಸರಿಸುವ ಮೂಲಕ ಮೊಬೈಲ್‌ ನಂಬರ್‌ ಲಿಂಕ್ ಮಾಡಬಹುದು

ಸರಕಾರದ ಅಧಿಕೃತ ವೆಬ್‌ಸೈಟ್‌ಗೆ (https://nfs.delhi.gov.in/Citizen/UpdateMobileNumber.aspx) ಭೇಟಿ ನೀಡಬೇಕು. ಇಲ್ಲಿ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನವೀಕರಿಸುವ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು.

ಆಧಾರ್ ಸಂಖ್ಯೆಯನ್ನು ಕೇಳಲಾಗುತ್ತದೆ. ಇಲ್ಲಿ ಮನೆಯ ಮುಖ್ಯಸ್ಥರ ಆಧಾರ್ ಕಾರ್ಡ್ ಸಂಖ್ಯೆಯನ್ನು ಭರ್ತಿ ಮಾಡಬೇಕು. ಎರಡನೇ ಕಾಲಂನಲ್ಲಿ ಪಡಿತರ ಚೀಟಿ ಸಂಖ್ಯೆಯನ್ನು ಬರೆಯಬೇಕು. ಮೂರನೇ ಕಾಲಂನಲ್ಲಿ ಮನೆಯ ಮುಖ್ಯಸ್ಥರ ಹೆಸರನ್ನು ಭರ್ತಿ ಮಾಡಿ ನಂತರ ನಿಮ್ಮ ಮೊಬೈಲ್ ಸಂಖ್ಯೆಯನ್ನು ಭರ್ತಿ ಮಾಡಬೇಕು. ಈಗ ನಿಮ್ಮ ಪಡಿತರ ಚೀಟಿಗೆ ನಿಮ್ಮ ಮೊಬೈಲ್‌ ಸಂಖ್ಯೆ ಲಿಂಕ್‌ ಆದಂತೆ.

ರೇಷನ್ ಕಾರ್ಡ್ ನಲ್ಲಿ ಹೆಸರು, ವಿಳಾಸ ಸೇರಿದಂತೆ ಇತರ ಕೆಲವು ವಿವರಗಳು ತಪ್ಪಾಗಿದ್ದರೆ ಅದನ್ನೂ ಆನ್‌ಲೈನ್‌ ಮೂಲಕವೇ ಸರಿಪಡಿಸಬಹುದು.

 

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...