ಈ ಸ್ಮಾರ್ಟ್‍ಫೋನ್ ಯುಗದಲ್ಲಿ ಬ್ಯಾಂಕಿಂಗ್ ವ್ಯವಹಾರ ಕೂಡ ನಮ್ಮ ಬೆರಳ ತುದಿಯಲ್ಲಿದೆ. ಇವತ್ತು ಪ್ರತಿಯೊಬ್ಬ ಸ್ಮಾರ್ಟ್‍ಫೋನ್ ಬಳಕೆದಾರನೂ ಈ ಮೊಬೈಲ್‍ಬ್ಯಾಕಿಂಗ್‍ಗೆ ಡಿಪೆಂಡ್ ಆಗಿದ್ದಾರೆ. ಇಲ್ಲಿನೋಂದಣಿಯಾದ (ರಿಜಿಸ್ಟರ್) ಮೊಬೈಲ್ ಸಂಖ್ಯೆ ಬಹುಮುಖ್ಯವಾಗುತ್ತದೆ. ಅಂದರೆ ನಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಅನುಗುಣವಾಗಿ ಮೊಬೈಲ್ ಬ್ಯಾಕಿಂಗ್ ಸೌಲಭ್ಯ ದೊರೆಯುತ್ತದೆ. ಹೀಗೆ ಬೆರಳ ತುದಿಯಲ್ಲಿ ಲಭ್ಯವಾಗುವ ಬ್ಯಾಕಿಂಗ್ ಸೇವೆಯಿಂದ ಬಹಳಷ್ಟು ಅನುಕೂಲಗಳಿವೆ. ಇದರಲ್ಲಿ ಎರಡು ಮಾತಿಲ್ಲ. ಆದರೆ, ಅಷ್ಟೇ ಅನಾನೂಕೂಲವೂ ಇದೆ..! ನಿಮ್ಮ ಅಕೌಂಟ್‍ನಲ್ಲಿನ ಹಣವನ್ನು ಕಳ್ಳರು ಯಾವಾಗ ಬೇಕಾದರೂ ಎತ್ತಬಹದು! ಎಚ್ಚರ..
ಹೌದು, ಸಿಮ್‍ನಲ್ಲಿ ಅಡಗಿರುವ ನಮ್ಮ ಬ್ಯಾಕಿಂಗ್ ವ್ಯವಹಾರದ ಮಾಹಿತಿ, ಮತ್ತಿತರ ವೈಯಕ್ತಿಕ ದಾಖಲೆ, ವಿಷಯಗಳು ಭದ್ರವಾಗಿರುತ್ತವೆ ಎನ್ನುವ ಭ್ರಮೆ ಇದ್ದರೆ ಆ ಭ್ರಮೆಯಿಂದ ಕೂಡಲೇ ಹೊರ ಬನ್ನಿ..!
ಇಲ್ಲಿ ಹಣ ಕಳೆದುಕೊಂಡ ಮಹಿಳೆಯೊಬ್ಬಳ ಕತೆ ಇದೆ.. ಇದನ್ನು ಓದಿದ ಮೇಲಾದರೂ ಬೆರಳ ತುದಿಯಲ್ಲಿ ಇರುವ ಬ್ಯಾಕಿಂಗ್ ಸೇವೆ ಬಗ್ಗೆ ಯೋಚಿಸಿ.
ಅವರು ಮುಂಬೈನ 72 ವರ್ಷದ ಮಹಿಳೆ. ಇತ್ತೀಚೆಗೆ ಅವರಿಗೊಂದು ಮೊಬೈಲ್ ಸಂದೇಶ ಬರುತ್ತೆ. ಅದು ಅವರು ಹಣ ಇಟ್ಟಿದ್ದ ಬ್ಯಾಂಕ್‍ನಿಂದ! ಆ ಸಂದೇಶದಲ್ಲಿ ಅವರ ಅಕೌಂಟ್‍ನಿಂದ 11 ಲಕ್ಷ ವಿತ್‍ಡ್ರಾ ಆಗಿದೆ ಎಂಬ ವಿಷಯ ಗೊತ್ತಾಗುತ್ತೆ. ಅಂದ್ರೆ ನಿಮ್ಮ ಅಕೌಂಟ್‍ನಿಂದ 11 ಲಕ್ಷ ರೂ ವಿತ್‍ಡ್ರಾ ಮಾಡಿದ್ದೀರಿ ಎಂಬ ಸಂದೇಶ ಬಂದಿರುತ್ತೆ! ಆಮೇಲೆ ಅದನ್ನು ವಿಚಾರಿಸಿದಾಗ ಕನ್ಫರ್ಮ್ ಆಗುತ್ತೆ. ಅವಳ ಅಕೌಂಟ್‍ನಿಂದ ಅಷ್ಟೊಂದು ಹಣ ವಿತ್‍ಡ್ರಾ ಆಗಿದ್ದು ಹೌದು! ಆ ಹಣವನ್ನು ಕದ್ದವನು ಫ್ಲೈಟ್ ಟಿಕೇಟ್ ಬುಕ್ ಮಾಡಲು ಬಳಸಿಕೊಂಡಿದ್ದ!
ಹೀಗೆ ಈಕೆಗೇ ಗೊತ್ತಾಗದಂತೆ ಹಣ ಹೇಗೆ ಅಕೌಂಟ್‍ನಿಂದ ಹೋಯ್ತು?
ಆ ಕಳ್ಳ “ಸಿಮ್ ಕ್ಲೋನಿಂಗ್’ ಮೂಲಕ ಹಣ ಎಗರಿಸಿದ್ದ! ಈ ಸಿಮ್ ಕ್ಲೊನಿಂಗ್ ಎನ್ನುವುದು ಒಂದು ಸೈಬರ್ ಕ್ರೈಂ. ನಿಮ್ಮ ನೋಂದಾಯಿತ ಸಿಮ್‍ನ್ನು ನೀವು ಬಳಸುತ್ತಿದ್ದಂತೆಯೇ ಡೂಪ್ಲಿಕೇಟ್ ಮಾಡಿ ಬಳಸುವುದೇ ಈ ಮೋಸ! ವಿಶೇಷ ಸಾಫ್ಟ್ ವೇರ್ ಬಳಸಿ ನಿಮ್ಮ ಸಿಮ್ ಅನ್ನು ಈ ರೀತಿ ಮೋಸ ಮಾಡುತ್ತಾರೆ. ನಿಮ್ಮ ಸಿಮ್‍ನಲ್ಲಿನ ಎಲ್ಲಾ ಮಾಹಿತಿಯನ್ನು ಕಳ್ಳರು ಪಡೆಯುತ್ತಾರೆ. ಅದೇರೀತಿ ಬ್ಯಾಂಕಿಂಗ್ ಮಾಹಿತಿ ಕೂಡ. ಇದರಿಂದ ನಿಮ್ಮ ಅಕೌಂಟ್‍ನಲ್ಲಿ ನ ಹಣವನ್ನೂ ಕೂಡ ವಿತ್‍ಡ್ರಾ ಮಾಡಬಹದು. ಇದೇ ರೀತಿ ಮುಂಬೈನ ಮಹಿಳೆಯ ಸಿಮ್ ಕ್ಲೋನಿಂಗ್ ಮಾಡಿ ಅವರ ಅಕೌಂಟ್‍ನಿಂದ 11 ಲಕ್ಷ ದೋಚಿರೋದು. ಹೀಗೆ ಆಧುನಿಕ ತಂತ್ರಜ್ಞಾನ ಬೆಳೆದಂತೆ ಕಳ್ಳರಿಗೆ ಕೂತಲ್ಲೇ ಕಳ್ಳತನ ಮಾಡುವ ಅವಕಾಶವೂ ಸಿಕ್ಕಿದೆ..! ಇದರಿಂದ ನಾವು ಬಚಾವ್ ಆಗಲು ಎಷ್ಟು ಎಚ್ಚರದಿಂದ್ದರೂ ಸಾಕಾಗಲ್ಲ!
ಅದಕ್ಕಾಗಿ ನೀವೇನ್ ಮಾಡ್ಬೇಕು?
ಆಗಾಗ ಮೊಬೈಲ್ ಬಿಲ್ ಚೆಕ್ ಮಾಡ್ತಾ ಇರಿ. ಒಂದು ವೇಳೆ ನಿಮ್ಮ ಫೋನ್‍ನಿಂದ ಅಪರಿಚಿತ ಸಂಖ್ಯೆಗೆ ಕರೆ ಮಾಡಿದ್ದರೆ, ಅದನ್ನು ನೀವು ಗುರುತಿಸಲು ಸಾಧ್ಯ ಆಗದಿದ್ದರೆ ಕೂಡಲೇ ನಿಮ್ಮ ಬ್ಯಾಂಕಿಗೆ ಹೋಗಿ. ನಿಮಗೆ ತಿಳಿಯದ ಚಟುವಟಿಕೆಗಳು ನಡೆದಿದ್ದರೆ ಕೂಡಲೇ ನೀವು ಬ್ಯಾಂಕ್ ಅಕೌಂಟ್ ಡೀಟೆಲ್ಸ್‍ಗೆ ನೀಡಿರುವ ಮೊಬೈಲ್ ಸಂಖ್ಯೆಯನ್ನು ಬದಲಾಯಿಸಿ. ಜೊತೆಗೆ ಆ್ಯಂಟಿ ವೈರಸ್ ಸಾಫ್ಟ್ ವೇರ್ ಬಳಸಿ. ಸಂಕೀರ್ಣ (ಕಾಂಪ್ಲಿಕೇಟೆಡ್) ಪಾಸ್‍ವರ್ಡ್ ಬಳಸಿ. ಸಾಮಾಜಿಕ ಜಾಲತಾಣಗಳಲ್ಲಿ ನಿಮ್ಮ ಮೊಬೈಲ್ ಸಂಖ್ಯೆ ಹೈಡ್ ಮಾಡಿ ಅಥವಾ ಬನಮೂದಿಸದಿರಿ. ಇವೆಲ್ಲದರ ಜೊತೆ ಕೆಲವೊಮ್ಮೆ +92,+90 ಮತ್ತು +09 ಈ ನಂಬರ್‍ಗಳಿಂದ ಆರಂಭವಾಗು ಮೊಬೈಲ್ ಸಂಖ್ಯೆಯಿಂದ ಬರುವ ಕರೆಗಳಿಂದ ದೂರ ಇರಿ. ಅವುಗಳನ್ನು ನಿರ್ಲಕ್ಷಿಸಿ.
- ರಘು ಭಟ್
POPULAR STORIES :
ಕನ್ನಡದ ಖ್ಯಾತ ನಟ ಭಿಕ್ಷುಕನ ಗೆಟಪ್‍ನಲ್ಲಿ ಸಂಪಾದಿಸಿದ್ದು ಎಷ್ಟು ಗೊತ್ತಾ..?
ವಿರಾಟ್ ಕೊಹ್ಲಿ ವೆಡ್ಸ್ ಅನುಷ್ಕಾಶರ್ಮಾ…!
ಮೊದಲ ಪಂದ್ಯದಲ್ಲೆ ರನ್ ಹೊಳೆ ಹರಿಸಿದ ನಮ್ಮ 5 ಆಟಗಾರರಿವರು..!
181 ಸದಸ್ಯರಿರುವ ವಿಶ್ವದ ದೊಡ್ಡಕುಟುಂಬ! ಈ ಕುಟುಂಬದ ಎಲ್ಲಾ ಸದಸ್ಯರಿಗೂ ಒಂದೇ ನಿವಾಸ!
ಒಂದೇ ಬಾಲಿಗೆ 286 ರನ್ ಬಾರಿಸಿದ ಕಥೆ..!
ಪೆಟ್ರೋಲ್ ಬಂಕ್‍ನಲ್ಲಿ ಯಾವೆಲ್ಲಾ ಸೇವೆ, ಸೌಲಭ್ಯ ಉಚಿತವಾಗಿರಬೇಕು ಗೊತ್ತಾ?