No menu items!
12 C
Munich
Monday, April 20, 2026

ರೈನಾ ಬ್ಯಾಟಿಂಗ್ ಹೊಗಳಿದ ಆರ್‌ಸಿಬಿ ಆಟಗಾರನಿಗೆ ಫ್ಯಾನ್ಸ್ ಪಾಠ

Must read

 

ಇಂಡಿಯನ್ ಪ್ರೀಮಿಯರ್ ಲೀಗ್ ಸಮಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳು ಕಿತ್ತಾಡುವಷ್ಟು ಬೇರೆ ಯಾವುದೇ ತಂಡಗಳ ಅಭಿಮಾನಿಗಳು ಸಹ ಕಿತ್ತಾಡುವುದಿಲ್ಲ ಎನಿಸುತ್ತದೆ. ಎರಡೂ ತಂಡಗಳ ನಡುವೆ ಪಂದ್ಯವಿದ್ದಾಗ ಮಾತ್ರವಲ್ಲದೆ ಇತರೆ ಐಪಿಎಲ್ ತಂಡಗಳ ಪಂದ್ಯಗಳ ಸಮಯದಲ್ಲಿಯೂ ಸಹ ಬೆಂಗಳೂರು ಮತ್ತು ಚೆನ್ನೈ ತಂಡಗಳ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಪರಸ್ಪರ ಕಾಲೆಳೆಯುವುದರಲ್ಲಿ ತೊಡಗಿರುತ್ತಾರೆ.

ಇದೀಗ ಅಂತಹದ್ದೇ ಘಟನೆ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಎರಡನೇ ಪಂದ್ಯದ ವೇಳೆ ನಡೆದಿದೆ. ಶನಿವಾರ ನಡೆದ ಈ ಬಾರಿಯ ಐಪಿಎಲ್ ಟೂರ್ನಿಯ ಎರಡನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಸೆಣಸಾಡಿದವು. ಚೆನ್ನೈ ತಂಡದ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 7 ವಿಕೆಟ್‍ಗಳ ಭರ್ಜರಿ ಗೆಲುವು ಸಾಧಿಸಿತು. ಮೊದಲು ಬ್ಯಾಟಿಂಗ್ ಆರಂಭಿಸಿದ ಚೆನ್ನೈ ತಂಡ 2.1 ಓವರ್‌ಗಳಲ್ಲಿ ಕೇವಲ 7 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ಸಂದರ್ಭದಲ್ಲಿ ಜತೆಯಾದ ಮೊಯಿನ್ ಅಲಿ ಮತ್ತು ಸುರೇಶ್ ರೈನಾ ತಂಡವನ್ನು ಉತ್ತಮ ಸ್ಥಿತಿಯತ್ತ ತಂದರು. 15.1 ಓವರ್‌ಗಳವರೆಗೂ ಉತ್ತಮ ಬ್ಯಾಟಿಂಗ್ ಮಾಡಿದ ರೈನಾ 36 ಎಸೆತಗಳಿಗೆ 54 ರನ್ ಬಾರಿಸಿದರು.

 

ಸುರೇಶ್ ರೈನಾ ಅವರ ಈ ಇನ್ನಿಂಗ್ಸ್ ನೋಡಿ ಬೆಂಗಳೂರು ತಂಡದ ಆಟಗಾರ ಸಚಿನ್ ಬೇಬಿ ಟ್ವಿಟರ್ ಮೂಲಕ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ. “ಚಿನ್ನ ತಲಾ ಸುರೇಶ್ ರೈನಾ ವಾಟ್ ಎ ಕಮ್ ಬ್ಯಾಕ್ ವೆಲ್ ಪ್ಲೇಯ್ಡ್” ಎಂದು ಟ್ವಿಟರ್ ಮೂಲಕ ಸಚಿನ್ ಬೇಬಿ ಸುರೇಶ್ ರೈನಾ ಅವರ ಆಟವನ್ನು ಕೊಂಡಾಡಿದ್ದಾರೆ. ಸಚಿನ್ ಬೇಬಿ ಅವರ ಈ ಟ್ವೀಟ್ ಗೆ ರಿಪ್ಲೈ ಮಾಡಿರುವ ಕೆಲಸ ಆರ್‌ಸಿಬಿ ಅಭಿಮಾನಿಗಳು ಮೊದಲು ಆರ್ ಸಿಬಿ ಪಂದ್ಯಗಳ ಕಡೆ ಗಮನ ಕೊಡಿ ಎಂದು ಸಚಿನ್ ಬೇಬಿಗೆ ಕೌಂಟರ್ ನೀಡಿದ್ದಾರೆ.

 

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article