No menu items!
7.5 C
Munich
Monday, April 20, 2026

ನಂಗೆ ಅವರದ್ದೇ ಚಿಂತೆ ಅಂದ್ರು ಸಂಜನಾ ಗಲ್ರಾನಿ!

Must read

ಸ್ಯಾಂಡಲ್‌ವುಡ್ ನಟಿ ಸಂಜನಾ ಗಲ್ರಾನಿ ಅವರು ಡ್ರಗ್ಸ್ ಮಾಫಿಯಾ ವಿಚಾರವಾಗಿ ತಿಂಗಳಾನುಗಟ್ಟಲೇ ಜೈಲುವಾಸ ಅನುಭವಿಸಿದ್ದರು. ಜಾಮೀನು ಮೇಲೆ ಹೊರಬಂದಿರುವ ನಟಿ ಸಂಜನಾ ಈಗ ಕುಟುಂಬದ ಜೊತೆಗೆ ಸಮಯ ಕಳೆಯುವುದರ ಜೊತೆಗೆ ಮತ್ತೆ ಕೆಲಸಕ್ಕೆ ಹಿಂತಿರುಗಲು ಯೋಜನೆ ಹಾಕಿದ್ದಾರೆ. ಈ ನಡುವೆ ಅವರ ಮದುವೆ ವಿಚಾರವೂ ಕೂಡ ಡ್ರಗ್ಸ್ ವಿಚಾರಣೆ ವೇಳೆ ಜಗಜ್ಜಾಹೀರಾಗಿತ್ತು.

ಈಗ ಅವರು ಮದುವೆ ಹಾಗೂ ಗಂಡನ ಬಗ್ಗೆ ‘ಟೈಮ್ಸ್ ಆಫ್ ಇಂಡಿಯಾ’ ಜೊತೆ ಮಾತನಾಡಿದ್ದಾರೆ. “ಪಾಷಾ ಅವರು ಪ್ರತಿನಿತ್ಯ ಕೊರೊನಾ ವೈರಸ್ ರೋಗಿಗಳನ್ನು ಸಂಪರ್ಕ ಮಾಡಿರುತ್ತಾರೆ. ಹೀಗಾಗಿ ನಮ್ಮಿಬ್ಬರಿಗೂ ಕೊರೊನಾ ಬಂದಿರಬಹುದು. ಕಳೆದ ವರ್ಷವೇ ವಿಶ್ರಾಂತಿ ಪಡೆದು ಮನೆಯಲ್ಲಿಯೇ ಇರಿ ಅಂತ ನಾನು ಅವರ ಸುರಕ್ಷತೆ ದೃಷ್ಟಿಯಿಂದ ಹೇಳಿದ್ದೆ. ನಾನು ಈ ಕಾರಣಕ್ಕೆ ಓದಿದ್ದೇನೆ ಎಂದು ಅವರು ಹೇಳಿದ್ದರು. ಪಾಷಾ ಏನು ಹೇಳಿದರೂ ಕೂಡ ನನಗೆ ಅವರ ಸುರಕ್ಷತೆಯ ಭಯವಿದೆ” ಎಂದು ಸಂಜನಾ ಹೇಳಿದ್ದಾರೆ.

“ಬಾಲ್ಯದಿಂದಲೂ ನನಗೆ ಉಸಿರಾಟದ ಸಮಸ್ಯೆ ಇದೆ, ಆಗಾಗ ಏರಿಳಿತವಾಗುತ್ತಿರುತ್ತದೆ. ಹಾಗಾಗಿ ನನ್ನ ಸೋಂಕು ಉಲ್ಬಣವಾಗೋದಿಲ್ಲ ಅಂತ ಭಾವಿಸುತ್ತೇನೆ. ಆದಷ್ಟು ಸಕಾರಾತ್ಮಕ ಚಿಂತನೆ ಮಾಡಲು ಪ್ರಯತ್ನಪಡ್ತೀನಿ. ನನಗೆ 16 ವರ್ಷವಿದ್ದಾಗಿನಿಂದಲೂ ಪಾಷಾ ಗೊತ್ತಿದೆ. ನಾವು ಅನೇಕ ವರ್ಷಗಳಿಂದಲೂ ಸ್ನೇಹಿತರಾಗಿದ್ದೆವು. ಅವರಿಗೆ ಬಣ್ಣದ ಲೋಕ ಇಷ್ಟವಿಲ್ಲ ಎಂಬ ಕಾರಣಕ್ಕೆ ಈ ವಿಚಾರ ಮುಚ್ಚಿಟ್ಟಿದ್ದೆ. ಲಾಕ್‌ಡೌನ್ ಸಮಯದಲ್ಲಿ ನಾವಿಬ್ಬರೂ ಮದುವೆಯಾದೆವು. ಎಲ್ಲರಿಗೂ ತಿಳಿಸೋಣ ಅಂತ ಅಂದುಕೊಂಡಿದ್ದೆವು, ಆದರೆ ಅವಕಾಶ ಸಿಗಲಿಲ್ಲ” ಎಂದು ಸಂಜನಾ ಹೇಳಿದ್ದಾರೆ.

“ನನ್ನ ಜೊತೆಗೆ ಕಳೆದ ವರ್ಷ ಏನಾಯ್ತೋ, ಆಗ ಪಾಷಾ ಅವರು ನನ್ನ ಜೊತೆಗಿದ್ದರು. ಅವರ ಕುಟುಂಬ ಕೂಡ ನನ್ನ ಒಪ್ಪಿಕೊಂಡಿದೆ. ಈಗ ನಮ್ಮದು ದೊಡ್ಡ ಕುಟುಂಬ ಅಂತ ಅನಿಸ್ತಿದೆ. ಮೊದಲ ರಂಜಾನ್ ಬಗ್ಗೆ ತುಂಬ ಉತ್ಸುಕಳಾಗಿದ್ದೇನೆ. ನಾನು ಪ್ರತಿದಿನ ಉಪವಾಸ ಮಾಡುತ್ತಿದ್ದೆ. ಆದರೆ ಕೊರೊನಾ ಬಂತು. ನಾನು ಅಗತ್ಯವಿರುವವರಿಗೆ ಸಹಾಯ ಮಾಡೋಣ ಅಂತ ಅಂದುಕೊಂಡಿದ್ದೇನೆ. ನನ್ನ ಫೌಂಡೇಶನ್ ಮೂಲಕ ಸಹಾಯ ಮಾಡೋಣ, ಕೊರೊನಾ ವೈರಸ್ ಕುರಿತು ಜಾಗೃತಿ ಮೂಢಿಸೋಣ ಅಂತ ಅಂದುಕೊಂಡಿದ್ದೇನೆ” ಎಂದು ಸಂಜನಾ ಮಾಹಿತಿ ನೀಡಿದ್ದಾರೆ.

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article