ಪತ್ರ ಓದಿದ ಕೂಡಲೇ ದೇವೇಗೌಡ್ರಿಗೆ ಕರೆ ಮಾಡಿದ ಮೋದಿ ! ಪಿಎಂ ಮಾತಾಡ್ತಿದ್ದಂತೆ ಟ್ವೀಟ್ ಮಾಡಿದ ಎಚ್ ಡಿಡಿ!
ಪ್ರಧಾನಿ ನರೇಂದ್ರ ಮೋದಿ ಮಾಜಿ ಪ್ರಧಾನಿ ಕನ್ನಡದ ಮಣ್ಣಿನ ಮಗ ಎಚ್ ಡಿ ದೇವೇಗೌಡ್ರಿಗೆ ಕರೆ ಮಾಡಿದ್ದಾರೆ. ಮೋದಿ ದೇವೇಗೌಡರ ಪತ್ರ ಓದಿ ಕರೆ ಮಾಡಿದ್ದು, ಅವರು ಮಾತನಾಡುತ್ತಿದ್ದಂತೆ ದೇವೇಗೌಡ್ರು ಟ್ವೀಟ್ ಮಾಡಿದ್ದಾರೆ.
ಹೌದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಕೋವಿಡ್ ಪರಿಸ್ಥಿತಿ ಕುರಿತು, ನಿಯಂತ್ರಣ ಕ್ರಮದ ಕುರಿತು ಒಂದಿಷ್ಟು ಸಲಹೆ ನೀಡಿದ್ದರು.ಅದನ್ನು ಓದಿದ ಮೋದಿ ದೇವೇಗೌಡರಿಗೆ ಕರೆ ಮಾಡಿ ಮಾತನಾಡಿದ್ದಾರಂತೆ. ನಾನು ನಿಮ್ಮ ಸಲಹೆಗಳನ್ನು ತೆಗೆದುಕೊಳ್ಳುತ್ತೇನೆಂದು ಭರವಸೆ ನೀಡಿದ್ದಾರೆ.
ಮೋದಿ ಕರೆಮಾಡಿರುವ ಬಗ್ಗೆ ದೇವೇಗೌಡರು ಟ್ವೀಟ್ ಮೂಲಕ ತಿಳಿಸಿದ್ದಾರೆ. ಅಲ್ಲದೆ ಕೋವಿಡ್ ಸೋಂಕು ನಿಯಂತ್ರಣಕ್ಕೆ ಒಗ್ಗಟ್ಟಲ್ಲಿ ಕೆಲಸ ಮಾಡುವುದಾಗಿ ತಿಳಿಸಿದ್ದಾರೆ.