No menu items!
12.4 C
Munich
Wednesday, April 29, 2026

ಮಾಸ್ಕ್ ರೀತಿ ಮುಖಕ್ಕೆ ಬಣ್ಣ ಬಳ್ಕೊಂಡ ಪುಣ್ಯಾತ್ಗಿತ್ತೀರು!

Must read

ಜಕಾರ್ತಾ: ಮುಖಕ್ಕೆ ಮಾಸ್ಕ್ ಧರಿಸದೆ  ಮಾಸ್ಕ್‌ನಂತೆ ಕಾಣುವ ಹಾಗೆ ಮುಖಕ್ಕೆ ಬಣ್ಣವನ್ನು ಬಳಿದು ಅಧಿಕಾರಿಗಳನ್ನು ಫೂಲ್ ಮಾಡಲು ಹೋದ ಇಬ್ಬರು ಯುವತಿಯರು ತಾವೇ ಸಿಕ್ಕಿಬಿದ್ದಿದ್ದಾರೆ.

ಬಾಲಿ ಪ್ರದೇಶದ ಸೋಶಿಯಲ್ ಮೀಡಿಯಾ ಸ್ಟಾರ್‌ಗಳಾದ  ಜೋಶ್ ಪಾಲರ್ ಲಿನ್ ಮತ್ತು ಲಿಯಾಸೆ ಮಾಸ್ಕ್ ಹಾಕುವ ಬದಲು ಮುಖಕ್ಕೆ ಮಾಸ್ಕ್‌ನಂತೆ ಕಾಣುವ ಹಾಗೆ ಬಣ್ಣ ಬಳಿದುಕೊಂಡು ಅಧಿಕಾರಿಗಳಿಗೆ ಫೂಲ್ ಮಾಡಲು ಹೋಗಿದ್ದರು. ಇದನ್ನು ತಿಳಿದ ಪೊಲೀಸರು ಇಬ್ಬರ ಪಾಸ್‍ಪೋರ್ಟ್ ವಶಪಡಿಸಿಕೊಂಡಿದ್ದಾರೆ.

ಮಾಸ್ಕ್ ಇಲ್ಲದೆ ಇಬ್ಬರು ಸೂಪರ್ ಮಾರ್ಕೇಟ್‍ಗೆ ಹೋಗಿದ್ದಾರೆ. ಅಲ್ಲಿನ ಸೆಕ್ಯುರಿಟಿ ಇವರನ್ನು ತಡೆದಿದ್ದಾನೆ. ನಂತರ ಅಲ್ಲಿಂದ ವಾಪಸ್ಸಾದ ಈ ಇಬ್ಬರು ಮುಖಕ್ಕೆ ಬಣ್ಣ ಬಳಿದುಕೊಂಡು ಮತ್ತೆ ಅದೇ ಮಾರ್ಕೇಟ್‍ ಗೆ ಹೋದಾಗ ಅಲ್ಲಿದ್ದ ಸೆಕ್ಯುರಿಟಿ ಈ ಇಬ್ಬರನ್ನು ಒಳಗಡೆಬಿಟ್ಟಿದ್ದಾನೆ. ನಂತರ ಇವರು ಪೋಲೀಸ್ ಅಧಿಕಾರಿಯ ಬಳಿ ಸಿಕ್ಕಿಬಿದ್ದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ವೀಡಿಯೋ ಹರಿದಾಡುತ್ತಿದೆ.

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article