ಬೆಂಗಳೂರು: ಆರೋಗ್ಯ ಸರಿಯಿರದ ಕಾರಣ 2 ವಾರದ ವೀಕೆಂಡ್ ಎಪಿಸೋಡ್ ನಲ್ಲಿ ಕಾಣಿಸಿಕೊಳ್ಳದ ಕಿಚ್ಚ ಸುದೀಪ್ ಅವರು ಇದೇ ಶನಿವಾರ ವೀಕ್ಷಕರ ಮುಂದೆ ಬರುವ ಸಾಧ್ಯತೆಗಳಿವೆ.
ಈ ಸಂಬಂಧ ಟ್ವೀಟ್ ಮಾಡಿ ಸುಳಿವು ನೀಡಿರುವ ಅಭಿನಯ ಚಕ್ರವರ್ತಿ, ಆರೋಗ್ಯ ಸುಧಾರಿಸಿದ್ದು, ಈ ವಾರ ಬಿಗ್ ಬಾಸ್ ಎಪಿಸೊಡ್ ನಲ್ಲಿ ಕಾಣಿಸಿಕೊಳ್ಳಲು ಕಾತುರರಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಅಲ್ಲದೆ ನನ್ನ ಆರೋಗ್ಯಕ್ಕಾಗಿ ಪ್ರಾರ್ಥಿಸಿದ ಹಾಗೂ ಹಾರೈಸಿದ ಎಲ್ಲರಿಗೂ ಕೃತಜ್ಞನಾಗಿದ್ದೇನೆ ಎಂದಿದ್ದಾರೆ. ಇದೇ ವೇಳೆ ಕಿಚ್ಚ, ವೈದ್ಯ ಡಾ. ವೆಂಕಟೇಶ್ ಹಾಗೂ ಡಾ. ವಿನಯ್ ಅವರಿಗೂ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ನನ್ನ ಆರೋಗ್ಯ ಸುಧಾರಣೆಗಾಗಿ ಹಲವಾರು ಮಂದಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ. ಇದರ ವೀಡಿಯೋಗಳು ನನಗೆ ದೊರಕಿವೆ. ಎಲ್ಲರಿಗೂ ಧನ್ಯವಾದ ತಿಳಿಸಿರುವ ಕಿಚ್ಚ ‘ಲವ್ ಯೂ ಆಲ್’ ಇಷ್ಟೇ ಹೇಳಬಲ್ಲೇ ಎಂದು ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.
ಸುದೀಪ್ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಚಿಕಿತ್ಸೆ ಪಡೆದು ರೆಸ್ಟ್ ಮಾಡುತ್ತಿದ್ದಾರೆ. ಹೀಗಂತ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಲೇ ಇತ್ತು. ಬಳಿಕ ಇದೇ ವಿಚಾರವಾಗಿ ಸ್ವತಃ ಕಿಚ್ಚ ಸುದೀಪ್ ಟ್ವೀಟ್ ಮಾಡಿ ಸ್ಪಷ್ಟನೆ ಕೊಟ್ಟಿದ್ದರು.
ಟ್ವೀಟ್‍ನಲ್ಲಿ ಏನಿತ್ತು..?
ನನಗೆ ಆರೋಗ್ಯ ಸರಿಯಿಲ್ಲ. ಸದ್ಯದಲ್ಲೇ ಗುಣಮುಖನಾಗುತ್ತೇನೆ ಎಂಬ ಭರವಸೆಯಿದೆ. ಆದರೆ ವೈದ್ಯರು ಇನ್ನೂ ಕೆಲವು ದಿನಗಳ ಕಾಲ ಸಂಪೂರ್ಣ ರೆಸ್ಟ್ ಮಾಡಬೇಕೆಂದು ಹೇಳಿದ್ದಾರೆ. ಹೀಗಾಗಿ ಬಿಗ್‍ಬಾಸ್ ಕನ್ನಡ 8ನೇ ಸೀಸನ್‍ನ ಈ ವೀಕೆಂಡ್‍ನ ಎಪಿಸೋಡ್‍ನಲ್ಲಿ ನಾನು ಪಾಲ್ಗೊಳ್ಳುವುದಿಲ್ಲ ಎಂದು ಟ್ವೀಟ್ ಮೂಲಕವಾಗಿ ತಿಳಿಸಿದ್ದರು.
ಅಲ್ಲದೆ ಬಿಗ್ ಬಾಸ್ ಕನ್ನಡದ ಕ್ರಿಯೇಟಿವ್ ಟೀಂ ಈ ವೀಕೆಂಡ್‍ನಲ್ಲಿ ವಾರದ ಕತೆ ಕಿಚ್ಚನ ಜೊತೆ ಬದಲಾಗಿ ಯಾವ ರೀತಿಯ ವಿಭಿನ್ನವಾದ ಪ್ಲಾನ್ ಮಾಡಿಕೊಳ್ಳಲಿದೆ ಎಂಬ ಬಗ್ಗೆ ನನಗೂ ಕುತೂಹಲವಿದೆ. ಈ ವಾರದ ಎಲಿಮಿನೇಷನ್ ಪ್ರಕ್ರಿಯೆ ಹೇಗಾಗಲಿದೆ ಎಂಬುದನ್ನು ಕಾದು ನೋಡಿ ಎಂದು ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದರು.