ಬಿ ಎಸ್ ವೈ ಶೀಘ್ರವೇ ಗುಣಮುಖರಾಗಲಿ.

Date:

ನಾಡಿನ ಜನಸೇವೆಯ ಹಿತದೃಷ್ಟಿಯಿಂದ ಸಾಧ್ಯವಾದಷ್ಟು ಬೇಗನೆ ಚೇತರಿಸಿಕೊಳ್ಳಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹಾರೈಸಿದ್ದಾರೆ.

 

ತಮಗೆ ಎರಡನೇ ಬಾರಿಗೆ ಕೊರೋನಾ ಬಾಧಿಸಿರುವುದು ಗೊತ್ತಾಗಿ ತುಂಬಾ ಆಘಾತವಾಯಿತು. ತಾವು ವಯಸ್ಸನ್ನೂ ಲೆಕ್ಕಿಸದೇ ಹಗಲಿರಳೆಂಬ ಭೇದವಿಲ್ಲದೆ ಜನಸೇವೆಯಲ್ಲಿ ತೊಡಗಿಸಿಕೊಂಡು ನಾಡಿಗಾಗಿ ತಮ್ಮನ್ನು ತಾವು ದುಡಿಸಿಕೊಂಡವರು. ಇಂತಹ ಸಂದರ್ಭದಲ್ಲಿ ತಮಗೆ ಕೊರೋನಾ ಬಾಧಿಸಿರುವುದು ದುರದೃಷ್ಟಕರ ಎಂದು ಅವರು ಮುಖ್ಯಮಂತ್ರಿಯವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

 

ತಮಗೆ ಇಡೀ ನಾಡಿನ ಜನರ ಆಶೀರ್ವಾದವಿದ್ದೇ ಇದೆ. ಭಗವಂತನ ಹಾಗೂ ನಾಡಿನ ಎಲ್ಲ ಗುರುಗಳ ಅನುಗ್ರಹವೂ ಇದೆ. ತಾವು ಆದಷ್ಟು ಬೇಗನೆ ಚೇತರಿಸಿಕೊಂಡು ಕೊರೋನಾ ಮುಕ್ತವಾಗಿ ಮತ್ತೆ ಎಂದಿನಂತೆ ಜನಸೇವೆಯಲ್ಲಿ ತೊಡಗಿಸಿಕೊಳ್ಳಲು ದಯಾಮಯನಾದ ಭಗವಂತ ಅನುಗ್ರಹಿಸಲಿ ಎಂದು ಸುರೇಶ್ ಕುಮಾರ್ ಬೇಡಿಕೊಂಡಿದ್ದಾರೆ.

 

 

ಹೋರಾಟವನ್ನೇ ಬದುಕನ್ನಾಗಿಸಿಕೊಂಡು, ಕಾಲಿಗೆ ಚಕ್ರಕಟ್ಟಿಕೊಂಡವರಂತೆ ನಾಡಿನ ದೀನ ದಲಿತರ ಕಷ್ಟಸುಖಗಳಲ್ಲಿ ಒಂದಾಗಿ ತಮ್ಮ ಆರೋಗ್ಯದತ್ತಲೂ ಗಮನಹರಿಸದೇ ದುಡಿಯುತ್ತಿರುವ ತಮ್ಮ ಸೇವೆ ನಿರಂತರವಾಗಿ ಬೇಕಾಗಿದೆ. ಅದಕ್ಕಾಗಿ ಸಾಧ್ಯವಾದಷ್ಟು ಬೇಗನೆ ಚೇತರಿಸಿಕೊಂಡು ಎಂದಿನಂತೆ ಜನರಿಗಾಗಿ ಅರ್ಪಿಸಿಕೊಳ್ಳುವಂತಾಗಲಿ ಎಂದು ಸಚಿವರು ಹಾರೈಸಿದ್ದಾರೆ.

Share post:

Subscribe

spot_imgspot_img

Popular

More like this
Related

ನೂತನ ಐಟಿ ನಗರಕ್ಕೆ ನಿರಂತರ ಹೂಡಿಕೆ, 60 ದೇಶಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ: ಡಿ.ಕೆ. ಶಿವಕುಮಾರ್

ನೂತನ ಐಟಿ ನಗರಕ್ಕೆ ನಿರಂತರ ಹೂಡಿಕೆ, 60 ದೇಶಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ:...

ಮೆಟ್ರೋ ನಿಲ್ದಾಣಕ್ಕೆ ಬಾಂಬ್ ಬೆದರಿಕೆ; ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ಎಫ್ಐಆರ್

ಮೆಟ್ರೋ ನಿಲ್ದಾಣಕ್ಕೆ ಬಾಂಬ್ ಬೆದರಿಕೆ; ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ಎಫ್ಐಆರ್ ಬೆಂಗಳೂರು: ನಗರದ...

ಮೊಳಕೆ ಕಾಳು ತಿನ್ನುವುದರಿಂದ ಆರೋಗ್ಯಕ್ಕೆ ಏನೇನು ಲಾಭ ತಿಳಿಯಿರಿ

ಮೊಳಕೆ ಕಾಳು ತಿನ್ನುವುದರಿಂದ ಆರೋಗ್ಯಕ್ಕೆ ಏನೇನು ಲಾಭ ತಿಳಿಯಿರಿ ಇತ್ತೀಚಿನ ದಿನಗಳಲ್ಲಿ ಆರೋಗ್ಯ...

ಬಿಹಾರ ಸಿಎಂ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ

ಬಿಹಾರ ಸಿಎಂ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ ನವದೆಹಲಿ: ಇಂದು ಮುಖ್ಯಮಂತ್ರಿ ಸ್ಥಾನಕ್ಕೆ...