ಸೋಲಿನ ಗಾಯದ ಮೇಲೆ ಧೋನಿಗೆ 12 ಲಕ್ಷ ದಂಡದ ಬರೆ

Date:

 

2021ರ ಐಪಿಎಲ್ ಟೂರ್ನಿಯಲ್ಲಿ ಮಹೇಂದ್ರ ಸಿಂಗ್ ಧೋನಿ ಅವರಿಗೆ ಉತ್ತಮ ಆರಂಭವೇನೂ ಸಿಕ್ಕಂತೆ ಕಾಣುತ್ತಿಲ್ಲ ಒಂದೆಡೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋಲು ಮತ್ತೊಂದೆಡೆ ನಿಧಾನಗತಿಯ ಬೌಲಿಂಗ್‌ನಿಂದಾಗಿ 12 ಲಕ್ಷ ದಂಡ ಬಿದ್ದಿದೆ. ಏಪ್ರಿಲ್ 10ರ ಶನಿವಾರದಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದಲ್ಲಿ ಡೆಲ್ಲಿ ತಂಡ 7 ವಿಕೆಟ್‍ಗಳ ಭರ್ಜರಿ ಜಯ ಸಾಧಿಸಿತು.

ಮೊದಲು ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ 20 ಓವರ್‌ಗಳಲ್ಲಿ 188 ರನ್ ಗಳಿಸಿದರೂ ಸಹ ಡೆಲ್ಲಿ ತಂಡ ಇನ್ನೂ 8 ಎಸೆತಗಳು ಬಾಕಿ ಇರುವಾಗಲೇ ಗೆಲುವು ಸಾಧಿಸಿತು. ಡೆಲ್ಲಿ ತಂಡದ ಪರ ಆರಂಭಿಕರಾಗಿ ಬಂದ ಪೃಥ್ವಿ ಶಾ ಮತ್ತು ಶಿಖರ್ ಧವನ್ 138 ರನ್‌ಗಳ ಆಡಿದ ಜತೆಯಾಟ ಚೆನ್ನೈ ಸೂಪರ್ ಕಿಂಗ್ಸ್ ಬೌಲರ್‌ಗಳನ್ನು ಒತ್ತಡಕ್ಕೆ ತಳ್ಳಿತು. ಪಂದ್ಯದ ಆರಂಭದಿಂದಲೂ ಸಹ ಒತ್ತಡದಲ್ಲಿಯೇ ಬೌಲಿಂಗ್ ಮಾಡಿದ ಚೆನ್ನೈ ಬೌಲರ್‌ಗಳು ವಿಕೆಟ್ ಪಡೆಯಲು ಹರಸಾಹಸ ಪಟ್ಟರು.

2021ರ ಇಂಡಿಯನ್ ಪ್ರಿಮಿಯರ್ ಲೀಗ್ ನೀತಿಸಂಹಿತೆ ಪ್ರಕಾರ 20 ಓವರ್‌ಗಳನ್ನು 90 ನಿಮಿಷಗಳಲ್ಲಿ ಮಾಡಿ ಮುಗಿಸಬೇಕು. ಆದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ನಿಧಾನಗತಿಯ ಬೌಲಿಂಗ್ ಮಾಡಿದ್ದಕ್ಕೆ ನಾಯಕ ಧೋನಿಗೆ 12 ಲಕ್ಷ ದಂಡ ವಿಧಿಸಿದ್ದು ಸೋಲಿನ ಕಾಯದ ಮೇಲೆ ದಂಡದ ಬರೆ ಎಳೆದಂತಾಗಿದೆ. ವಾಂಖೆಡೆ ಸ್ಟೇಡಿಯಂನಲ್ಲಿ ತಡವಾಗಿ ಸುರಿದ ಇಬ್ಬನಿಯಿಂದಲೇ ಚೆನ್ನೈ ತಂಡದ ಬೌಲರ್‌ಗಳು ನಿಧಾನಗತಿಯ ಬೌಲಿಂಗ್ ಮಾಡಿದರು ಎನ್ನಲಾಗುತ್ತಿದೆ.

 

Share post:

Subscribe

spot_imgspot_img

Popular

More like this
Related

ವೃಕ್ಷಮಾತೆ, ಪದ್ಮಶ್ರೀ ಪುರಸ್ಕೃತೆ “ಸಾಲು ಮರದ ತಿಮ್ಮಕ್ಕ” ಇನ್ನಿಲ್ಲ..!

ವೃಕ್ಷಮಾತೆ, ಪದ್ಮಶ್ರೀ ಪುರಸ್ಕೃತೆ "ಸಾಲು ಮರದ ತಿಮ್ಮಕ್ಕ" ಇನ್ನಿಲ್ಲ..! ಬೆಂಗಳೂರು: ಪದ್ಮಶ್ರೀ ಪುರಸ್ಕೃತ...

ಬಿಹಾರ ಚುನಾವಣೆ 2025 ಫಲಿತಾಂಶ: ಭರ್ಜರಿ ಮುನ್ನಡೆ ಸಾಧಿಸಿರುವ NDA ಮೈತ್ರಿಕೂಟ!

ಬಿಹಾರ ಚುನಾವಣೆ 2025 ಫಲಿತಾಂಶ: ಭರ್ಜರಿ ಮುನ್ನಡೆ ಸಾಧಿಸಿರುವ NDA ಮೈತ್ರಿಕೂಟ! ನವದೆಹಲಿ:...

ರಾಜ್ಯ ಸರ್ಕಾರದಿಂದ 2025ನೇ ಸಾಲಿನ ‘ಸಾರ್ವತ್ರಿಕ ರಜಾ’ ದಿನಗಳ ಪಟ್ಟಿ ಬಿಡುಗಡೆ

ರಾಜ್ಯ ಸರ್ಕಾರದಿಂದ 2025ನೇ ಸಾಲಿನ 'ಸಾರ್ವತ್ರಿಕ ರಜಾ' ದಿನಗಳ ಪಟ್ಟಿ ಬಿಡುಗಡೆ ಕರ್ನಾಟಕ...

ಒತ್ತಡದಿಂದ ಮುಕ್ತಿ ಪಡೆಯಲು ಈ ಪಾನೀಯಗಳನ್ನು ಕುಡಿಯಿರಿ

ಒತ್ತಡದಿಂದ ಮುಕ್ತಿ ಪಡೆಯಲು ಈ ಪಾನೀಯಗಳನ್ನು ಕುಡಿಯಿರಿ ಇಂದಿನ ವೇಗದ ಜೀವನದಲ್ಲಿ ಬಹುತೇಕ...